Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಮಿಸ್ ವರ್ಲ್ಡ್ 2026: ಡೊಮಿನಿಕನ್ ರಿಪಬ್ಲಿಕ್‌ನ ಜೊಹೈರಿ ಮೊಲಾ ಮುಡಿಗೇರಿದ ವಿಶ್ವಸುಂದರಿ ಕಿರೀಟ

---Advertisement---

ವಿಯೆಟ್ನಾಂ: ಪ್ರತಿಷ್ಠಿತ ಮಿಸ್ ವರ್ಲ್ಡ್ 2026 ಸೌಂದರ್ಯ ಸ್ಪರ್ಧೆಯ ವಿಜೇತರಾಗಿ ಡೊಮಿನಿಕನ್ ರಿಪಬ್ಲಿಕ್‌ನ ಜೋಹೈರಿ ಮೊಲಾ ಆಯ್ಕೆಯಾಗಿದ್ದಾರೆ. ವಿಯೆಟ್ನಾಂನಲ್ಲಿ ನಡೆದ ಅದ್ಧೂರಿ ಅಂತಿಮ ಸ್ಪರ್ಧೆಯಲ್ಲಿ ಮೊಲಾ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ಥಾಯ್ಲೆಂಡ್‌ನ ಮಿಸ್ ವರ್ಲ್ಡ್ 2025 ಒಪಲ್ ಸುಚಾತಾ ಚುವಾಂಗ್‌ಸ್ರಿ ಅವರು ಅಂತಿಮ ಹಂತದಲ್ಲಿ ಜೋಹೈರಿ ಮೊಲಾ ಅವರಿಗೆ ಕಿರೀಟ ತೊಡಿಸಿ ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಿದರು.

ಯಾರು ರನ್ನರ್ ಅಪ್?
ಸ್ಪೇನ್‌ನ ಎಲಿಸಬೆತ್ ರೇನ್ಸ್ ಮೊದಲ ರನ್ನರ್ ಅಪ್ ಸ್ಥಾನ ಪಡೆದರೆ, ಮಲೇಷ್ಯಾದ ತಾನುಸಿಯಾ ಚೆಟ್ಟಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಮಿಸ್ ವರ್ಲ್ಡ್ 2026ರ ಟಾಪ್ 6 ಸ್ಪರ್ಧಿಗಳಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಸ್ಥಾನ ಪಡೆದಿದ್ದರು. ಪ್ರಾದೇಶಿಕ ಹಾಗೂ ವಿಶೇಷ ವಿಭಾಗಗಳ ಮೂಲಕ ಈ ಸ್ಪರ್ಧಿಗಳು ಅಂತಿಮ ಹಂತಕ್ಕೆ ಪ್ರವೇಶಿಸಿದ್ದರು.

ಟಾಪ್ 6 ಸ್ಪರ್ಧಿಗಳು

ಸ್ನಿಟ್ ಹಬ್ಟಿಯಾಬ್ – ಮಿಸ್ ವರ್ಲ್ಡ್ ಎರಿಟ್ರಿಯಾ – People’s Choice

ಎಲಿಸಬೆತ್ ರೇನ್ಸ್ – ಮಿಸ್ ವರ್ಲ್ಡ್ ಸ್ಪೇನ್ – Europe

ತಾನುಸಿಯಾ ಚೆಟ್ಟಿ – ಮಿಸ್ ವರ್ಲ್ಡ್ ಮಲೇಷ್ಯಾ – Beauty With a Purpose

ಲೆ ನ್ಗುಯೆನ್ ಬಾವೊ ನ್ಗೋಕ್ – ಮಿಸ್ ವರ್ಲ್ಡ್ ವಿಯೆಟ್ನಾಂ – Asia & Oceania

ಜೋಹೈರಿ ಮೊಲಾ – ಮಿಸ್ ವರ್ಲ್ಡ್ ಡೊಮಿನಿಕನ್ ರಿಪಬ್ಲಿಕ್ – Americas & Caribbean

ರೊಮಾಂಡಾ ಹೋಂಬಿರ್ – ಮಿಸ್ ವರ್ಲ್ಡ್ ದಕ್ಷಿಣ ಆಫ್ರಿಕಾ – Africa

ಜೋಹೈರಿ ಮೊಲಾ ಅವರ ಗೆಲುವಿನೊಂದಿಗೆ ಡೊಮಿನಿಕನ್ ರಿಪಬ್ಲಿಕ್ ಮಿಸ್ ವರ್ಲ್ಡ್ 2026 ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಸ್ಪೇನ್ ಮತ್ತು ಮಲೇಷ್ಯಾ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಸ್ಥಾನ ಪಡೆದಿವೆ.
ಭಾರತಕ್ಕೆ ಟಾಪ್ 40ರಲ್ಲಿ ಅಂತ್ಯ
ಇದೇ ವೇಳೆ, ಭಾರತದ ನಿಕೀತಾ ಪೊರ್ವಾಲ್ ಅವರ ಮಿಸ್ ವರ್ಲ್ಡ್ ಪಯಣ ಟಾಪ್ 40 ಹಂತದಲ್ಲೇ ಅಂತ್ಯಗೊಂಡಿದೆ. ಜಾಗತಿಕ ಮಟ್ಟದ ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ 40ರಲ್ಲಿ ಸ್ಥಾನ ಪಡೆದಿದ್ದರೂ, ಅಂತಿಮ ಟಾಪ್ 6 ಹಂತಕ್ಕೆ ಮುನ್ನಡೆಯಲು ಅವರಿಗೆ ಸಾಧ್ಯವಾಗಲಿಲ್ಲ.

Join WhatsApp

Join Now

Join Telegram

Join Now