ಸುದ್ದಿಒನ್, ಬೆಂಗಳೂರು : ಸದ್ಯ ರಾಜ್ಯದಲ್ಲೆಲ್ಲಾ ಜೈಲರ್ ಸದ್ದು ಜೋರಾಗಿದೆ. ರಿಲೀಸ್ ಆಗಿ ಹಲವು ದಿನಗಳಾದರೂ ತನ್ನ ನಾಗಲೋಟ ಮುಂದುವರೆಸಿದ. ರಜನೀಕಾಂತ್ ಫ್ಯಾನ್ಸ್, ಶಿವಣ್ಣನ ಫ್ಯಾನ್ಸ್ ಅಂತು ಸಿನಿಮಾ ನೋಡಿ ನೋಡಿ ಖುಷಿ ಪಡುತ್ತಿದ್ದಾರೆ. ಬಹುಪರಾಕ್ ಹಾಕುತ್ತಿದ್ದಾರೆ. ಸಿನಿಮಾ ಇಷ್ಟು ಹೈಪ್ ಕ್ರಿಯೇಟ್ ಮಾಡಿರುವ ಬೆನ್ನಲ್ಲೇ ರಜನೀಕಾಂತ್ ಅಭಿಮಾನಿಗಳ ಮುಂದೆ ಬಂದರೆ ಹೇಗಿರುತ್ತೆ..?
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಿಎಂಟಿಸಿ ಡಿಪೋಗೆ ಭೇಟಿಕೊಟ್ಟ ಸೂಪರ್ ಸ್ಟಾರ್ ರಜನೀಕಾಂತ್..!https://t.co/g6cGCvTNna pic.twitter.com/7T5ymAk5S6
— suddione-kannada News (@suddione) August 29, 2023
ಇಂದು ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ದಿಢೀರನೇ ಬೆಂಗಳೂರಿನ ಜಯನಗರಕ್ಕೆ ಭೇಟಿ ನೀಡಿದ್ದಾರೆ. ಜಯನಗರ 4th ಬ್ಲಾಕ್ ನಲ್ಲಿರುವ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ್ದಾರೆ. ರಜನೀಕಾಂತ್ ಅವರನ್ನು ಕಂಡ ಬಿಎಂಟಿಸಿ ಡಿಪೋ ಸಿಬ್ಬಂದಿಗಳು ಫುಲ್ ಖುಷಿಯಾಗಿದ್ದಾರೆ. ಎಲ್ಲರೂ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ರಜನೀಕಾಂತ್ ಅವರು ಕೂಡ ಡಿಪೋದಲ್ಲೆಲ್ಲ ಓಡಾಡಿ, ಅಲ್ಲಿನ ಸಿಬ್ಬಂದಿಗಳನ್ನೆಲ್ಲಾ ಮಾತನಾಡಿಸಿದ್ದಾರೆ. ರಜನೀಕಾಂತ್ ಅವರಿಗೆ ಆ ಜಾಗ ತುಂಬಾ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಈ ಮೊದಲು ಬೆಂಗಳೂರಿನಲ್ಲಿಯೇ ಬಸ್ ಕಂಡಕ್ಟರ್ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲನೆ ಮಾಡಿದ್ದಾರೆ. ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಜೈಲರ್ ಸಕ್ಸಸ್ ಬೆನ್ನಲ್ಲೇ ತಮ್ಮ ಡಿಪೋ ನೆನಪಾಗಿದೆ. ಹೀಗಾಗಿ ಜಯನಗರದ ಡಿಪೋಗೆ ಭೇಟಿ ನೀಡಿ, ಸಂತಸಗೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಗಳು ಕೂಡ ರಜನೀಕಾಂತ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಡಿಪೋದಲ್ಲಿ ತೆಗೆಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















