Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಧರ್ಮಸ್ಥಳದ ಮಂಜುನಾಥನೇ ನೋಡಿಕೊಳ್ಳಲಿ : ಶಿವರಾಮೇಗೌಡರ ಆಡಿಯೋಗೆ ಹೆಚ್ ಡಿ ರೇವಣ್ಣ ಕ್ಲಾರಿಟಿ..!

---Advertisement---

 

ಹಾಸನ: ಅರಸಿಕೆರೆ ಶಾಸಕ ಶಿವಲಿಂಗೇಗೌಡ ಅವರು ಕಳೆದ ಎರಡು ವರ್ಷದಿಂದ ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸಗುಸು ಇತ್ತು. ಇದರ ನಡುವೆ ಹೆಚ್ ಡಿ ರೇವಣ್ಣ ಅವರು ನಡೆಸಿದ್ದಾರೆ ಎನ್ನಲಾದ ಮಾತುಕತೆಯ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ರೇವಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಎರಡು ವರ್ಷದಿಂದ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಲೇ ಇದ್ದಾರೆ. ಒಂದು ದಿನ ದೇವೇಗೌಡ ಅವರ ಮುಂದೆ ಎಲ್ಲಾ ಕುಳಿತಿದ್ದರು. ಆಗ ಒಬ್ಬರು ಫೋನ್ ಮಾಡಿ ಏನು ಸಾರ್ ರಾಮಸ್ವಾಮಿ ಇಲ್ಲೆ ಉಳಿದುಕೊಳ್ಳುತ್ತಾರೆ ಎಂದರು. ಕಾಂಗ್ರೆಸ್ ನವರು ಆತನನ್ನು ಒದ್ದು ಓಡಿಸಿರುವುದಕ್ಕೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ಅಂತ ಇದೇ ಶಿವಲಿಂಗೇಗೌಡ ಹೇಳಿದ. ಭಗವಂತ ಒಳ್ಳೆಯದು ಮಾಡಲಿ. ಈತನನ್ನು ರಾಜಕೀಯವಾಗಿ ಮೇಲೆ ತರಲು ಏನೇನು ಶಕ್ತಿ ತುಂಬಬೇಕೋ ಅದೆಲ್ಲವನ್ನು ಮಾಡಿದ್ದೇವೆ. ಈಗ ಬೆಳೆದು ದೊಡ್ಡವನಾಗಿದ್ದಾನೆ.

ನೀನೆ ಸಾಕಿದ ಗಿಣಿ. ಹದ್ದಾಗಿ ಕುಕ್ಕಿತೆಲೋ ಎಂಬಂತೆ ಆಗಿದೆ ನಮ್ಮ ಸ್ಥಿತಿ. ಆಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ನನಗೆ ಗೊತ್ತಿಲ್ಲ. ಆದ್ರೆ ಅದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಬೇಕಾದರೂ ಪ್ರಮಾಣ ಮಾಡಲಿ. ನಾನೇನಾದರೂ ಒಂದೇ ಒಂದು ಪದ ಎಡಿಟ್ ಮಾಡಿದ್ದರು, ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...