Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾರ್ಮಿಕರ ಕೈಗಳಲ್ಲಿ ದೇಶದ ಬಲ: ಸೌಲಭ್ಯಗಳ ಸದುಪಯೋಗಕ್ಕೆ ಮಹತ್ವದ ಕರೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಮೇ. 02 : ಸರ್ಕಾರ ಕಾರ್ಮಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದೆ ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವುದರ ಮೂಲಕ ನೀವು ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಿ.ಬಗಟಿ ಕಾರ್ಮಿಕ ವರ್ಗದವರಿಗೆ ಕರೆ ನೀಡಿದರು.
ಚಿತ್ರದುರ್ಗ ನಗರದ ಮೆಜೆಸ್ಟಿಕ್ ವೃತ್ತದಲ್ಲಿನ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾಪಡೆ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ, ಬುದ್ದ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಗಲು ಇರುಳು ದುಡಿಯುವ ಕಾರ್ಮಿಕ ವರ್ಗದವರಿಗೆ ಸರ್ಕಾರ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದೆ ಇವುಗಳ ಮಾಹಿತಿಯನ್ನು ಪಡೆಯುವುದರ ಮೂಲಕ ನಿಮ್ಮ ಸಂಘದ ಮೂಲಕವಾಗಲಿ, ವೈಯುತ್ತಿಕವಾಗಲಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆಯಲು ಅರ್ಹರಾಗುತ್ತಾರೆ, ಕಾರ್ಮಿಕ ಕಾರ್ಡ ಪಡೆಯುವುದರ ಮೂಲಕ ಸರ್ಕಾರದ ಯಾವುದಾದರೂ ಯೋಜನೆ ಪಡೆಯಬೇಕಾದರೆ ಕಾರ್ಡ ಚಾಲ್ತಿಯಲ್ಲಿ ಇರಬೇಕಿದೆ ಚಾಲ್ತಿಯಲ್ಲಿ ಇಲ್ಲದ ಕಾರ್ಡಗೆ ಯಾವುದೇ ರೀತಿಯ ಸರ್ಕಾರ ಸೌಲಭ್ಯ ಸಿಗವುದಿಲ್ಲ ಎಂದು ತಿಳಿಸಿದರು.
ಸರ್ಕಾರ ಸಂಘಟಿತರಿಗೆ ಮತ್ತು ಆಸಂಘಟಿತರಿಗೆ ವಿವಿಧ ರಿತೀಯ ಸೌಲಭ್ಯಗಳನ್ನು ನೀಡಿದೆ. ನಮ್ಮ ಇಲಾಖೆಯಲ್ಲಿ ವಿವಿಧ ರೀತಿಯ ಯೋಜನೆಗಳು ಇವೆ, ಇವುಗಳ ಮಾಹಿತಿಯನ್ನು ಪಡೆಯುವುದರ ಮೂಲಕ ನಿಮಗೆ ಅರ್ಹವಾದ ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ, ಇಂದಿನ ದಿನಮಾನದಲ್ಲಿ ಕಾರ್ಮಿಕರಲಿಲ್ಲದೆ ಏನು ಸಹಾ ನಡೆಯುವುದಿಲ್ಲ ನಮ್ಮಲ್ಲಿ ಎಷ್ಟೇ ಯಂತ್ರಗಳು ಬಂದರೂ ಸಹಾ ಕಾರ್ಮಿಕರ ಅಗತ್ಯ ಇದ್ದೇ ಇರುತ್ತದೆ, ಕಾರ್ಮಿಕರಿಲ್ಲದೆ ನಮ್ಮ ಕೆಲಸಗಳು ಆಗುವುದಿಲ್ಲ ಈ ಹಿನ್ನಲೆಯಲ್ಲಿ ಕಾಮೀಕರಿಗಾಗಿ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿದೆ ಅದರ ಸದುಪಯೋಗವನ್ನು ಪಡೆಯುವಂತೆ ಅನಿಲ್ ಬಿ.ಬಗಟಿ ಕರೆ ನೀಡಿದರು.
ಸಾಹಿತಿಗಳಾದ ಆನಂದಕುಮಾರ್ ಮಾತನಾಡಿ, ಇಂದು ಕಾರ್ಮಿಕ ಮತ್ತು ಬುದ್ದ ದಿನಾಚರಣೆಗಳು ಒಟ್ಟಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ, ಬುದ್ದ 1200 ವರ್ಷಗಳ ಹಿಂದೆಯೇ ಜನಿಸಿ ವಿವಿಧ ರೀತಿಯ ತತ್ವಗಳನ್ನು ನೀಡಿದ್ದಾರೆ ಅವುಗಳು ಇಂದಿಗೂ ಸಹಾ ನಮಗೆ ಮಾಗದರ್ಶನವಾಗಿದೆ, ಬುದ್ದ ಅಸ್ಪøಶ್ಯತೆಯನ್ನು ತೂಡೆದು ಹಾಕಲು ಪ್ರಯತ್ನವನ್ನು ಮಾಡಿದರು, ಆದರೆ ಈಗಲೂ ಸಹಾ ಅದು ಇದೆ, ಎಂದ ಅವರು ಅದೇ ರೀತಿ ಕಾಮೀಕರೂ ಸಹಾ ನಮ್ಮ ಜೀವನದಲ್ಲಿ ಅಗತ್ಯವಾಗಿ ಇದ್ದಾರೆ ನಮ್ಮ ಬದುಕಿನಲ್ಲಿ ಕಾರ್ಮಿಕರು ಇಲ್ಲದಿದ್ದರೆ ನಮ್ಮ ಬದುಕೇ ನಡೆಯುವುದಿಲ್ಲ, ಪರಿಸರವನ್ನು ಎಲ್ಲರು ಕಾಪಾಡಬೇಕಿದೆ ನಮಗೆ ಕೊಲ್ಲುವುದಕ್ಕೆ ಯಾವುದೆ ಹಕ್ಕು ಇಲ್ಲವಾಗಿದೆ, ಆದರೆ ಸಂರಕ್ಷಣೆಯನ್ನು ಮಾಡುವುದು ನಮ್ಮ ಹಕ್ಕಾಗಬೇಕಿದೆ. ಪರಿಸರವನ್ನು ಕಾಪಾಡುವುದರ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆಯನ್ನು ಮಾಡಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಕಾಂತ ಮಾತನಾಡಿ, ಹಿಂದಿನ ಕಾಲದಲ್ಲಿ ಬೇಸಿಗೆ ರಜೆ ಎಂದರೆ ಬಹುತೇಕ ಎಲ್ಲರು ಅಜ್ಜಿ ಮನೆಗೆ ಹೋಗುತ್ತಿದ್ದರು, ಆದರೆ ಇಂದಿನ ದಿನಮಾನದಲ್ಲಿ ರಜೆ ಎಂದರೆ ಸಾಕು ಶಿಬಿರಗಳಲ್ಲಿ ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ ಈ ರೀತಿಯಾದ ಶಿಬಿರದಲ್ಲಿ ಭಾಗವಹಿಸಿದರೆ ಮಕ್ಕಳ ಜ್ಞಾನ ವೃದ್ದಿಯಾಗುತ್ತದೆ ಅಲ್ಲದೆ ಇಂದಿನ ಸ್ಪರ್ಧಾಯುಗಕ್ಕೆ ಅಗತ್ಯವಾಗಿ ಬೇಕಾದ ಕೌಶಲ್ಯವನ್ನು ಕಲಿಯಲು ಸಹಕಾರಿಯಾಗುತ್ತದೆ. ತಂದೆ-ತಾಯಿಗಳಿಗೆ ನೀಡಿದ ಗೌರವವನ್ನು ಶಿಕ್ಷಕ, ಸೈನಿಕ, ಕಾರ್ಮಿಕರಿಗೆ ನೀಡಿ ಮುಂದಿನ ದಿನದಲ್ಲಿ ನಾವು ಏನಾಗಬೇಕೆಂಬುದನ್ನು ಈಗಲೇ ನಿರ್ಧಾರ ಮಾಡಿ ಅದಕ್ಕೆ ತಕ್ಕ ತಯಾರಿಯನ್ನು ಮಾಡಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್ (ಪಾರ್ಥ) ರಾಜ್ಯ ಕಾರ್ಯದರ್ಶಿ ಕೆ.ಶಿವಕುಮಾರ್, ಗುರುಸ್ವಾಮಿ, ರಾಜಪ್ಪ, ಸಿದ್ದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ಸಂಘದ ಕಚೇರಿಯ ಕೆಳಗಡೆಯಲ್ಲಿ ಜಾನುವಾರು ಹಾಗೂ ಪಕ್ಷಿಗಳಿಗೆ ನೀರನ್ನು ಕುಡಿಯಲು ಬಾನಿಯನ್ನು ನಿರ್ಮಾಣ ಮಾಡಿ ಅದಕ್ಕೆ ನೀರನ್ನು ಹಾಕಲಾಯಿತು. ವಿಜಯಲಕ್ಷ್ಮೀ ಪ್ರಾರ್ಥಿಸಿದರೆ, ಶಿವಕುಮಾರ್ ಸ್ವಾಗತಿಸಿದರು, ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು.
——————————————————
ಚಿತ್ರದುರ್ಗ ಮೇ. 02
ಮೇ. 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪನವರ 50 ವರ್ಷದ ರಾಜಕೀಯ ಜೀವನದ ಅಭಿಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮೇ. 3ರ ಭಾನುವಾರ ಬೆಳಿಗ್ಗೆ 11ಕ್ಕೆ ನಗರದ ಮದಕರಿ ವೃತ್ತದಲ್ಲಿನ ವಾಲ್ಮೀಕಿ ಭವನದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.

ಈ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಸೇರಿದಂತೆ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈ ಸಭೆಗೆ ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ನವರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಲು ಕೋರಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...