Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಶ್ವಕರ್ಮ ಪ್ರೀಮಿಯರ್ ಕ್ರಿಕೆಟ್ ಲೀಗ್‍ : ಕುಂದಾಪುರದ ಗುರು ಗಣೇಶ್ ನೇಜಾರು ತಂಡಕ್ಕೆ ಪ್ರಥಮ ಬಹುಮಾನ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 11 : ಕ್ರೀಡೆಯ ಮೂಲಕ ವಿಶ್ವಕರ್ಮ ಜನಾಂಗದವರು ಸಂಘಟನೆಯಾಗಲು ವಿನೂತನ ಹೆಜ್ಜೆಯಿಟ್ಟಿರುವುದು ಅರ್ಥಪೂರ್ಣವಾಗಿದೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ ಪ್ರಶಂಶಿಸಿದರು.

 

ವಿಶ್ವಕರ್ಮ ಸೇವಾ ಸಮಿತಿಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶ್ವಕರ್ಮ ಪ್ರೀಮಿಯರ್ ಕ್ರಿಕೆಟ್
ಲೀಗ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

 

ಕಾರ್ಪೆಂಟರ್, ಆಭರಣ ತಯಾರಿಕೆ, ಕುಲುಮೆ ಕೆಲಸ, ಶಿಲ್ಪಕಲೆ, ಲೋಹಶಿಲ್ಪ ದೇವರ ವಿಗ್ರಹಗಳ ತಯಾರಿಕೆ, ರಾಜ ಮಹಾರಾಜರು ಯುದ್ದದ ಸಂದರ್ಭಗಳಲ್ಲಿ ಬಳಸುತ್ತಿದ್ದ ಕತ್ತಿ ಗುರಾಣಿಗಳು ಹಾಗೂ ಡ್ಯಾಂಗಳ ಇಂಟರ್ ಲಾಕ್ ವ್ಯವಸ್ಥೆಯಲ್ಲಿ ವಿಶ್ವಕರ್ಮರ ಕೊಡುಗೆಯಿದೆ. ಜಯಂತಿ ಪೂಜೆಗಳಲ್ಲಿ ಒಂದಾಗಿ ಶಕ್ತಿ ಪ್ರದರ್ಶಿಸುವುದಕ್ಕಿಂತ ಕ್ರೀಡೆ ಮೂಲಕ ಸಂಘಟನೆಯತ್ತ ಗಮನ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಕಾಯಕ ವರ್ಗದ ಜೊತೆ ನಾನು ಸದಾ ಇರುತ್ತೇನೆಂದು ಭರವಸೆ ನೀಡಿದರು.

 

ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಮಾತನಾಡಿ ರಾಜ್ಯದಲ್ಲಿಯೇ ಹಿಂದುಳಿದವರಲ್ಲಿ ಎರಡನೆ ಸ್ಥಾನದಲ್ಲಿದ್ದೇವೆಂದು ಹೇಳಿಕೊಳ್ಳುವ ನೀವುಗಳು ಅಲ್ಪಸಂಖ್ಯಾತೆಂದುಕೊಳ್ಳಬೇಡಿ. ನಿಮ್ಮ ಸಂಘಟನೆ ಬಲವಾಗಿದೆ. ರಾಜ್ಯ ಮಟ್ಟದ ವಿಶ್ವಕರ್ಮ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಮೂಲಕ ವಿಶ್ವಕರ್ಮ ಜನಾಂಗದವರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳಿಗಾಗಿ ಎರಡು ಎಕರೆ ಮತ್ತು ಧಾರ್ಮಿಕ ಆಧ್ಯಾತ್ಮಿಕ ಸಮಾರಂಭಗಳಿಗೆ ಕಟ್ಟವಿಲ್ಲದ ಕಾರಣ ನಾಲ್ಕು ಎಕರೆ ಭೂಮಿ ನೀಡುವಂತೆ ವಿಶ್ವ ಕರ್ಮ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಸಚಿವ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವರು ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಜೊತೆ ಚರ್ಚಿಸಿ ಭೂಮಿ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ವಿಶ್ವಕರ್ಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಶಂಕರ್‍ಮೂರ್ತಿ
ಪ್ರಧಾನ ಕಾರ್ಯದರ್ಶಿ ಶ್ಯಾಮಪ್ರಸಾದ್, ಉಪಾಧ್ಯಕ್ಷರುಗಳಾದ ಶ್ರೀನಿವಾಸ್, ಸಂತೋಷ್, ಶ್ರೀನಿವಾಸಚಾರ್, ನಾರಾಯಣಚಾರ್, ವಿಶ್ವಕರ್ಮ ಸಮಾಜದ ಸಿ.ಕುಮಾರ್ ಉಮೇಶ್‍ಕುಮಾರ್ ಬಿ.ಎಂ. ಹೈಕೋರ್ಟ್ ನ್ಯಾಯವಾದಿ ರುದ್ರಾಚಾರ್, ಡಿ.ವೆಂಕಟೇಶಾಚಾರ್, ಪ್ರವೀಣ್‍ಕುಮಾರ್, ಆರ್.ಡಿ.ಸಂಜಯ್, ಸ್ವಾಮಿನಾಥನ್ ಇವರುಗಳು ವೇದಿಕೆಯಲ್ಲಿದ್ದರು.

 

ಮಧುಗಿರಿಯ ನೀಲಕಂಠಸ್ವಾಮಿ, ಗಂಗಾವತಿಯ ಗಣೇಶ್ವರಸ್ವಾಮಿ ಇವರುಗಳು ಸಾನಿಧ್ಯ ವಹಿಸಿದ್ದರು.
ಕುಂದಾಪುರದ ಗುರುಗಣೇಶ್ ನೇಜಾರು ತಂಡ ಪ್ರಥಮ ಬಹುಮಾನ. ಬೆಂಗಳೂರಿನ ಕಾಗಟಿಸ್ ತಂಡ ದ್ವಿತೀಯ, ಕುಂದಾಪುರದ ರತನ್ ರಾಕರ್ಸ್ ತೃತೀಯ ಬಹುಮಾನ ಪಡೆದುಕೊಂಡಿತು. ವಿಶ್ವಕರ್ಮ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ತಂಡಕ್ಕೆ ಬೈಕ್ ವಿತರಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now