ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 13 : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಎನ್ಡಿಎ. ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಂ.ಸುರೇಶ್ರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಜಯಶಾಲಿಯನ್ನಾಗಿಸುವಂತೆ ಚುನಾವಣೆ ಉಸ್ತುವಾರಿ ಎಂ.ಸಿ.ರಘುಚಂದನ್ ಪದವೀಧರ ಮತದಾರರಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಉಪ್ಪರಿಗೇನಹಳ್ಳಿ, ಟಿ.ನುಲೇನೂರು, ಹೆಚ್.ಡಿ.ಪುರ, ಚಿತ್ರಹಳ್ಳಿ, ತೇಕಲವಟ್ಟಿ, ಕೊಳಹಾಳ್, ಕುಮಾರನಹಳ್ಳಿ, ಶಿವಗಂಗ, ನಂದನಹೊಸೂರು, ಈಚಘಟ್ಟ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಶಿಕ್ಷಕರು, ಪದವೀಧರರು, ಉಪನ್ಯಾಸಕರುಗಳಲ್ಲಿ ಕೆ.ಎಂ.ಸುರೇಶ್ರವರ ಪತ ಮತ ಯಾಚಿಸಿದರು.
ಅಖಂಡ ಚಿತ್ರದುರ್ಗ ಜಿಲ್ಲೆಯ ಒಂಬತ್ತು ತಾಲ್ಲೂಕುಗಳಲ್ಲಿರುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ನೀಡಿ ಕೆ.ಎಂ.ಸುರೇಶ್ರವರನ್ನು ಜಯಶಾಲಿಯನ್ನಾಗಿಸಿದರೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರ ಹೆಗಲಿಗೆ ಹೆಗಲಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಿದ್ದಾರೆಂಬ ಭರವಸೆಯಿದೆಯಲ್ಲದೆ ಪದವೀಧರರ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಅಸ್ಮಿತೆ ಹಾಗೂ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಅ.23 ರಂದು ನಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ. ಮೈತ್ರಿ ಕೂಟದ ಅಭ್ಯರ್ಥಿ ಕೆ.ಎಂ.ಸುರೇಶ್ಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವಂತೆ ಎಂ.ಸಿ.ರಘುಚಂದನ್ ಪದವೀಧರರು, ಉಪನ್ಯಾಸಕರು, ಶಿಕ್ಷಕರಗಳಲ್ಲಿ ವಿನಂತಿಸಿದರು.
ಬಿಜೆಪಿ.ಮಂಡಲ ಅಧ್ಯಕ್ಷ ಕುಮಾರಣ್ಣ, ದಾವಣಗೆರೆ ಜಿಲ್ಲೆ ಬಿಜೆಪಿ. ಮಾಜಿ ಅಧ್ಯಕ್ಷ ರಾಜಶೇಖರ್, ಪ್ರವೀಣ್ ನಂದನಹೊಸೂರು, ಚಿತ್ರಹಳ್ಳಿ ದೇವಣ್ಣ, ದಾಸಯ್ಯನಹಟ್ಟಿ ರಮೇಶಣ್ಣ, ದ್ಯಾಪನಹಳ್ಳಿ ತಿಪ್ಪೇಶ್, ಪ್ರವೀಣ್, ಅರಸನಘಟ್ಟ ಸಂಜಯ್ ಇವರುಗಳು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.











