ವಿಜಯಪುರ: ಇತ್ತೀಚೆಗೆ ಶಾಸಕ ಯತ್ನಾಳ್ ಸಿಎಂ ಹುದ್ದೆಯ ಬಗ್ಗೆ ಮಾತನಾಡುತ್ತಾ, 2500 ಕೋಟಿ ಕೊಡಿ ಸಿಎಂ ಮಾಡುತ್ತೇವೆ ಎಂದಿದ್ದರು ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆ ಚರ್ಚೆ ಹುಟ್ಟು ಹಾಕುತ್ತಿದ್ದಂತೆ, ಸ್ಪಷ್ಟನೆ ನೀಡಿರುವ ಶಾಸಕ ಯತ್ನಾಳ್, ಸಿಎಂ ಮಾಡುವುದಕ್ಕೆ ಹೈಕಮಾಂಡ್ ಹಣ ಕೇಳಿದೆ ಎಂದು ನಾನು ಹೇಳಿಲ್ಲ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಅರ್ಥ ಬೇರೆ ಇದೆ. ಸಿಎಂ ಆಗಲು ಹೈಕಮಾಂಡ್ ಗೆ ಹಣ ನೀಡಬೇಕಾಗುತ್ತದೆ ಎಂದು ನಾನು ಹೇಳಿಲ್ಲ. ಸಿಎಂ ಮಾಡುತ್ತೇನೆ ಎಂದು ಯಾರೋ ವಾಟ್ಸಾಪ್ ಕಾಲ್ ಮಾಡುತ್ತಾರೆ, ಇನ್ಯಾರೋ ಮೋದಿ ಗೊತ್ತು, ಸೋನಿಯಾ ಗಾಂಧಿ ಗೊತ್ತು, ದೇವೇಗೌಡರು ಗೊತ್ತು ಎಂದು ಹೇಳುತ್ತಾರೆ. ದೆಹಲಿ ಸಾಧು ಒಬ್ಬರು ತಾನೂ ಕೇದಾರ ಮಹಾರಾಜ ಮಾತಾಡೋದು. ನನಗೆಲ್ಲರೂ ಗೊತ್ತು. ಇಷ್ಟು ಹಣ ತಂದುಕೊಟ್ಟರೆ ಶಿಫಾರಸ್ಸು ಮಾಡುತ್ತೇನೆ ಎಂದಿದ್ದರು. ಹೀಗೆ ಮಾತನಾಡುವವರನ್ನು ಯಾರು ನಂಬಬೇಡಿ ಎಂದು ಹೇಳಿದೆ ಅಷ್ಟೇ. ಪ್ರಧಾನಿ ಕಾಲದಲ್ಲಿ ಇಂತದ್ದೆಲ್ಲ ಸಾಧ್ಯವಿಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಇದೇ ವೇಳೆ ಕೆಪಿಸಿಸ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಲೆ ಕಿಡಿಕಾರಿದ ಯತ್ನಾಳ್, ಡಿಕೆ ಶಿವಕುಮಾರ್ ಏನೇ ಮಾಡಿದರೂ ಅಂಜುವ ಮಗನಲ್ಲ. ನಾನು ಅಂಜಿ ಯಾವತ್ತೂ ರಾಜಕಾರಣ ಮಾಡುವುದಿಲ್ಲ. ಡಿಕೆಶಿಗೆ ನನ್ನ ಭಯ ಹುಟ್ಟಿದೆ. ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತೆ ಎಂಬ ಭಯ ಹುಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.