Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಕಪ್ಪು ಬಿಳುಪಿನ ಭಾವ ಸಂಗಮ”: ಚಾರ್ಕೋಲ್ ಆರ್ಟ್ ಸ್ಪರ್ಧೆ ಗೆ ಚಾಲನೆ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಶನಿವಾರ “ಕಪ್ಪು ಬಿಳುಪಿನ ಭಾವ ಸಂಗಮ” ಚಾರ್ಕೋಲ್ ಆರ್ಟ್ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು.”

“ಕಪ್ಪು ಬಿಳುಪಿನ ಭಾವ ಸಂಗಮ” ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೇಳಗಿಸುವುದರ ಮೂಲಕ ಚಾಲನೆಯನ್ನು ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜಣ್ಣ ನಾಯಕ್ ಎನ್.ಟಿ.ಚಿತ್ರಕಲಾ ಶಿಕ್ಷಕರು ಸ.ಪ.ಪೂ.ಪ್ರೌ.ವಿ (ಡಾ.ಯು.ಆರ್ ಅನಂತಮೂರ್ತಿ ಪ್ರೌಢಶಾಲೆ) ತೀರ್ಥಹಳ್ಳಿ ಇವರು ಮಾತನಾಡುತ್ತಾ ನನ್ನ ವಿದ್ಯಾರ್ಥಿಯಾದ ವೀರೇಶ್ ಅವರಿಗೆ ಒಂದು ಗೆರೆ ಹಾಕುವುದನ್ನು ಕಲಿಸಿಕೊಟ್ಟೆ ಆದರೆ ಅವರು ಈ ದಿನ ಉತ್ತಮ್ಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ ಇವರ ಈ ಕಲೆಗೆ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿರುವ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯನ್ನು ಪ್ರಶಂಸಿದರು. ಶಾಲೆಯಲ್ಲಿ ಇಂತಹ ಚಿತ್ರಕಲಾ ಕಾರ್ಯಕ್ರಮಗಳು ಮಕ್ಕಳ ಉತ್ಸಾಹ ಮತ್ತು ವಿವೇಚನಾ ಶಕ್ತಿಯನ್ನು ಬೆಳೆಸುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ತಿರ್ಪುಗಾರರಾಗಿ ಶ್ರೀಮತಿ ಸುವರ್ಣಮ್ಮ ನಿವೃತ್ತ ಚಿತ್ರಕಲಾ ಶಿಕ್ಷಕರು ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹಾಗೂ ಶ್ರೀ ಶಿವು ಡಾನ್ ಬೋಸ್ಕೋ ಚಿತ್ರಕಲಾ ಶಿಕ್ಷಕರು ಆಗಮಿಸಿದ್ದರು.

ಶಾಲೆಯ ಮುಖ್ಯೊಪಾಧ್ಯಾಯರಾದ ಎನ್ ಜಿ ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಇಂದು ನಮ್ಮ ಶಾಲೆಗೆ ಅತ್ಯಂತ ಸಂತೋಷಕದ ಹಾಗೂ ಹೆಮ್ಮೆಯ ದಿನ. ಏಕೆಂದರೆ ಇಂದು ನಾವು ಕೇವಲ ಒಂದು ಚಿತ್ರಕಲಾ ಪ್ರದರ್ಶವನ್ನು ಆಯೋಜಿಸಿಲ್ಲ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಒಂದು ಸೃಜನಶೀಲ ಹಬ್ಬವನ್ನು ಆಚರಿಸುತ್ತಿದ್ದೇವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಸಂಸ್ಥೆಯ ಕಾರ್ಯದರ್ಶಿಯವರಾದ ಬಿ.ವಿಜಯಕುಮಾರ್ ಅವರು ಮಾತನಾಡುತ್ತಾ ಚಿತ್ರಕಲೆ ಎಂದರೆ ಕೇವಲ ಬಣ್ಣ ತುಂಬುವುದಲ್ಲ ಮನಸ್ಸಿನ ಭಾವನೆಗಳನ್ನು ಕಾಗಗದ ಮೇಲೆ ಮೂಡಿಸುವ ಒಂದು ಸುಂದರ ಕಲೆಯಾಗಿದೆ. ಮಾತಿನಲ್ಲಿ ಹೇಳಲಾಗದ ಅನೇಕ ವಿಚಾರಗಳನ್ನು ಒಂದು ಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಹೇಳಬಲ್ಲದು. ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತಿರುವ ನಮ್ಮ ಶಾಲೆಯ ಖ್ಯಾತ ಚಿತ್ರಕಲಾವಿದರಾದ ವೀರೇಶ್ ಎಲ್ ಸಜ್ಜನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅವರ ಕಲಾತ್ಮಕ ಕಲಾಕೃತಿಗಳು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಸೂಕ್ಷ್ಮತೆ, ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಈ ಕಲಾವಿದನ ಚಿತ್ರಕಲೆಯ ಪ್ರದರ್ಶನವನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಡೆಸಲು ಆಯೋಜನೆ ಮಾಡಿಕೊಡುವ ಆಶ್ವಾಸನೆ ನೀಡಿದರು.

ದಿನಾಂಕ 30.10.2026 ರಂದು ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳಿಂದ ಸುಮಾರ್ 484 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ದಿನಾಂಕ 31.10.2026ರಂದು ಪ್ರಕಟಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಕರ್ಷಕ ನಗದು ಬಹುಮಾನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಯುತ ವೀರೇಶ್ ಎಲ್ ಸಜ್ಜನ್ ಅವರಿಂದ ರಚಿಸಲಾದ ಚಾರ್ಕೋಲ್ ಆರ್ಟ್‍ನ ಅಧ್ಬುತವಾದ ಚಿತ್ರಕಲೆಯ ಪ್ರದರ್ಶನವನ್ನು ಏರ್ಪಡಿಲಾಗಿತ್ತು.
ಕಾರ್ಯಕ್ರಮಕ್ಕೆ ಆಮಗಮಿಸಿದ ಗಣ್ಯರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶ್ರೀ ಗುರುನಾಥ್ ಟಿ.ಎಂ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಿತ್ರದುರ್ಗ, ಶಾಲೆಯ ಹೆಡ್ ಕೋ-ಆರ್ಡಿನೆಟರ್ ಕು.ಕಾವ್ಯ ಯದುವಂಶ್, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಬೋಧಕ / ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಅನಘ್ರ್ಯ ಪ್ರಾರ್ಥಿಸಿದರು. ಚಿತ್ರಕಲಾ ಶಿಕ್ಷಕರಾದ ವೀರೇಶ್ ಎಲ್ ಸಜ್ಜನ್ ಅವರು ಸ್ವಾಗತಿಸಿದರು, ಶಿಕ್ಷಕಿಯಾದ ಶ್ರೀಮತಿ ಸುಚಿತಾ ನಿರೂಪಿಸಿ, ವಂದಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now