Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಲಿಕಲ್ಲು ಮಳೆ ಬಿದ್ದು ಯಾದಗಿರಿ ರೈತ ಕಣ್ಣೀರಲ್ಲಿ ಮುಳುಗುವಂತೆ ಮಾಡಿತು..!

---Advertisement---

ಯಾದಗಿರಿ: ನಿನ್ನೆಯಿಂದ ರಾಜ್ಯದಲ್ಲಿ ಮಳೆ ಶುರುವಾಗಿದೆ. ಯುಗಾದಿ ಹಿಂದೆ ಮುಂದೆ ಮಳೆ ಬೀಳುವ ವಾಡಿಕೆ ಇದೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೈಗೆ ಬರಬೇಕಾದ ಬೆಳೆ ಮಳೆಯ ನೀರಿನ ಪಾಲಾಗಿದೆ.

ರಾಜ್ಯದಲ್ಲೆಡೆ ನಿನ್ನೆ ಮಳೆಯಾಗಿದೆ. ಕೆಲವೊಂದು ಕಡೆ ಆಲಿಕಲ್ಲು ಮಳೆಯಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ ಸುರಿದಿದೆ. ಇದರ ಪರಿಣಾಮ ಮೆಣಸಿನಕಾಯಿ ಬೆಳೆ, ಪಪ್ಪಾಯ ಬೆಳೆ ನೆಲ ಕಚ್ಚಿದೆ. ಮೆಣಸಿನಕಾಯಿಯನ್ನು ಕೊಯ್ಲು ಮಾಡಿ, ಒಣಗಿ ಹಾಕಲಾಗಿತ್ತು. ಆದ್ರೆ ಬೆಳೆ ಇದ್ದ ಜಾಗದಲ್ಲೆಲ್ಲಾ ನೀರು ತುಂಬಿದೆ. ರೈತ ತಲೆ‌ಮೇಲೆ ಕೈ ಹೊತ್ತು ಕೂತಿದ್ದಾನೆ.

ಸಾಲ ಸೋಲ ಮಾಡಿ ಬೆಳೆ ಬೆಳೆಯಲಾಗಿತ್ತು. ಫಸಲು ಇನ್ನೇನು ಕೈಗೆ ಬರುವ ಹೊತ್ತು. ಎಲ್ಲಾ ನೀರು ಪಾಲಾಗಿದೆ. ಪಪ್ಪಾಯ ಬೆಳೆ ಕೂಡ ನೆಲ ಕಚ್ಚಿದೆ‌. ಬೆಳೆಹಾನಿ ಪ್ರದೇಶಕ್ಕೆ ಶಹಾಪುರ ಶಾಸಕ ಶರಬಸ್ಸಪ್ಪಗೌಡ ದರ್ಶನಾಪುರ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...