ಚಾಮರಾಜನಗರ: ಶ್ರೀಮಂತ ದೇವರ ಪಟ್ಟಿಯಲ್ಲಿ ಮಲೆಮಹದೇಶ್ವರ ಕೂಡ ಸೇರುತ್ತದೆ. ಸದ್ಯ ಕೊರೊನಾ ಕಾರಣ ಕಳೆದ ಎರಡು ವರ್ಷದಿಂದ ಬೆಟ್ಟಕ್ಕೆ ಬರುವವರ ಸಂಖ್ಯೆ ಕಡಿಮೆ ಇತ್ತು. ದೇವರಿಗೆ ಸಲ್ಲಬೇಕಾಗಿದ್ದ ಕಾಣಿಕೆ ಹುಂಡಿಯಲ್ಲಿ ಇಳಿಕೆ ಕಂಡಿತ್ತು. ಇದೀಗ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದು, ಇದೀಗ ಮತ್ತೆ ಮಹದೇಶ್ವರನಿಗೆ ಭಕ್ತರು ಮನಸ್ಸಾರೆ ಕಾಣಿಕೆಯನ್ನು ಅರ್ಪಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಸಲುವಾಗಿ ರಥೋತ್ಸವ ನಡೆದಿದೆ. ಈ ರಥೋತ್ಸವದಲ್ಲಿ ಭಕ್ತಾಧಿಗಳು ಮಿಂದೆದ್ದಿದ್ದಾರೆ. ಎರಡು ವರ್ಷದ ಬಳಿಕ ಸಾಗಿದ ಅದ್ದೂರಿ ಜಾತ್ರೆಯಲ್ಲಿ ಭಕ್ತಾಧಿಗಳು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಹರಕೆ ಹೊತ್ತಿದ್ದ ಕಾಣಿಕೆಯನ್ನು ಹುಂಡಿಗೆ ಹಾಕಿದ್ದಾರೆ.
ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಮಾದಪ್ಪನಿಗೆ ಭಕ್ತರು ಒಂದು ಕೋಟಿ ರೂಪಾಯಿ ಕಾಣಿಕೆಯಾಗಿ ಅರ್ಪಿಸಿದ್ದಾರೆ. ರಥೋತ್ಸವದಲ್ಲಿ ಲಾಡು ಪ್ರಸಾದ ಹಾಗೂ ಚಿನ್ನದ ತೇರು ಎಳೆಯುವ ಮೂಲಕ ಹರಕೆಯನ್ನು ತೀರಿಸಿದ್ದಾರೆ. ಈ ಬಾರಿ 2.44 ಲಕ್ಷದ ಲಾಡು ಮಾರಾಟವಾಗಿದೆ. ಇನ್ನು ಚಿನ್ನದ ತೇರು ಎಳೆಯುವ ಹರಕೆಯನ್ನು ಹೊತ್ತಿದ್ದು, ಆ ಮೂಲಕ 50 ಲಕ್ಷ ಕಾಣಿಕೆ ಕಲೆಕ್ಟ್ ಆಗಿದೆ. ಒಟ್ಟು ಮಾದಪ್ಪನ ಹುಂಡಿಯಲ್ಲಿ 1 ಕೋಟಿ ಕಾಣಿಕೆ ಸಂಗ್ರಹವಾಗಿದೆ.