Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಲಗಿದ್ದವರು ಎದ್ದಿಲ್ಲ : ಅತ್ತಿಗೆ ಸಾವಿನ ಬಗ್ಗೆ ಶ್ರೀಮುರುಳಿ ಕಣ್ಣೀರು

---Advertisement---

 

ಬೆಂಗಳೂರು: ಪತ್ನಿ ಸ್ಪಂದನಾ ಜೊತೆಗೆ ವಿಜಯ್ ರಾಘವೇಂದ್ರ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ನಿನ್ನೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ಬೆಳಗ್ಗೆ ಸ್ಪಂದನಾ ಸ್ಥಿತಿ ಗಂಭೀರವಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ ನಲ್ಲಿಯೇ ಸ್ಪಂದನಾ ಮೃತದೇಹದ ಪೋಸ್ಟ್ ಮಾಟಂ ಮಾಡಲಾಗುತ್ತಿದೆ. ಥೈಲ್ಯಾಂಡ್ ನಲ್ಲಿ ವೈದ್ಯಕೀಯ ಕಾರ್ಯವಿಧಾನ ಮುಗಿಸಿ ನಾಳೆ ಬೆಂಗಳೂರಿಗೆ ಮೃತದೇಹ ಬರುವ ಸಾಧ್ಯತೆ ಇದೆ.

ಮಲ್ಲೇಶ್ವರಂನಲ್ಲಿವ ಸ್ಪಂದನಾ ತಂದೆ ಬಿಕೆ ಶಿವರಾಮ್ ಮನೆಯಲ್ಲಿ ಮುರುಳಿ ಮತ್ತು ಸ್ಪಂದನಾ ಮಗ ಶೌರ್ಯ ಇದ್ದಾರೆ‌‌. ವಿಷಯ ತಿಳಿದು ಆತಂಕಗೊಂಡಿದ್ದಾರೆ. ಮನೆಯವರಿಗೆ ಸಮಧಾನ ಮಾಡುವುದಕ್ಕೆ ರಾಜಕೀಯ ಗಣ್ಯರು ಆಗಮಿಸಿದ್ದಾರೆ. ಈಗಾಗಲೇ ಬಿಕೆ ಹರಿಪ್ರಸಾದ್, ಮುನಿರತ್ನ ಅವರು ಮನೆಗೆ ಬಂದು ಸಾಂತ್ವಾನ ಹೇಳಿದ್ದಾರೆ.

ಅತ್ತಿಗೆ ಸಾವಿನ ಬಗ್ಗೆ ಶ್ರೀ ಮುರುಳಿ ಮಾತನಾಡಿದ್ದು, ಅಣ್ಣಾ ಫೋನ್ ಮಾಡಿ ಹೇಳಿದ್ರು. ಮಲಗಿದ್ದೋರು ಎದ್ದೇಳಿಲ್ಲ. ಲೋ ಬಿಪಿ ಅಂತಾ ತಿಳಿದಿದೆ. ಸಾವು ಆಗಿರಯವುದು ನಿಜ. ಬೇರೆನೂ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ಏನೂ ಹೇಳುವುದಕ್ಕೆ ಈಗ ಆಗುತ್ತಿಲ್ಲ. ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ ಎಂದಿದ್ದಾರೆ.

ಇನ್ನು ಸ್ಪಂದನಾ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಮಾತನಾಡಿ, ಸ್ಪಂದನ ತನ್ನ ಕಸಿನ್ಸ್‌ ಜೊತೆ ಟ್ರಿಪ್ ಹೋಗಿದ್ರು. ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದಿಲ್ಲ. ರಾತ್ರಿನೇ ವಿಷಯ ಗೊತ್ತಾ ಆಯ್ತು. ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ ವಿಷಯ ಗೊತ್ತಾಗುತ್ತೆ. ಯಾವುದೇ ರೀತಿ ಊಹಾಪೋಹಾಗಳನ್ನು ಹಬ್ಬಿಸಬೇಡಿ. ನಾನು ಬ್ಯಾಂಕಾಕ್‌ಗೆ ಹೋಗ್ತೀನಿ. ಪೋಸ್ಟ್ ಮಾರ್ಟಂ ಆದ ನಂತರ ನಾಳೆ ಮೃತದೇಹ ಬರುತ್ತೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment