Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಂಚಣಿದಾರರಿಗೆ ಗುಡ್ ನ್ಯೂಸ್ : ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಬರಲಿದೆ ಡಿಜಿಟಲ್ ಜೀವನ್ ಪ್ರಮಾಣಪತ್ರ!

Good news for pensioners: Digital Life Certificates to be delivered to your doorstep by the Postal Department!
---Advertisement---

ಬೆಂಗಳೂರು :  ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೂಲಕ ಡಿಜಿಟಲ್ ಮಾದರಿಯಲ್ಲಿ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಲು ವೇದಿಕೆಯನ್ನು ಒದಗಿಸುತ್ತಿದೆ. ಕೇಂದ್ರ/ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು ಮತ್ತು ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಪಿಂಚಣಿದಾರರು ತಮ್ಮ ಮನೆ ಬಾಗಿಲಿಗೆ ಬರುವ ಅಂಚೆ ಸಿಬ್ಬಂದಿಯ ಮೂಲಕ ಈ ಸೇವೆಯನ್ನು ಪಡೆಯಬಹುದು.

ಯಾವುದೇ ಅಡೆತಡೆಯಿಲ್ಲದೆ ಪಿಂಚಣಿಯನ್ನು ನಿರಂತರವಾಗಿ ಪಡೆಯಲು ಪಿಂಚಣಿದಾರರು ಪ್ರತಿವರ್ಷ ತಮ್ಮ ವಾರ್ಷಿಕ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನೇರವಾಗಿ ಕಚೇರಿಗೆ ಹೋಗಿ ಪ್ರಮಾಣಪತ್ರ ಸಲ್ಲಿಸುವಲ್ಲಿ ಪಿಂಚಣಿದಾರರು ಎದುರಿಸುವ ತೊಂದರೆಯನ್ನು ತಪ್ಪಿಸಲು, ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಬಯೋಮೆಟ್ರಿಕ್ ದೃಢೀಕರಣ ಅಥವಾ ಫೇಸ್ ಆರ್‌ಡಿ ಆ್ಯಪ್ ಬಳಸಿ `ಜೀವನ್ ಪ್ರಮಾಣ’ ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಮನೆ ಬಾಗಿಲಲ್ಲೇ ಸಲ್ಲಿಸುವ ವ್ಯವಸ್ಥೆ ಮಾಡಿದೆ. ಕೇವಲ ರೂ.70/- ನಾಮಮಾತ್ರದ ಸೇವಾ ಶುಲ್ಕದೊಂದಿಗೆ, ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ, ಪಿಂಚಣಿ ಖಾತೆ ವಿವರಗಳು ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸಿ ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರದೇಶದ ಅಂಚೆ ಸಿಬ್ಬಂದಿಯ ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.

ಕರ್ನಾಟಕದಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ 9,700 ಕ್ಕೂ ಹೆಚ್ಚು ಅಂಚೆ ಕಚೇರಿಗಳ ಮೂಲಕ 11,000 ಕ್ಕೂ ಹೆಚ್ಚು ಅಂಚೆ ಸಿಬ್ಬಂದಿ (ಪೋಸ್ಟ್ಮೆನ್) ಮತ್ತು ಗ್ರಾಮೀಣ ಡಾಕ್ ಸೇವಕರು (ಜಿಡಿಎಸ್), ಆಧಾರ್ ಮೊಬೈಲ್ ಸಂಖ್ಯೆ ನವೀಕರಣ, 5 ವರ್ಷದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ, ನೇರ ಲಾಭ ವರ್ಗಾವಣೆಗಾಗಿ (ಡಿಬಿಟಿ) ಆಧಾರ್ ಸಬಲಗೊಂಡ ಪಾವತಿ ವ್ಯವಸ್ಥೆ (ಎಇಪಿಎಸ್) ಹಣ ಹಿಂಪಡೆಯುವಿಕೆ ಮತ್ತು ಪಿಂಚಣಿದಾರರ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಕೆ ಮುಂತಾದ ವಿವಿಧ ಮನೆ ಬಾಗಿಲ ಸೇವೆಗಳಲ್ಲಿ ನಿರತರಾಗಿದ್ದಾರೆ. ಸರ್ಕಾರವು 2014 ರಲ್ಲಿ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು (ಜೀವನ್ ಪ್ರಮಾಣ) ಪರಿಚಯಿಸಿತು. ಎಲ್ಲಾ ಪಿಂಚಣಿದಾರರಲ್ಲಿ ಜಾಗೃತಿ ಮೂಡಿಸಲು, ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲೂö್ಯ) ಅಂಚೆ ಸಿಬ್ಬಂದಿ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇಪಿಎಫ್‌ಒ ಮತ್ತು ದೂರಸಂಪರ್ಕ ಇಲಾಖೆಯ  (Department of Telecom)     ಪಿಂಚಣಿದಾರರಿಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ ವಿತರಣೆಯು ಪಿಂಚಣಿದಾರರಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಈ ಸೇವೆಯನ್ನು 2026 ರ ನವೆಂಬರ್ 1 ರಿಂದ ಎಲ್ಲ ಅಂಚೆ ಕಚೇರಿಗಳಲ್ಲಿಪಡೆದುಕೊಳ್ಳಬಹುದು.

ಕೇಂದ್ರ/ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು, ಇಪಿಎಫ್‌ಒ ಪಿಂಚಣಿದಾರರು ಮತ್ತು ಇತರ ಎಲ್ಲಾ ಅರ್ಹ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಲು ತಮ್ಮ ಪ್ರದೇಶದ ಅಂಚೆ ಸಿಬ್ಬಂದಿಯ ಮೂಲಕ ಅಂಚೆ ಇಲಾಖೆ ಒದಗಿಸುವ ಮನೆ ಬಾಗಿಲ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಪ್ಪಳ ವಿಭಾಗದ ಅಂಚೆ ಅಧೀಕ್ಷಕ ನಾಗರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join WhatsApp

Join Now

Join Telegram

Join Now