Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಡಿನ ಜನತೆಗೆ ನಾಗರಪಂಚಮಿಯ ಶುಭಾಶಯ ಕೋರಿದ ಸಿಎಂ ಡಿ.ಕೆ ಶಿವಕುಮಾರ್

---Advertisement---

ಬೆಂಗಳೂರು.ಆಗಸ್ಟ್.17 : ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಗರ ಪಂಚಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಶ್ರಾವಣದ ಮಳೆಯೊಂದಿಗೆ ಪ್ರಕೃತಿಯ ಚೈತನ್ಯ ಜಾಗೃತಗೊಳ್ಳುವ ಈ ಪವಿತ್ರ ಕಾಲಘಟ್ಟದಲ್ಲಿ, ಪರಿಸರ ಮತ್ತು ಆಧ್ಯಾತ್ಮವು ಸಮನ್ವಯಗೊಳ್ಳುವ ಹಬ್ಬ ʻನಾಗರ ಪಂಚಮಿ’. ಸಾಲು-ಸಾಲು ಹಬ್ಬಗಳಿಗೆ ಮುನ್ನುಡಿ ಬರೆಯುವ ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಮಾತು ಜಾನಪದದಲ್ಲಿ ಜನಜನಿತ. ನಾಗಾರಾಧನೆಯು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೇ, ಕ್ರಿಮಿಕೀಟ ಹಾಗೂ ಇಲಿಗಳನ್ನು ನಿಯಂತ್ರಿಸಿ ರೈತನ ಬೆಳೆಯ ಸಂರಕ್ಷಕನಾಗಿರುವ ಸರ್ಪ ಸಂಕುಲವನ್ನು ಗೌರವಿಸುವ ಆಚರಣೆಯೂ ಹೌದು. ಜೀವವೈವಿಧ್ಯತೆಯ ಮಹತ್ವವನ್ನು ಅರಿತು ಜಲಮೂಲಗಳು ಮತ್ತು ನಾಗಬನಗಳಂತಹ ನೈಸರ್ಗಿಕ ಕಾಡುಗಳನ್ನು ಸಂರಕ್ಷಿಸುವ ಆಳವಾದ ಸಂದೇಶ ಇಲ್ಲಿದೆ.

ಕರಾವಳಿಯ ನಾಗಬನಗಳ ಪಾವಿತ್ರ್ಯ, ಬಯಲುಸೀಮೆಯ ಜೋಕಾಲಿ-ತಂಬಿಟ್ಟಿನ ಸಡಗರ ಹಾಗೂ ಅಣ್ಣ-ತಂಗಿಯರ ಸಂಬಂಧದ ಪ್ರೀತಿಯನ್ನು ಒಗ್ಗೂಡಿಸಿ ನಮ್ಮ ನೆಲದ ಸಾಂಸ್ಕೃತಿಕ ಸತ್ವವನ್ನು ಎತ್ತಿಹಿಡಿಯುತ್ತದೆ. ಪ್ರಕೃತಿಯ ಪ್ರತಿಯೊಂದು ಜೀವಿಯೊಂದಿಗೆ ಸಹಬಾಳ್ವೆ ನಡೆಸುವ ಸದ್ಭಾವನೆ ನಮ್ಮದಾಗಲಿ; ನಾಗದೇವರ ಕೃಪೆಯಿಂದ ಎಲ್ಲರ ಬಾಳಲ್ಲೂ ಆಯುರಾರೋಗ್ಯ, ನೆಮ್ಮದಿ ಮತ್ತು ಸಮೃದ್ಧಿ ಸದಾ ನೆಲೆಸಲಿ.  ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

 

Join WhatsApp

Join Now

Join Telegram

Join Now