ಫೆ.10ರಿಂದ ಅಧಿವೇಶನ ಆರಂಭ.. 17ಕ್ಕೆ ರಾಜ್ಯ ಬಜೆಟ್ ಮಂಡನೆ : ಮಾಧುಸ್ವಾಮಿ ಸ್ಪಷ್ಟನೆ

suddionenews
1 Min Read

ಬೆಂಗಳೂರು: ರಾಜ್ಯ ಬಜೆಟ್ ವಿಚಾರ ಸಂಬಂಧ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿದ್ದು, ಫೆಬ್ರವರಿ ಹದಿನೇಳರಂದು ಬಜೆಟ್ ಮಂಡನೆ ಮಾಡಲಿದ್ದಾರೆ ಎಂದಿದ್ದಾರೆ. ಫೆಬ್ರವರಿ ಹತ್ತರಿಂದ ಬಜೆಟ್ ಅಧಿವೇಶನ ಶುರುವಾಗಲಿದೆ. ಫೆಬ್ರವರಿ 17ಕ್ಕೆ ಸಿಎಂ ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಇಂದು ನಡೆದ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಬಜೆಟ್ ಅಧಿವೇಶನ ಶುರುವಾಗುವ ದಿನದಂದು ರಾಜ್ಯಪಾಲರ ಭಾಷಣ ಇರಲಿದೆ. ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ಎರಡನ್ನು ಸರ್ಕಾರ ಒಟ್ಟಿಗೆ ನಡೆಸಲು ತೀರ್ಮಾನ ನಡೆಸಿದೆ. ಆದರೆ ಎಷ್ಟು ದಿನ ಅಧಿವೇಶನ ನಡೆಸಬೇಕೆಂಬುದು ಇನ್ನು ತೀರ್ಮಾನವಾಗಿಲ್ಲ. ಹದಿನೇಳರಂದು ಬಜೆಟ್ ಮಂಡನೆಯಾಗಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks