Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2027ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ

---Advertisement---

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) ಮಾರ್ಚ್/ಏಪ್ರಿಲ್-2027ರಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಹಾಗೂ ಮೇ-2027ರಲ್ಲಿ ನಡೆಯಲಿರುವ ಪರೀಕ್ಷೆ-2ರ ಅಧಿಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪ್ರಕಟಣೆಯ ಪ್ರಕಾರ, ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಆರಂಭವಾಗಿ ಏಪ್ರಿಲ್ 5ರವರೆಗೆ ನಡೆಯಲಿದೆ. ನಂತರದ ಪರೀಕ್ಷೆ-2 ಮೇ 24 ರಿಂದ ಆರಂಭಗೊಂಡು ಮೇ 31ರವರೆಗೆ ಜರುಗಲಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ ವೇಳಾಪಟ್ಟಿ (ಮಾರ್ಚ್/ಏಪ್ರಿಲ್ 2027)

22.03.2027 (ಸೋಮವಾರ): ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಇತ್ಯಾದಿ)

25.03.2027 (ಗುರುವಾರ): ವಿಜ್ಞಾನ / ರಾಜ್ಯಶಾಸ್ತ್ರ / ಸಂಗೀತ

27.03.2027 (ಶನಿವಾರ): ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)

30.03.2027 (ಮಂಗಳವಾರ): ಗಣಿತ / ಸಮಾಜಶಾಸ್ತ್ರ

02.04.2027 (ಶುಕ್ರವಾರ): ತೃತೀಯ ಭಾಷೆ / ಎನ್.ಎಸ್.ಕ್ಯು.ಎಫ್. (NSQF) ವಿಷಯಗಳು

03.04.2027 (ಶನಿವಾರ): ಜೆ.ಟಿ.ಎಸ್. (JTS) ವಿಷಯಗಳು / ಅರ್ಥಶಾಸ್ತ್ರ

05.04.2027 (ಸೋಮವಾರ): ಸಮಾಜ ವಿಜ್ಞಾನ

ಎಸ್.ಎಸ್.ಎಲ್.ಸಿ ಪರೀಕ್ಷೆ-2 ರ ವೇಳಾಪಟ್ಟಿ (ಮೇ 2027)

24.05.2027 (ಸೋಮವಾರ): ಪ್ರಥಮ ಭಾಷೆ

25.05.2027 (ಮಂಗಳವಾರ): ವಿಜ್ಞಾನ / ರಾಜ್ಯಶಾಸ್ತ್ರ / ಸಂಗೀತ

26.05.2027 (ಬುಧವಾರ): ದ್ವಿತೀಯ ಭಾಷೆ

27.05.2027 (ಗುರುವಾರ): ಗಣಿತ / ಸಮಾಜಶಾಸ್ತ್ರ

28.05.2027 (ಶುಕ್ರವಾರ): ತೃತೀಯ ಭಾಷೆ / ಎನ್.ಎಸ್.ಕ್ಯು.ಎಫ್. ವಿಷಯಗಳು

29.05.2027 (ಶನಿವಾರ): ಸಮಾಜ ವಿಜ್ಞಾನ

31.05.2027 (ಸೋಮವಾರ): ಜೆ.ಟಿ.ಎಸ್. ವಿಷಯಗಳು / ಅರ್ಥಶಾಸ್ತ್ರ

ಪರೀಕ್ಷಾ ಸಮಯ ಮತ್ತು ಪ್ರಮುಖ ಸೂಚನೆಗಳು

ಪ್ರಥಮ ಭಾಷೆ ಹಾಗೂ ಕೋರ್ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ ನಡೆಯಲಿವೆ (ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ಸೇರಿ 3 ಗಂಟೆ 15 ನಿಮಿಷ).

ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ನಡೆಯಲಿವೆ.

ಎನ್.ಎಸ್.ಕ್ಯು.ಎಫ್. (NSQF) ಪರೀಕ್ಷೆಗಳು ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:15 ರವರೆಗೆ ನಡೆಯಲಿವೆ.

ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆಯು ಮಧ್ಯಾಹ್ನ 2:00 ರಿಂದ ಸಂಜೆ 5:15 ರವರೆಗೆ ನಿಗದಿಯಾಗಿದೆ.

ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ (CWSN) ನಿಯಮಾನುಸಾರ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ.

Join WhatsApp

Join Now

Join Telegram

Join Now