Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜ್ಞಾನ  ಬಳಸಿಕೊಂಡು ಮೌಢ್ಯಗಳನ್ನು ಓಡಿಸಿ : ಹೆಚ್.ಎಸ್.ಟಿ. ಸ್ವಾಮಿ

---Advertisement---

ವರದಿ ಮತ್ತು ಫೋಟೋ ಕೃಪೆ

ವೇದಮೂರ್ತಿ, ಭೀಮಸಮುದ್ರ,
ಮೊ :  9880836505

ಸುದ್ದಿಒನ್, ಚಿತ್ರದುರ್ಗ, (ಜು.15) :  ಮಕ್ಕಳಿಗೆ ವಿಜ್ಞಾನವೇ ಜಗತ್ತು. ವಿಜ್ಞಾನವಿಲ್ಲವೆಂದರೆ ಜಗತ್ತಿಲ್ಲ. ವಿಜ್ಞಾನ  ಬಳಸಿಕೊಂಡು ಮೌಢ್ಯಗಳನ್ನು ಓಡಿಸಿ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕಾರ್ಯಕಾರಿ ಸದಸ್ಯರಾದ ಹೆಚ್.ಎಸ್.ಟಿ. ಸ್ವಾಮಿ ಮಕ್ಕಳಿಗೆ ಕರೆ ನೀಡಿದರು.

ತಾಲ್ಲೂಕಿನ ಭೀಮಸಮುದ್ರದ ಶ್ರೀ ಭೀಮೇಶ್ವರ ಗ್ರಾಮಾಂತರ ಶಾಲೆಯಲ್ಲಿ ಕಿರುವಿಜ್ಞಾನ ಕೇಂದ್ರ ಹಾಗೂ ಕಂಪ್ಯೂಟರ್  ಕೊಠಡಿ ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭೀಮೇಶ್ವರ ಶಾಲೆಯ ಅಧ್ಯಕ್ಷರಾದ ಬಿ.ಟಿ. ಪುಟ್ಟಪ್ಪ ಮಾತನಾಡಿ ಶಾಲಾ ಮಕ್ಕಳು ಉತ್ತಮವಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು. ತಂದೆ ತಾಯಿ ಕಷ್ಟ ಪಟ್ಟು ನಿಮ್ಮನ್ನು ಓದಿಸುತ್ತಾರೆ. ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರಬೇಕೆಂದು ಮಕ್ಕಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ 8ನೇ ತರಗತಿ ಉಚಿತ ಸಮವಸ್ತ್ರ ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಬಿಕೆ ಕಲ್ಲಪ್ಪ,  ಸ್ಟೇಮ್ ಲರ್ನಿಂಗ್ ಸಂಸ್ಥೆಯ ಮಹೇಶ, ವೇದಾಂತ ಲಿಮಿಟೆಡ್‌ನ ರವಿ ಬಿಸಿಗುಪ್ಪ, ಹಾಗೂ ಭಾಗ್ಯಜ್ಯೋತಿ ಅವರು ಭಾಗವಹಿಸಿದ್ದರು.

ಇದೆ ಶಾಲೆಯಲ್ಲಿ ಸುಮಾರು ಐದು ವರ್ಷಗಳ ಕಾಲ ಮುಖ್ಯೋಪಾಧ್ಯರಾಗಿ ಕಾರ್ಯನಿರ್ವಹಿಸಿ ಮಂಜುನಾಥಾಚಾರಿ ಎಸ್. ಹಾಗೂ ಮುಖ್ಯೋಪಾಧ್ಯಯ ಪ್ರಕಾಶ್, ಸ್ಥಲಹಾ ಸಮಿತಿಯ ಸದಸ್ಯರಾದ ದೇವಕುಮಾರ್ ಹಾಗೂ ಶಾಲೆಯ ಎಲ್ಲ ನೌಕರವರ್ಗದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment