ಚಿತ್ರದುರ್ಗ. ಅ.31: ಚಿತ್ರದುರ್ಗ ವಿಭಾಗದ ಚಿತ್ರದುರ್ಗ-ಬೆಂಗಳೂರು-ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸುವ ರಾಜಹಂಸ ಸಾರಿಗೆ ಬಸ್ಗಳಲ್ಲಿ ಹಿರಿಯೂರು ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಹಿರಿಯೂರು ಬೈಪಾಸ್ನಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಮುಂಗಡ ಆಸನ ಕಾಯ್ದಿರಿಸುವ ಅವಕಾಶ ಒದಗಿಸಲಾಗಿದೆ.
ಹಿರಿಯೂರು ಬೈಪಾಸ್ನಿಂದ ಪ್ರಯಾಣ ಬೆಳೆಸುವ ಹಾಗೂ ಇಳಿಯುವ ಪ್ರಯಾಣಿಕರು ಸಂಸ್ಥೆಯ ವೆಬ್ಸೈಟ್ www.ksrtc.in ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಈ ಮಾರ್ಗದ ಬಸ್ಗಳು ಹಿರಿಯೂರು ಬೈಪಾಸ್ನಿಂದ ಪ್ರತಿದಿನ ಬೆಳಿಗ್ಗೆ 05:15, 05:45, 06:15 ಹಾಗೂ 06:45ಕ್ಕೆ ಹೊರಡಲಿವೆ. ಹಾಗೆಯೇ ಬೆಂಗಳೂರಿನಿಂದ ಪ್ರತಿದಿನ ಬೆಳಿಗ್ಗೆ 09:15, 10:00, ಸಂಜೆ 06:15 ಹಾಗೂ ರಾತ್ರಿ 11:30ಕ್ಕೆ ಹೊರಡಲಿವೆ. ಪ್ರಯಾಣಿಕರು ಈ ನೂತನ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೆಎಸ್ಆರ್ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.











