Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ: 18 ಸಾರ್ವತ್ರಿಕ, 19 ಪರಿಮಿತ ರಜೆ ಘೋಷಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

List of government holidays for 2027 announced
---Advertisement---

ಬೆಂಗಳೂರು: ಕರ್ನಾಟಕ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ಮತ್ತು ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ರಾಜ್ಯಪಾಲರ ಆಜ್ಞಾನುಸಾರ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

2027ನೇ ಸಾಲಿನಲ್ಲಿ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳ ಜೊತೆಗೆ ಒಟ್ಟು 18 ಸಾರ್ವತ್ರಿಕ ರಜಾ ದಿನಗಳನ್ನು ಮಂಜೂರು ಮಾಡಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರಿಗೆ 19 ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಲಾಗಿದೆ.

2027ರ ಸಾರ್ವತ್ರಿಕ ರಜಾ ದಿನಗಳ ಸಂಪೂರ್ಣ ವಿವರ

ಜನವರಿ 15 (ಶುಕ್ರವಾರ): ಮಕರ ಸಂಕ್ರಾಂತಿ / ಉತ್ತರಾಯಣ ಪುಣ್ಯಕಾಲ

ಜನವರಿ 26 (ಮಂಗಳವಾರ): ಗಣರಾಜ್ಯೋತ್ಸವ ದಿನ

ಮಾರ್ಚ್ 6 (ಶನಿವಾರ): ಮಹಾ ಶಿವರಾತ್ರಿ

ಮಾರ್ಚ್ 10 (ಬುಧವಾರ): ಖುತುಬ್-ಎ-ರಂಜಾನ್

ಮಾರ್ಚ್ 26 (ಶುಕ್ರವಾರ): ಗುಡ್ ಫ್ರೈಡೇ

ಏಪ್ರಿಲ್ 7 (ಬುಧವಾರ): ಚಾಂದ್ರಮಾನ ಯುಗಾದಿ

ಏಪ್ರಿಲ್ 14 (ಬುಧವಾರ): ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

ಮೇ 1 (ಶನಿವಾರ): ಕಾರ್ಮಿಕ ದಿನಾಚರಣೆ

ಮೇ 17 (ಸೋಮವಾರ): ಬಕ್ರೀದ್

ಜೂನ್ 16 (ಬುಧವಾರ): ಮೊಹರಂ ಕಡೆ ದಿನ

ಸೆಪ್ಟೆಂಬರ್ 4 (ಶನಿವಾರ): ವರಸಿದ್ಧಿ ವಿನಾಯಕ ವ್ರತ

ಸೆಪ್ಟೆಂಬರ್ 29 (ಬುಧವಾರ): ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 2 (ಶನಿವಾರ): ಗಾಂಧಿ ಜಯಂತಿ

ಅಕ್ಟೋಬರ್ 15 (ಶುಕ್ರವಾರ): ವಾಲ್ಮೀಕಿ ಜಯಂತಿ

ಅಕ್ಟೋಬರ್ 28 (ಗುರುವಾರ): ನರಕ ಚತುರ್ದಶಿ

ಅಕ್ಟೋಬರ್ 30 (ಶನಿವಾರ): ದೀಪಾವಳಿ

ನವೆಂಬರ್ 1 (ಸೋಮವಾರ): ಕನ್ನಡ ರಾಜ್ಯೋತ್ಸವ

ನವೆಂಬರ್ 16 (ಮಂಗಳವಾರ): ಕನಕದಾಸ ಜಯಂತಿ

ಭಾನುವಾರ ಮತ್ತು ಶನಿವಾರದಂದು ಬರುವ ಪ್ರಮುಖ ಹಬ್ಬಗಳು

ಈ ಬಾರಿ ಹಲವು ಪ್ರಮುಖ ಹಬ್ಬಗಳು ವಾರಾಂತ್ಯದ ರಜೆಗಳಂದೇ ಬಂದಿರುವುದರಿಂದ ಅವುಗಳನ್ನು ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ಪ್ರತ್ಯೇಕವಾಗಿ ನಮೂದಿಸಿಲ್ಲ. ಭಾನುವಾರಗಳಂದು ಬರುವ ಮಹಾವೀರ ಜಯಂತಿ (ಏಪ್ರಿಲ್ 18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್-ಮಿಲಾದ್ (ಆಗಸ್ಟ್ 15) ಮತ್ತು ವಿಜಯದಶಮಿ (ಅಕ್ಟೋಬರ್ 10) ಈ ಪಟ್ಟಿಯಲ್ಲಿ ಸೇರಿಲ್ಲ. ಅದೇ ರೀತಿ ಎರಡನೇ ಶನಿವಾರದಂದು ಬರುವ ಮಹಾನವಮಿ/ಆಯುಧಪೂಜೆ (ಅಕ್ಟೋಬರ್ 9) ಹಾಗೂ ನಾಲ್ಕನೇ ಶನಿವಾರದಂದು ಬರುವ ಕ್ರಿಸ್‌ಮಸ್ (ಡಿಸೆಂಬರ್ 25) ಹಬ್ಬಗಳನ್ನು ಸಹ ಪಟ್ಟಿಯಿಂದ ಹೊರಗಿಡಲಾಗಿದೆ.

ಕೊಡಗು ಜಿಲ್ಲೆಗೆ ಸ್ಥಳೀಯ ರಜೆ ಹಾಗೂ ಬ್ಯಾಂಕ್ ರಜೆ

ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ 3ರಂದು (ಶುಕ್ರವಾರ) ಕೈಲ್ ಮುಹೂರ್ತ, ಅಕ್ಟೋಬರ್ 18ರಂದು (ಸೋಮವಾರ) ತುಲಾ ಸಂಕ್ರಮಣ ಮತ್ತು ಡಿಸೆಂಬರ್ 13ರಂದು (ಸೋಮವಾರ) ಹುತ್ತರಿ ಹಬ್ಬದ ಪ್ರಯುಕ್ತ ಕೊಡಗು ಜಿಲ್ಲೆಯಲ್ಲಿ ಸ್ಥಳೀಯ ರಜೆ ಇರಲಿದೆ.

ಇನ್ನು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881ರ ಅಡಿಯಲ್ಲಿ ಹೊರಡಿಸಲಾದ ಪ್ರತ್ಯೇಕ ಅಧಿಸೂಚನೆಯಂತೆ, ಏಪ್ರಿಲ್ 1, 2027ರಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನವಾಗಿರುವುದರಿಂದ ಆ ದಿನದಂದು ಬ್ಯಾಂಕುಗಳಿಗೆ ಮಾತ್ರ ರಜೆ ಇರುತ್ತದೆ.

ಸರ್ಕಾರಿ ನೌಕರರಿಗೆ 19 ಪರಿಮಿತ ರಜೆಗಳು

ಸಾರ್ವತ್ರಿಕ ರಜೆಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು ವರ್ಷದಲ್ಲಿ ಗರಿಷ್ಠ ಎರಡು ಪರಿಮಿತ ರಜೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ. 2027ರ ಪರಿಮಿತ ರಜಾ ಪಟ್ಟಿಯಲ್ಲಿ ಈ ಕೆಳಗಿನ ದಿನಗಳು ಸೇರಿವೆ:

ಜನವರಿ 1 (ಶುಕ್ರವಾರ): ನೂತನ ವರ್ಷಾರಂಭ

ಫೆಬ್ರವರಿ 15 (ಸೋಮವಾರ): ಮಧ್ವ ನವಮಿ

ಮಾರ್ಚ್ 5 (ಶುಕ್ರವಾರ): ಜುಮತ್-ಉಲ್-ವಿದಾ

ಏಪ್ರಿಲ್ 15 (ಗುರುವಾರ): ಶ್ರೀರಾಮನವಮಿ

ಮೇ 10 (ಸೋಮವಾರ): ಶ್ರೀ ರಾಮಾನುಜಾಚಾರ್ಯ ಜಯಂತಿ

ಮೇ 11 (ಮಂಗಳವಾರ): ಶ್ರೀ ಶಂಕರಾಚಾರ್ಯ ಜಯಂತಿ

ಮೇ 20 (ಗುರುವಾರ): ಬುದ್ಧ ಪೂರ್ಣಿಮಾ

ಆಗಸ್ಟ್ 13 (ಶುಕ್ರವಾರ): ಶ್ರೀ ವರಮಹಾಲಕ್ಷ್ಮಿ ವ್ರತ

ಆಗಸ್ಟ್ 16 (ಸೋಮವಾರ): ಋಗ್ ಉಪಕರ್ಮ

ಆಗಸ್ಟ್ 17 (ಮಂಗಳವಾರ): ಯಜುರ್ ಉಪಕರ್ಮ

ಆಗಸ್ಟ್ 24 (ಮಂಗಳವಾರ): ಶ್ರೀ ಕೃಷ್ಣ ಜನ್ಮಾಷ್ಟಮಿ

ಸೆಪ್ಟೆಂಬರ್ 3 (ಶುಕ್ರವಾರ): ಸ್ವರ್ಣಗೌರಿ ವ್ರತ

ಸೆಪ್ಟೆಂಬರ್ 8 (ಬುಧವಾರ): ಕನ್ಯಾ ಮರಿಯಮ್ಮ ಜಯಂತಿ

ಸೆಪ್ಟೆಂಬರ್ 14 (ಮಂಗಳವಾರ): ಅನಂತಪದ್ಮನಾಭ ವ್ರತ

ಸೆಪ್ಟೆಂಬರ್ 15 (ಬುಧವಾರ): ಶ್ರೀ ಬ್ರಹ್ಮರ್ಷಿ ನಾರಾಯಣ ಗುರೂಜಿ ಜಯಂತಿ

ಸೆಪ್ಟೆಂಬರ್ 17 (ಶುಕ್ರವಾರ): ವಿಶ್ವಕರ್ಮ ಜಯಂತಿ

ಅಕ್ಟೋಬರ್ 18 (ಸೋಮವಾರ): ತುಲಾ ಸಂಕ್ರಮಣ ಪುಣ್ಯ ಕಾಲ

ಡಿಸೆಂಬರ್ 13 (ಸೋಮವಾರ): ಹುತ್ತರಿ ಹಬ್ಬ

ಡಿಸೆಂಬರ್ 24 (ಶುಕ್ರವಾರ): ಕ್ರಿಸ್‌ಮಸ್ ಈವ್

ಭಾನುವಾರದಂದು ಬರುವ ಶಬ್-ಎ-ಬರಾತ್ (ಜನವರಿ 24), ಶಬ್-ಎ-ಖದರ್ (ಮಾರ್ಚ್ 7), ಹೋಳಿ ಹಬ್ಬ (ಮಾರ್ಚ್ 21), ದೇವರ ದಾಸಿಮಯ್ಯ ಜಯಂತಿ (ಏಪ್ರಿಲ್ 11), ತಿರು ಓಣಂ (ಸೆಪ್ಟೆಂಬರ್ 12), ಗುರುನಾನಕ್ ಜಯಂತಿ (ನವೆಂಬರ್ 14) ಹಾಗೂ ನಾಲ್ಕನೇ ಶನಿವಾರದಂದು ಬರುವ ಪವಿತ್ರ ಶನಿವಾರ (ಮಾರ್ಚ್ 27) ದಿನಗಳನ್ನು ಪರಿಮಿತ ರಜಾ ಪಟ್ಟಿಯಲ್ಲಿ ಸೇರಿಸಿಲ್ಲ. ಹಾಗೆಯೇ, ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯ ಸಾರ್ವತ್ರಿಕ ರಜೆಯಂದೇ ಬರುವ ಸೌರ ಯುಗಾದಿಯನ್ನು ಸಹ ಈ ಪಟ್ಟಿಯಲ್ಲಿ ನಮೂದಿಸಿಲ್ಲ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ