Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭವಾನಿ ರೇವಣ್ಣ ಅವರಿಗೆ ಹೇಳೋರು ಕೇಳೋರು ಇಲ್ವಾ..? : ದೊಡ್ಡಗೌಡರ ಸೊಸೆ ಪರ ಮಾಜಿ ಸಚಿವ ಈಶ್ವರಪ್ಪ ಬ್ಯಾಟ್..!

---Advertisement---

ಬಾಗಲಕೋಟೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕೆಂದು ಹೋರಾಡುತ್ತಿರುವ ಬಿಜೆಪಿ ನಾಯಕರು ಅದ್ಯಾಕೋ ಎರಡು ದಿನದಿಂದ ದೊಡ್ಡಗೌಡರ ಸೊಸೆಗೆ ನಾವೇ ಟಿಕೆಟ್ ಕೊಡುತ್ತೀವಿ ಅಂತ ಹಿಂದೆ ಬಿದ್ದಿದ್ದಾರೆ. ಇದು ವ್ಯಂಗ್ಯವೋ.. ಸತ್ಯವೋ ತಿಳಿಯುತ್ತಿಲ್ಲ.

ಭವಾನಿ ರೇವಣ್ಣ ಅವರು ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರವನ್ನು ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಈ ಬಾರಿ ಬಿಜೆಪಿಗೆ ವಿರುದ್ಧವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆದರೆ ಕುಮಾರಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಅವರೇ ನಿಲ್ಲಬೇಕು ಎಂದಿಲ್ಲ ಎಂದು ತಮ್ಮ ತೀರ್ಮಾನ ಹೇಳಿದ್ದಾರೆ. ಈಗ ದೊಡ್ಡಗೌಡರ ಅಂಗಳದಲ್ಲಿ ಬಾಲ್ ಇದೆ. ಇದೆ. ತೀರ್ಮಾನ ಅವರೇ ಮಾಡಬೇಕಿದೆ.

ಆದರೆ ಅದಕ್ಕೂ ಮುನ್ನ ಜೆಡಿಎಸ್ ಕುಟುಂಬದ ಒಳಗಿನ ವಿಚಾರಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ನಾವೇ ಟಿಕೆಟ್ ನೀಡುತ್ತೀವಿ ಎನ್ನುತ್ತಿದ್ದಾರೆ. ನಿನ್ನೆಯಷ್ಟೇ ಸಿಟಿ ರವಿ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಈಗ ಅದೇ ವಿಚಾರಕ್ಕೆ ಮಾಜಿ ಸಚಿವ ಈಶ್ವರಪ್ಪ ಮಾತನಾಎಇದ್ದಾರೆ.

ಬಾಗಲಕೋಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, “ರಾಜಕೀಯ ಸ್ಥಾನಮಾನಕ್ಕಾಗಿ ಇಂದು ಯಾರು..? ಎಲ್ಲಿ ಬೇಕಾದರೂ ನಿಲ್ಲಬಹುದು. ಈ ಮಧ್ಯೆ ಭವಾನಿ ರೇವಣ್ಣ ನಾನೇ ಕ್ಯಾಂಡಿಡೇಟ್ ಅಂತಿದ್ದಾರೆ ಅಷ್ಟೆ. ಹಾಗಾದರೆ ಅವರಿಗೆ ಪಕ್ಷ ಇಲ್ಲವಾ..? ಹೇಳೋರು ಕೇಳೋರು ಯಾರು ಇಲ್ಲವಾ..? ಅನಿತಾ ಕುಮಾರಸ್ವಾಮಿ ಅವರು ಅವರ ಮಗನಿಗೆ ಕ್ಷೇತ್ರ ನಿಗದಿ ಮಾಡ್ತಾರೆ. ಅವರವರೇ ತಮ್ಮನ್ನ, ತಮ್ಮ‌ ಮಕ್ಕಳನ್ನು ಚುನಾವಣಾ ಅಭ್ಯರ್ಥಿಗಳೆಂದು ಘೋಷಣೆ ಮಾಡಿದರೆ ಹೇಗೆ..? ಹೀಗಾದ್ರೆ ಒಂದು ಪಕ್ಷ ಅಂತ ಯಾಕಿರಬೇಕು..? ಒಂದು ಚುನಾವಣಾ ಸಮಿತಿ ಅಂತ ಯಾಕಿರಬೇಕು..? ಇದು ಒಳ್ಳೆಯ ಬೆಳವಣಿಗೆಯಲ್ಲ” ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...