ಬೆಂಗಳೂರು: ಪರಿಷತ್ ನಲ್ಲಿ ಟಿಕೆಟ್ ಸಿಕ್ಕಿಲ್ಲ ಅಂತ ಎಂ ಆರ್ ಸೀತಾರಾಂ ಅಸಮಧಾನಗೊಂಡಿಲ್ಲ. ಸೀತಾ ರಾಮನ್ ಅವರನ್ನು ತುಳಿಯುವ ಪ್ರಯತ್ನ ಪಕ್ಷದಲ್ಲಿ ನಡೀತಿದೆ. ಕಾಂಗ್ರೆಸ್ ಇದರಿಂದ ಅಧೋಗತಿಗೆ ಹೋಗಲಿದೆ ಎಂದು ಕಾಂಗ್ರೆಸ್ ಒಬಿಸಿ ಘಟಕದ ಮುಖಂಡ ಎಂ ಡಿ ಲಕ್ಷ್ಮಿನಾರಾಯಣ ಆಕ್ರೋಶಗೊಂಡಿದ್ದಾರೆ.
ಎಲ್ಲ ಸಮುದಾಯಗಳಿಗೂ ಸ್ಥಾನಮಾನ ಕೊಡುವ ಕಾಲ ಅರಸು ಕಾಲಕ್ಕೇ ಹೋಯ್ತು. ರಾಜಕೀಯ ಇವತ್ತು ಏನಾಗಿದೆ?. ರಾಜಕೀಯ ಇವತ್ತು ಕೆಲವೇ ಕೆಲವು ವ್ಯಕ್ತಿಗಳ ಪಾಲಾಗ್ತಿದೆ. ಲಕ್ಷ್ಮಿ ನಾರಾಯಣ ಗೆ ಮೋಸ ಆಯ್ತು, ಸೀತಾರಾಂ ಅವರಿಗೆ ಮೋಸ ಆಯ್ತು, ರಕ್ಷಾ ರಾಮಯ್ಯಗೆ ಮೋಸ ಆಯ್ತು.ಕಾಲೆಳೆಯುವ ಕೆಲಸಕ್ಕೆ ಪಕ್ಷದಲ್ಲಿ ಕೈಹಾಕಿದ್ದಾರೆ.
ಪಕ್ಷದಲ್ಲಿ ಕಾಲೆಳೆಯುವವರಿಗೆ ದೇವರು ಒಳ್ಳೆಯದು ಮಾಡಲ್ಲ. ನಮಗೆ ಮೋಸ ಆಗಿರಬಹುದು, ಆದ್ರೆ ನಾವು ಉತ್ಸಾಹ ಕಳೆದುಕೊಂಡಿಲ್ಲ. ಮಂತ್ರಿ, ಶಾಸಕ ಅಂತ ನಾವು ಮೆರೆದಿಲ್ಲ. ಹಿಂದುಳಿವರ್ಗಗಳ ಕಲ್ಯಾಣ ನಮ್ಮ ಗುರಿ. ಈಗ ಸಮಾಲೋಚನೆ ಸಭೆ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಸಮಾವೇಶ ಮಾಡ್ತೇವೆ.
ರಾಜಕಾರಣ ಇವತ್ತಿಗೇ ಕೊನೆಯಾಗಲ್ಲ. ಪಕ್ಷದಲ್ಲಿ ಸ್ವಾರ್ಥಿಗಳೇ ತುಂಬಿದ್ದಾರೆ. ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಆಗ್ತಿದೆ. ಸಮರ್ಥ ವ್ಯಕ್ತಿಗಳನ್ನು ನಿರಾಕರಿಸಲಾಗುತ್ತಿದೆ. ಸೀತಾರಾಂ ಅವರಿಗೆ ಪರಿಷತ್ ಸದಸ್ಯರಾಗಿ ಮಾಡುವ ಮಾತು ಕೊಟ್ಟಿದ್ರು. ಆದ್ರೆ ಇದರಲ್ಲಿ ವ್ಯತ್ಯಾಸ ಯಾಕಾಯ್ತು?. ಸೀತಾರಾಂ ಅವರಿಗೆ ಮಾತು ಕೊಟ್ಮೇಲೆ ತಪ್ಪಿದ್ರಿ. ಹೈಕಮಾಂಡ್ ಮೋಸ ಮಾಡ್ತು ಅಂತ ಕಾರಣ ಕೊಡ್ತಾರೆ. ಹೈಕಮಾಂಡ್ ಯಾಕೆ ಮೋಸ ಮಾಡುತ್ತೆ. ಎಲ್ರೂ ಒಟ್ಟಾಗಿ ನಿರ್ಧರಿಸಿದ್ರೆ ಟಿಕೆಟ್ ಸಿಕ್ತಿತ್ತು. ಈ ನಾಟಕಗಳನ್ನು ನಿಲ್ಲಿಸಿ, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧೋಗತಿಗೆ ಬರುತ್ತೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಎಂ ಡಿ ಲಕ್ಷ್ಮಿ ನಾರಾಯಣ್ ಆಕ್ರೋಶ ಹೊರಹಾಕಿದ್ದಾರೆ.