ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು,
ಜನಾಶಯ ಪ್ರಭ
ಚಿತ್ರದುರ್ಗ
ಮೊ : 88809 99001
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರೆತ್ತುವ ಕಾರ್ಯ ವೇಗ ಪಡೆದುಕೊಂಡಿರುವುದು ಬಯಲುಸೀಮೆ ಪ್ರದೇಶಗಳಾದ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳ ಜನರಿಗೆ ಅತ್ಯಂತ ಸಂತಸದ ಸುದ್ದಿ.
ಬೆಟ್ಟದತಾವರೆಕೆರೆಯ ಎರಡನೇ ಪಂಪ್ಹೌಸ್ನಿಂದ ಎರಡು ಬೃಹತ್ ಪಂಪ್ಗಳ ಮೂಲಕ ನೀರನ್ನು ಯಶಸ್ವಿಯಾಗಿ ಹೊರತೆಗೆದು, ಡೆಲಿವರಿ ಚೇಂಬರ್ ಮೂಲಕ ಬಯಲುಸೀಮೆಗೆ ರಭಸವಾಗಿ ಹರಿಸಲಾಗುತ್ತಿರುವುದು ಈ ಭಾಗದ ಕುಡಿಯುವ ನೀರು ಮತ್ತು ನೀರಾವರಿ ಆಶೋತ್ತರಗಳಿಗೆ ಹೊಸ ಭರವಸೆ ಮೂಡಿಸಿದೆ.
ವೈ ಜಂಕ್ಷನ್ ನಿಂದ ಪ್ರಾರಂಭವಾಗುವ ಕಾಲುವೆಯ ಹಾದು ಹೋಗುವ ಹಳ್ಳಿಗಳ ಮಾರ್ಗಗಳು :
ತರೀಕೆರೆ ತಾಲೂಕಿನ ಹೆಬ್ಬೂರು, ಅಬ್ಬಿನಹೊಳಲು ಮುಗುಳ, ಗುಡಿಯಳ್ಳಿ, ಕಲ್ಲಾಪುರ, ಮುಗಳಿ ಮೈಲಾರಹಳ್ಳಿ, ಬೇಗೂರು, ಹೆಗಡೆಹಳ್ಳಿ ಅರಬಾಳು.

ಕಡೂರು ತಾಲೂಕಿನ ಹುಲಿಹಳ್ಳಿ.
ಹೊಸದುರ್ಗ ತಾಲೂಕಿನ ಸಾಣೆಹಳ್ಳಿ, ಕಬ್ಬಿನಕೆರೆ, ಚಿನ್ನಾಪುರ,ಬಳ್ಳೆಕೆರೆ, ಬುರುಡೆಕಟ್ಟೆ, ಅನಿವಾಳ, ಚಿಕ್ಕಯಗಟ್ಟೆ, ಹೆಬ್ಬಳ್ಳಿ, ಕಡವಿನಕಟ್ಟೆ, ಕೊಂಡಪುರ, ಜಂತಿ ಕೊಳ್ಳಳು, ಗುತ್ತಿಕಟ್ಟೆ, ದಾಸರಹಳ್ಳಿ, ಮಧುರೆ, ದೇವರಗುಡ್ಡ ಅರಣ್ಯ, ದೇವಪುರ, ನರಸಿಪುರ, ಕರಡಿಕಟ್ಟೆ, ಬ್ಯಾಲಹಳ್ಳಿ, ದೊಡ್ಡಘಟ್ಟ, ತಣಿಗೆಕಲ್ಲು, ಜಾನಕಲ್, ಜಾನಕಲ್ ಅರಣ್ಯ, ಕೆಂಕೆರೆ, ದೊಡ್ಡ ಕಿಟ್ಟದಹಳ್ಳಿ, ಕೆಂಚಿಹಳ್ಳಿ, ನಾಕೀಕೆರೆ, ಲಕ್ಕಿಹಳ್ಳಿ.
ಹಿರಿಯೂರು ತಾಲೂಕಿನ ಗೋಗುದ್ದು, ಭರಮಪುರ,ಮರಡಿದೇವಿಗೆರೆ, ಚಿಕ್ಕ ಸಿದ್ದವನಹಳ್ಳಿ, ಪಾಲವ್ವನಹಳ್ಳಿ.
ಹೊಳಲ್ಕೆರೆ ತಾಲೂಕಿನ ಬೂದಿಪುರ, ಮಲ್ಗೆರೆನಹಳ್ಳಿ,
ಗೂಳಿಹೊಸಹಳ್ಳಿ, ಶಂಕರನಹಳ್ಳಿ, ಲಿಂಗದೇವರಹಳ್ಳಿ, ಕೊಳಹಾಳು.

ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ,ಕುಂಚಿಗನಾಳ್, ದ್ಯಾಮವ್ವನಹಳ್ಳಿ ಮೂಲಕ ಗೋನೂರು ತಲುಪಲಿದೆ.









