Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತೀಯ ಬಾಣಸಿಗರ ದಾಖಲೆ‌ ಮುರಿದ ನೈಜೀರಿಯಾದ ಹಿಲ್ಡಾ ಬಸ್ಸಿ : ದಾಖಲೆ ಬರೆಯಲು ಮಾಡಿದ್ದೇನು..?

---Advertisement---

 

 

ದಾಖಲೆಯಲ್ಲಿ ನಮ್ಮದೊಂದು ಹೆಸರಿರಬೇಕು ಎಂಬುದು ಅದೆಷ್ಟೋ ಜನರ ಕನಸಾಗಿರುತ್ತೆ. ಆ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆಂದೆ ಪರಿಶ್ರಮ ಹಾಕುತ್ತಾರೆ. ಇದೀಗ ನೈಜಿರಿಯಾದ ಒಬ್ಬ ಮಹಿಳೆ ಅಡುಗೆ ಮಾಡುವ ವಿಚಾರಕ್ಕೆ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಅದು ಒಂದಲ್ಲ ಎರಡಲ್ಲ, 100 ಗಂಟೆಗಳ ಕಾಲ ಅಡುಗೆ ಮಾಡಿ ಹೊಸ ದಾಖಲೆ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಭಾರತೀಯ ಮಹಿಳೆಯ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

2019ರಲ್ಲಿ ಭಾರತೀಯ ಬಾಣಸಿಗರಾದ ಲತಾ ಟಂಡನ್ ಅವರು ನಾನ್ ಸ್ಟಾಪ್ ಆಗಿ ಅಡುಗೆ ಮಾಡಿದ್ದರು. 87 ಗಂಟೆ 45 ನಿಮಿಷಗಳ ಕಾಲ ಅಡುಗೆ ಮಾಡಿ ದಾಖಲೆ‌ ಬರೆದಿದ್ದರು. ಆದರೆ ಇದೀಗ ಈ ದಾಖಲೆಯನ್ನು ನೈಜೀರಿಯಾದ ಹಿಲ್ಡಾ ಬಸ್ಸಿ ದಾಖಲೆ ಮುರಿದಿದ್ದಾರೆ.

ಹಿಲ್ಡಾ ಬಸ್ಸಿ 100 ಗಂಟೆಗಳ ಕಾಲ ಅಡುಗೆ ಮಾಡಿ ದಾಖಲೆ ಬರೆದಿದ್ದಾರೆ. ಪ್ರತಿ ಗಂಟೆಗೆ ಐದು‌ ನಿಮಿಷಗಳ ಮಾತ್ರ ವಿಶ್ರಾಂತಿ ಪಡೆಯುತ್ತಿದ್ದರು. 12 ಗಂಟೆಗಳ ಬಳಿಕ ಕೇವಲ ಒಂದು ಗಂಟೆಯಲ್ಲಿ ಸ್ನಾನ ಮತ್ತು ವೈದ್ಯಕೀಯ ತಪಾಸಣೆ ಮುಗಿಸುತ್ತಿದ್ದರು. ಸೂಪ್, ಸ್ಪ್ಯೂ ಮತ್ತು ಪಶ್ಚಿಮ ಆಫ್ರಿಕಾದ ಫೇಮಸ್ ರೈಸ್ ಜೊಲೊಫ್ ರೈಸ್ ಸಿದ್ಧ ಮಾಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...