Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ತಮಿಳು ನಟ ವಿಜಯ್ ಮಗಳು ಆತ್ಮಹತ್ಯೆ : 16 ವರ್ಷಕ್ಕೆ‌ ಯಾಕಿಂತ ನಿರ್ಧಾರ..?

---Advertisement---

 

 

ಚೆನ್ನೈ: ತಮಿಳಿನ ನಟ, ನಿರ್ದೇಶಕ ವಿಜಯ್ ಆಂಟೋನಿ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಳ್ವಾರಪೇಟೆಯಲ್ಲಿರುವ ತಮ್ಮ‌ನಿವಾಸದಲ್ಲಿಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೀರಾ ಆತ್ಮಹತ್ಯೆ ಮಾಡಿಕೊಂಡ ಯುವತಿ.

ಮೀರಾಳನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ ಕೂಡಲೇ, ಮನೆಯವರು ಆಕೆಯನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದ್ದರು. ಅಷ್ಟರಲ್ಲಾಗಲೇ ಮೀರಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೀರಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಚೆನ್ನೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮೀರಾ ಸೆಕೆಂಡ್ ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿದ್ದಳು. ವಯಸ್ಸಿನ್ನು ಕೇವಲ 16 ವರ್ಷ. ಈ ಸಂಬಂಧ ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯ್ ಆಂಟೋನಿಗೆ ಮೀರಾ ಮತ್ತು ಲಾರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಚಿಕ್ಕಮಗಳು ಮೀರಾ ಆತ್ಮಹತ್ಯೆ ಮಾಡಿಕೊಂಡು, ಜೀವನವನ್ನೆ ಕೊನೆಯಾಗಿಸಿಕೊಂಡಿದ್ದಾಳೆ.

ವಿಜಯ್ ಆಂಟೋನಿ ತಮಿಳಿನ ಜನಪ್ರಿಯ ಸಂಗೀತ ಸಂಯೋಜಕ, ಹಾಡುಗಾರ, ನಟ, ನಿರ್ದೇಶಕರಾಗಿ ಗುರುತಿಸಿಕೊಂವರು. ಹಲವು ವರ್ಷಗಳಿಂದ ಇಂಡಸ್ಟ್ರಿರುವ ವಿಜಯ್ ಆಂಟೋನಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪಿಚ್ಚಕಾರನ್, ಪಿಚ್ಚಕಾರನ್ 2, ಸೈತಾನ್, ಕಾಳಿ, ಕೊಲೆಗಾರನ್, ಕುಡಿ ಒರುವನ್, ತಮಿಳ್ ಅರಸನ್ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment