ದೆಹಲಿ, ಆಗಸ್ಟ್ 14: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರ ಆರೋಗ್ಯದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಗೆ ದಾಖಲಿಸಲಾಗಿದೆ.
ಆಗಸ್ಟ್ 13ರ ಸಂಜೆ ಅಸ್ವಸ್ಥತೆ ಅನುಭವಿಸಿದ ಹಿನ್ನೆಲೆಯಲ್ಲಿ ನಡ್ಡಾ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಕೊರೊನರಿ ಎಂಜಿಯೋಗ್ರಫಿ ಸೇರಿದಂತೆ ಹಲವು ಪ್ರಮುಖ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು AIIMS ಆಸ್ಪತ್ರೆ ತಿಳಿಸಿದೆ.
AIIMS ಬಿಡುಗಡೆ ಮಾಡಿರುವ ಅಧಿಕೃತ ಆರೋಗ್ಯ ಬುಲೆಟಿನ್ ಪ್ರಕಾರ, ಸದ್ಯ ಜೆ.ಪಿ. ನಡ್ಡಾ ಅವರ ಆರೋಗ್ಯ ಸ್ಥಿರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಕಾರ್ಡಿಯಾಲಜಿ ವಿಭಾಗದಲ್ಲಿ ದಾಖಲಿಸಿಕೊಂಡು ವೈದ್ಯರ ನಿರಂತರ ನಿಗಾದಲ್ಲಿ ಇರಿಸಲಾಗಿದೆ.
ನಡ್ಡಾ ಅವರ ಆರೋಗ್ಯದ ಬಗ್ಗೆ ರಾಜಕೀಯ ವಲಯ ಹಾಗೂ ಬೆಂಬಲಿಗರಲ್ಲಿ ಆತಂಕ ವ್ಯಕ್ತವಾಗಿದ್ದರೂ, ಸದ್ಯ ಯಾವುದೇ ಗಂಭೀರ ಸಮಸ್ಯೆಯಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ತಂಡ ತಿಳಿಸಿದೆ.
Official statement by AIIMS New Delhi regarding the health status of Hon’ble Union Minister of Health and Family Welfare, Shri J.P. Nadda. pic.twitter.com/zsV5gXd4h9
— AIIMS, New Delhi 🇮🇳 (@aiims_newdelhi) August 14, 2026










