ಬೆಂಗಳೂರು: ಈ ಹಿಂದೆಯೇ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಆರಂಭದ ಬಗ್ಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದರು. ಆದರೆ ಶೈಕ್ಷಣಿಕ ವರ್ಷ ಆರಂಭವಾಗಿ ಈಗಾಗಲೇ ಅರ್ಧ ವಾರ್ಷಿಕ ಕೂಡ ಮುಗಿಯುತ್ತಾ ಬಂದಿದೆ. ಇನ್ನು ಕೂಡ ಆರಂಭವಾಗಿಲ್ಲ. ಇಂದು ಸದನದಲ್ಲೂ ಭಗವದ್ಗೀತೆಯ ಬಗ್ಗೆ ಪ್ರಶ್ನೊತ್ತರ ಕಲಾಪದಲ್ಲಿ ಚರ್ಚೆ ನಡೆದಿದೆ.
ಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ಈ ವಿಚಾರ ಪ್ರಸ್ತಾಪ ಮಾಡಿದರು. ಈ ವರ್ಷದಿಂದ ಭಗವದ್ಗೀತೆ ಪ್ರಸ್ತಾಪ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಆದರೆ ಅದಕ್ಕೆ ಈಗಾಗಲೇ ಸಮಿತಿ ಕೂಡ ರಚನೆ ಮಾಡಿಯಾಗಿದೆ. ಆದರೆ ಈಗ ಬೋಧನೆ ಇಲ್ಲ ಎಂದು ಹೇಳಲಾಗುತ್ತಿದೆ. ಯಾಕೆ ಸರ್ಕಾರಕ್ಕೆ ಭಗವದ್ಗೀತೆ ಬೋಧನೆ ಮಾಡುವುದಕ್ಕೆ ಮುಜುಗರವೇನಾದರೂ ಇದೆಯಾ. ಮೊದಲು ತೋರಿದ್ದಷ್ಟು ಆಸಕ್ತಿಯನ್ನು ಈಗ ಸರ್ಕಾರ ಯಾಕೆ ತೋರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಸದನದಲ್ಲಿಯೇ ಉತ್ತರಿಸಿದ ಸಚಿವ ಬಿ ಸಿ ನಾಗೇಶ್, ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಬೋಧನೆ ನಡೆಯುತ್ತದೆ. ಶಾಲಾ-ಕಾಲೇಜಿನಲ್ಲಿ ಬೋಧನೆ ಮಾಡಲಾಗುತ್ತದೆ. ಈಗಾಗಲೇ ಈ ಸಂಬಂಧ ನೈತಿಕ ಶಿಕ್ಷಣ ವಿಭಾಗದಲ್ಲಿ ಚರ್ಚೆ ಕೂಡ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.