Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೈದ್ಯರಿಗೆ ಕಾನೂನಿನ ಅರಿವು ಅಗತ್ಯ: ವಕೀಲ ಡಾ. ಎನ್. ಡಿ ಗೌಡ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 10 : ಇತ್ತೀಚಿಗೆ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತವೈದ್ಯರ ಸಂಘ(ರಿ.)ದಿಂದ  ವೈದ್ಯ -ನ್ಯಾಯಿಕ ಅಂಶಗಳ ಬಗ್ಗೆ ವಿಶೇಷ ಕಾರ್ಯಾಗಾರವು ನಗರದ ಆರ್.ಟಿ.ಓ. ಕಚೇರಿ ಬಳಿಯಿರುವ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಜರುಗಿತು.

ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ) ವತಿಯಿಂದ ದಂತವೈದ್ಯರ ಮಾಸಿಕ ಸಭೆ ಹಾಗೂ ವೈದ್ಯ- ನ್ಯಾಯಿಕ ಅಂಶಗಳ ಒಂದು ದಿನದ ವಿಶೇಷ ಕಾರ್ಯಾಗಾರದಲ್ಲಿ ಈ ಕುರಿತು ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಡಾ. ಎನ್.ಡಿ. ಗೌಡ ಹಾಗೂ ಖ್ಯಾತ ವಕೀಲರಾದ ಪ್ರಸನ್ನಕುಮಾರ್ ರೆಡ್ಡಿ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಜರುಗಿತು.

ಉಪನ್ಯಾಸದಲ್ಲಿ ವೈದ್ಯ ಕ್ಷೇತ್ರದಲ್ಲಿ ವೈದ್ಯರಿಗೆ ಇರಬೇಕಾದ
ಕಾನೂನಿನ ಜವಾಬ್ದಾರಿ, ಹೊಣೆಗಾರಿಕೆಗಳು ಹಾಗೂ ಸವಾಲುಗಳು’ ಹಾಗೂ ದಂತ ವೈದ್ಯರಿಗೆ ಸೇವಾ ಕ್ಷೇತ್ರದಲ್ಲಿ ಆಗಬಹುದಾದ ಹಾಗೂ ಸಂಭವನೀಯ ಕಾನೂನು ತೊಡಕುಗಳು ಹಾಗೂ ಅದರ ನಿವಾರಣೋಪಾಯಗಳ ಬಗ್ಗೆ ದಂತ ವೈದ್ಯರಿಗೆ ಮಾಹಿತಿ ನೀಡಿ ಮಾತನಾಡಿದ ಸರಸ್ವತಿ ಮಹಾವಿದ್ಯಾಲಯದ ಡಾ. ಎನ್. ಡಿ.ಗೌಡ ರವರು ಪ್ರತಿ ವೈದ್ಯರಿಗೂ ಸಾಮಾಜಿಕ ಹೊಣೆಗಾರಿಕೆ ಹಾಗೂ ಕಾನೂನಿನ ಅರಿವು ಅತ್ಯಗತ್ಯವಾಗಿದ್ದು ವೈದ್ಯಕೀಯ ಕ್ಷೇತ್ರವು ಕೂಡ ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಕಾರಣ ವೈದ್ಯರು ಕಾನೂನು ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿ ರೋಗಿಯ ಮಾಹಿತಿ, ದಾಖಲೀಕರಣ ಅದರ ಸಂರಕ್ಷಣೆ ಹಾಗೂ kpme ಕಾಯ್ದೆಯಲ್ಲಿ ವೈದ್ಯರನ್ನು ನೋಂದಾಯಿಸುವ ಬಗ್ಗೆ, ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಬಗ್ಗೆ ಸಂವಾದ ಹಾಗೂ ವೈದ್ಯರಿಗೆ ವಿಮೆ ರಕ್ಷಣೆಯ ಅಗತ್ಯತೆ ಬಗ್ಗೆ ಮಾಹಿತಿಯನ್ನು ಖ್ಯಾತ ವಕೀಲರಾದ ಪ್ರಸನ್ನಕುಮಾರ್ ರೆಡ್ಡಿ ನೀಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ದಂತ ವೈದ್ಯ ಸಂಘ(ರಿ.)ದ ಜಿಲ್ಲಾ ಅಧ್ಯಕ್ಷರಾದ ಡಾ. ಮಹಾಂತೇಶ ಗಿಡ್ಡೋಬನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 16 ದಂತ ವೈದ್ಯರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಡಾ.ಸುನಿಲ್ ವಡವಡಗಿ ಹಾಗೂ ಖಜಾಂಚಿ ಡಾ.ಗೋವರ್ಧನ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಜೆ. ಬಿ. ಫಾರ್ಮಸಿಟಿಕಲ್ ಕಂಪನಿ ವಹಿಸಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now