Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿರ್ಮಾಪಕರ ವಿರುದ್ಧ ಮಾನನಷ್ಟ ಕೇಸ್: ಕೋರ್ಟ್‌ಗೆ ಹಾಜರಾದ ಕಿಚ್ಚ ಸುದೀಪ್

---Advertisement---

 

ನಟ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ನಿರ್ಮಾಪಕ ಎನ್. ಕುಮಾರ್ ನಡುವಿನ ವಿವಾದ ಮತ್ತೆ ಬೆಳಕಿಗೆ ಬಂದಿದೆ. 2023ರಲ್ಲಿ ಆರಂಭವಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

2023ರಲ್ಲಿ ಸಿನಿಮಾ ಕಾಲ್‌ಶೀಟ್ ನೀಡುವುದಾಗಿ ಹೇಳಿ ಸುದೀಪ್ ₹9 ಕೋಟಿ ಪಡೆದಿದ್ದಾರೆ ಎಂದು ನಿರ್ಮಾಪಕರು ಎಂ.ಎನ್. ಸುರೇಶ್ ಮತ್ತು ಎನ್. ಕುಮಾರ್ ಆರೋಪಿಸಿದ್ದರು. ಈ ಆರೋಪಗಳನ್ನು ತಳ್ಳಿ ಹಾಕಿದ ಸುದೀಪ್, ಅವು ನಿರಾಧಾರವಾಗಿವೆ ಎಂದು ಹೇಳಿ, ಇಬ್ಬರಿಗೂ ಲೀಗಲ್ ನೋಟಿಸ್ ಕಳುಹಿಸಿದ್ದರು. ಜೊತೆಗೆ 10 ದಿನಗಳೊಳಗೆ ಬಹಿರಂಗ ಕ್ಷಮೆಯಾಚನೆ ಸಲ್ಲಿಸಿ ₹10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದರು.

ಆದರೆ, ನೋಟಿಸ್‌ಗೆ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಸುದೀಪ್ ಕ್ರಿಮಿನಲ್ ಹಾಗೂ ಮಾನನಷ್ಟ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಕ್ರಾಸ್ ಎಕ್ಸಾಮಿನೇಷನ್ ಹಿನ್ನೆಲೆಯಲ್ಲಿ ಸುದೀಪ್ ನಿನ್ನೆ ಕೋರ್ಟ್‌ಗೆ ಹಾಜರಾದರು.

ಮಧ್ಯಾಹ್ನ ಸುಮಾರು 3 ಗಂಟೆಗೆ 7ನೇ ಎಸಿಜೆಎಂ ನ್ಯಾಯಾಲಯದಲ್ಲಿ ಹಾಜರಾದ ಸುದೀಪ್ ಅವರನ್ನು ನಿರ್ಮಾಪಕರ ಪರ ವಕೀಲರು ಪ್ರಶ್ನಿಸಿದರು. ನಂತರ, ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜೂನ್ 6ಕ್ಕೆ ಮುಂದೂಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಚುರುಕು; 7,086 ಮತದಾರರಿಗೆ ನೋಟಿಸ್, ಶೇ.50ರಷ್ಟು ವಿಚಾರಣೆ ಪೂರ್ಣ

ಟೈಕ್ವಾಂಡೋ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಅಕಾಡೆಮಿ ವಿದ್ಯಾರ್ಥಿನಿಯರ ಮಿಂಚು : ಚಿನ್ನ ಗೆದ್ದು ರಾಜ್ಯ ಮಟ್ಟಕ್ಕೆ ಹಾಸಿನಿ ಗರಪಟ್ಟಿ ಎ, ಸಾನ್ವಿ ಆಯ್ಕೆ

ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಹೆಚ್.ಕೆ. ಪಾಟೀಲ್ ಖಡಕ್ ಎಚ್ಚರಿಕೆ

ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗೆ ನಿಗಮದಿಂದ ಹಲವು ಯೋಜನೆ : ಕೆ.ವಿ.ರಾಮ್ ಪ್ರಸಾದ್ ಮಾಹಿತಿ

ಚಿತ್ರದುರ್ಗ: ಪ್ರಸನ್ನ ಗಣಪತಿ ಪೂಜಾ ಮಹೋತ್ಸವದಲ್ಲಿ ರಿಚರ್ಡ್ ಲೂಯಿಸ್ ತಂಡದಿಂದ ನಗೆ ಹಬ್ಬ; ಹಾಸ್ಯದ ಹೊಳೆಯಲ್ಲಿ ತೇಲಾಡಿದ ಜನತೆ

ಸಮಾಜ ಸೇವಕ ಜಿ. ಎಂ. ಲವಕುಮಾರ್ ಗೆ ಗೌರವ ಡಾಕ್ಟರೇಟ್ ಗರಿ: ಭೀಮಸಮುದ್ರದಲ್ಲಿ ಸ್ನೇಹಿತರು, ಅಭಿಮಾನಿಗಳಿಂದ ಶುಭ ಹಾರೈಕೆ