ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯ ಹೆಮ್ಮೆಯ ಪುತ್ರ, ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಸಮಾಜ ಸೇವಕ ಜಿ. ಎಂ. ಲವಕುಮಾರ್ ಅವರಿಗೆ ಪ್ರತಿಷ್ಠಿತ ‘ಗೌರವ ಡಾಕ್ಟರೇಟ್’ ನೀಡಿ ಪುರಸ್ಕರಿಸಲಾಗಿದೆ.
ಸಮಾಜಮುಖಿ ಕಾಳಜಿ, ಜನಪರ ಚಿಂತನೆ ಹಾಗೂ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ‘ದಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಂಡ್ ರಿಸರ್ಚ್ ಯೂನಿವರ್ಸಿಟಿ’ ಈ ಗೌರವವನ್ನು ಪ್ರದಾನ ಮಾಡಿದೆ. ಪಾಂಡಿಚೇರಿಯ ಹೋಟೆಲ್ ಅಣ್ಣಾಮಲೈ ಇಂಟರ್ನ್ಯಾಷನಲ್ನಲ್ಲಿ ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ವಾರ್ಷಿಕ ‘ಗೋಲ್ಡನ್ ಐಕಾನಿಕ್ ಅವಾರ್ಡ್ಸ್’ ಸಮಾರಂಭದಲ್ಲಿ ಅವರಿಗೆ ಅಧಿಕೃತವಾಗಿ ಗೌರವ ಡಾಕ್ಟರೇಟ್ ಗರಿ ತೊಡಿಸಲಾಯಿತು.
ಗೌರವ ಡಾಕ್ಟರೇಟ್ ಪುರಸ್ಕೃತರಾಗಿ ಆಗಮಿಸಿದ ಡಾ. ಜಿ. ಎಂ. ಲವಕುಮಾರ್ ಅವರಿಗೆ ಭೀಮಸಮುದ್ರದಲ್ಲಿ ಅಭಿಮಾನಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿ, ಸಿಹಿ ಹಂಚಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧನ್ಯಕುಮಾರ್ ಹುಲ್ಲೂರು, ಸುಹೇಲ್ ಅಹ್ಮದ್ ಖಾನ್, ಇಮ್ರಾನ್ ಖಾನ್ ಕೆರೆಬಿಳಚಿ, ದರ್ಶನ್ ತಿರುಮಲಾಪುರ, ವೇದಮೂರ್ತಿ, ಸಿದ್ದೇಶ್ ಕಡ್ಲೆಗುದ್ದು, ಮಂಜುನಾಥ್ ಕುರುಬರಹಳ್ಳಿ, ವಿಜಯ್ ಎಸ್. ಹೆಡಿಯಾಲ ಚಿಕ್ಕಯಡಚಿ, ತಿಪ್ಪೇಶ್ ನಾಯ್ಕ್, ಪೂಜಾ ತಿಪ್ಪೇಶ್, ಪ್ರವೀಣ್ ಕುಮಾರ್, ವಿಜಯ್ ಯಾದವ್, ಮಂಜುನಾಥ ಶ್ರೇಷ್ಠಿ ಭೀಮಸಮುದ್ರ ಹಾಗೂ ಬೊಮ್ಮೇನಹಳ್ಳಿ ಗ್ರಾಮದ ಮಂಜುನಾಥ, ಮಹಾಂತೇಶ್, ಬೈರಪ್ಪ, ಪ್ರದೀಪ್, ಕೊಟ್ರೇಶ್, ಪರಶುರಾಮ, ತಿಪ್ಪೇಶ್ ಸೇರಿದಂತೆ ಹಲವು ಗಣ್ಯರು, ಹಿತೈಷಿಗಳು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.










