Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪೂಜಾ ಗಾಂಧಿ ಚುನಾವಣೆಯಲ್ಲಿ ಸೋತಾಗ ರಮ್ಯಾ ಹೇಳಿದ್ದೇನು..? ರಮೇಶ್‌ ಅರವಿಂದ್‌ ಗೆ ಪತ್ರ ಬರೆದ ನಟಿ

---Advertisement---

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಈಗಾಗಲೇ ಮೊದಲ ಗೆಸ್ಟ್‌ ಯಾರು ಎಂಬುದನ್ನು ಪ್ರೋಮೋ ಮೂಲಕ ತಿಳಿಸಲಾಗಿದೆ. ನಟಿ ರಮ್ಯಾ ಸಾಧಕರ ಖುರ್ಚಿಯಲ್ಲಿ ಕೂತಿದ್ದಾರೆ. ಅವರ ಪ್ರೋಮೋ ನೋಡಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ನಟಿ ರಮ್ಯಾ ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಹೋದಾಗಲೂ ಅಭಿಮಾನಿಗಳು ಕಾಯುತ್ತಿದ್ದರು. ಮತ್ತೆ ಬನ್ನಿ ಎಂದು ಹೇಳಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದಾರೆ. ರಮ್ಯಾ ಅವರಿಗೆ ಅಷ್ಟೇ ಪ್ರೀತಿ ಸಿಗುತ್ತಾ ಇದೆ. ಇದೀಗ ವೀಕೆಂಡ್‌ ವಿತ್‌ ರಮೇಶ್‌ ಪ್ರೋಮೋ ನೋಡಿ ಮಳೆ ಹುಡುಗಿ ಪೂಜಾಗಾಂಧಿ ಪತ್ರ ಬರೆದಿದ್ದಾರೆ.

“ರಮೇಶ್‌ ಸರ್‌, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿನ ಜುಗಲ್‌ ಬಂದಿ ನೋಡುವುದಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನು ಕೂಡ ಕಾತುರದಿಂದ ಕಾಯುತ್ತಾ ಇದ್ದೀನಿ. ರಮ್ಯಾ ಅವರು ಅದ್ಭುತವಾದ ವ್ಯಕ್ತಿ. ಆಕೆ ಸಖತ್‌ ಬೋಲ್ಡ್.

ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ನುಣುಚಿಕೊಳ್ಳುವ ಸ್ವಭಾವ ಅವರದ್ದಲ್ಲ. ನಂಗೆ ವೈಯಕ್ತಿಕವಾಗಿ ಆಕೆ ಯಾಕೆ ಇಷ್ಟ ಆಗುತ್ತಾರೆ ಅಂದರ ಚಿತ್ರರಂಗದ ಇತರ ನಟಿಯರ ಬಗ್ಗೆಯೂ ಅವರು ನಿಲುವು ತೆಗೆದುಕೊಳ್ಳುವ ಗುಣ ಅವರಲ್ಲಿದೆ. ಆಕೆಯಲ್ಲಿನ ಆ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ.

ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ಆಕೆ ಪೂಜಾ ಗಾಂಧಿ ಒಳ್ಳೆಯ ಪ್ರಯತ್ನ ಎಂದು ಹೇಳಿದ್ದರು. ಆ ಮಾತು ನನಗೆ ಈಗಲೂ ಚೆನ್ನಾಗಿ ನೆನಪಿದೆ. ರಮ್ಯಾ ನಿಮ್ಮ ಪ್ರೊಡಕ್ಷನ್‌ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...