Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್: ನಾಡಿನ ಜನತೆಗೆ ವಿಶೇಷ ಪತ್ರ

---Advertisement---

ಬೆಂಗಳೂರು.ಸೆಪ್ಟೆಂಬರ್.10: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ 100 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ರಾಜ್ಯದ ಜನತೆಯನ್ನುದ್ದೇಶಿಸಿ ವಿಶೇಷ ಪತ್ರ ಬರೆದಿದ್ದಾರೆ. ಅಧಿಕಾರ ಮತ್ತು ಹುದ್ದೆಗಿಂತ ಜನರ ನಂಬಿಕೆ ಹಾಗೂ ಜವಾಬ್ದಾರಿಯೇ ದೊಡ್ಡದು ಎಂದು ಹೇಳಿರುವ ಅವರು, ರಾಜ್ಯದ ಸರ್ವಾಂಗೀಣ ಪ್ರಗತಿಗೆ ‘ದೃಢ ಕರ್ನಾಟಕ’ದ ಸಂಕಲ್ಪವನ್ನು ಪ್ರಕಟಿಸಿದ್ದಾರೆ.

ಈ ನೂರು ದಿನಗಳು ಕೇವಲ ದಿನಗಳ ಲೆಕ್ಕವಲ್ಲ, ಕೋಟ್ಯಂತರ ಕನ್ನಡಿಗರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಹೊಣೆಗಾರಿಕೆಯನ್ನು ಅರಿಯುವ ದಿನಗಳಾಗಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಹಾಕಿಕೊಟ್ಟ ಸಾಮಾಜಿಕ ನ್ಯಾಯದ ಭದ್ರ ಅಡಿಪಾಯ ಹಾಗೂ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ನೆಮ್ಮದಿ, ಭದ್ರತೆ ತಂದಿವೆ. ಆದರೆ ಸರ್ಕಾರದ ಜವಾಬ್ದಾರಿ ಇಷ್ಟಕ್ಕೇ ಮುಗಿಯದೆ, ನಾಳೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

100 ದಿನಗಳ ಪ್ರಮುಖ ಹೆಜ್ಜೆಗಳು:

ಶಿಕ್ಷಣ ಹಾಗೂ ಮೀಸಲಾತಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ.

ಬಂಡವಾಳ ಹೂಡಿಕೆ ಮತ್ತು ಉದ್ಯೋಗ: ₹29,679 ಕೋಟಿ ಹೂಡಿಕೆಗೆ ಅನುಮೋದನೆ ದೊರೆತಿದ್ದು, ಸುಮಾರು 66,000 ಹೊಸ ಉದ್ಯೋಗ ಸೃಷ್ಟಿಯ ನಿರೀಕ್ಷೆ.

ಯುವಜನತೆ ಮತ್ತು ತಂತ್ರಜ್ಞಾನ: 10,000 ‘ಭಾರತ್ ಜೋಡೋ ಯುವ ಸಂಘ’ಗಳ ರಚನೆ, ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿಶ್ವವಿದ್ಯಾಲಯ ಹಾಗೂ 6ನೇ ತರಗತಿಯಿಂದಲೇ AI ಶಿಕ್ಷಣ.

ಸರ್ಕಾರಿ ನೇಮಕಾತಿ: ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ.

ಗ್ರಾಮೀಣ ಮತ್ತು ಪ್ರಾದೇಶಿಕ ಅಭಿವೃದ್ಧಿ: ಅತ್ಯಂತ ಹಿಂದುಳಿದ 10 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಯೋಜನೆ, ಮೋಡ ಬಿತ್ತನೆ ಹಾಗೂ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಪ್ರಜಾ ಸೇವೆ’ ಇಲಾಖೆಯ ಸ್ಥಾಪನೆ.

ಇವೆಲ್ಲವೂ ಸಾಧನೆಯ ಪಟ್ಟಿಯಲ್ಲ, ಬದಲಿಗೆ ಮುಂದಿನ ಹಾದಿಗೆ ದಿಕ್ಸೂಚಿ ಎಂದು ಬಣ್ಣಿಸಿರುವ ಸಿಎಂ, ಬರಗಾಲದಂತಹ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ, ಮುಂದಿನ 500 ದಿನಗಳಲ್ಲಿ ರಾಜ್ಯವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

 

Join WhatsApp

Join Now

Join Telegram

Join Now