ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 14 : ಅಖಂಡ ಭಾರತ ಸಂಕಲ್ಪ ದಿನ ನಿಮಿತ್ತ ನಗರದಲ್ಲಿ ಗುರುವಾರ ರಾತ್ರಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.
ಈ ಸಂಘಟನೆಯ ಕಾರ್ಯಕರ್ತರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇಶದ ಪರಂಪರೆ, ಸಮಗ್ರತೆ, ಏಕತೆ, ಅಹಿಂಸಾ ತತ್ವ, ಪ್ರಜಾಪ್ರಭುತ್ವ, ಸಂವಿಧಾನ, ದೇಶದ ಪರಂಪರೆ, ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮುಂದಿನ ಪೀಳಿಗೆಗೆ ದೇಶವನ್ನು ಭಾರತವಾಗಿಯೇ ಉಳಿಸಬೇಕಾದರೆ, ನೆಮ್ಮದಿಯ ಬದುಕು ಸಾಗಿಸಬೇಕಾದರೆ ಭಾರತಕ್ಕಾಗಿ ಬದುಕನ್ನು ಬಲಿಕೊಟ್ಟ ದೇಶಭಕ್ತರ ಬಲಿದಾನ ಸಾರ್ಥಕವಾಗಬೇಕಾದರೆ ಭಾರತ ಮತ್ತೆ ಅಖಂಡವಾಗಲೇಬೇಕು ದೇಶ ವಿಭಜನೆ, ಸ್ವಾರ್ಥ, ಅಧಿಕಾರದ ದುರಾಸೆ, ದುರ್ಬಲ ನಾಯಕತ್ವದ ಮೂರ್ಖ ನಿರ್ಣಯದ ಪಾಪದ ಫಲವೇ ಅಖಂಡವಾಗಿದ್ದ ಭಾರತವನ್ನು ತುಂಡರಿಸಿದೆ. ಜಗತ್ತಿನ ಅಶಾಂತಿಗೆ ಕಾರಣವಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಹುಟ್ಟಿಗೆ ಕಾರಣವೇ ಅಂದಿನ ನಾಯಕರು. ಇದು ಕೇವಲ ಭಾರತವನ್ನು ಭಗ್ನಗೊಳಿಸಿದ ಘಟನೆ ಮಾತ್ರವಲ್ಲ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಲಕ್ಷಾಂತರ ಹುತಾತ್ಮ ದೇಶ ಭಕ್ತರಿಗೆ ಎಸಗಿದ ಮಹಾದ್ರೋಹ ಎಂದು ದೂರಿದರು.










