ಕೆವಾಡಿ: ನಿನ್ನೆ ಸಂಜೆ 6.30 ಸಮಯದಲ್ಲಿ ಮುರ್ಬಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಕುಸಿದು ನೂರಾರು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ನದಿಯಲ್ಲಿ ಸಿಲುಕಿದ 117 ಜನರನ್ನು ರಕ್ಷಣೆ ಮಾಡಲಾಗಿತ್ತು, ಸಾವಿನ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ಈ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮೂರು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಮೊರ್ಬಿ ನದಿಯ ಘಟನೆ ತೀರ್ವ ದುಃಖವನ್ನುಂಟು ಮಾಡಿದೆ. ಈ ಘಟನೆಯ ದೂಷಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಘಟನಾ ಸ್ಥಳದಲ್ಲಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದಿದ್ದಾರೆ.
ನಾನು ಕೆವಾಡಿಯಾದಲ್ಲಿ ಇರಬಹುದು. ಆದರೆ ನನ್ನ ಮನಸ್ಸೆಲ್ಲಾ ಮೊರ್ಬಿಯಾ ಕಡೆಗೆ ಇದೆ. ಇಂತಹ ದುರ್ಘಟನೆ ನನ್ನ ಜೀವನದಲ್ಲಿ ಬಂದಿದೆ. ಅದನ್ನು ನಾನು ನಿಭಾಯಿಸಲೇಬೇಕಿದೆ. ಅಲ್ಲಿನ ರಕ್ಷಣಾ ಕಾರ್ಯಕ್ಕೆ ಗುಜರಾತ್ ಮತ್ತು ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.