Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಹಕರಿಗೆ UPI ಪಾವತಿಗಳು ಸಂಪೂರ್ಣ ಉಚಿತ, ಯಾವುದೇ ಶುಲ್ಕ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

---Advertisement---

ದೆಹಲಿ.ಆಗಸ್ಟ್. 9: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಸಾಮಾನ್ಯ ಬಳಕೆದಾರರು ಅಥವಾ ಗ್ರಾಹಕರ ಮೇಲೆ ಯಾವುದೇ ರೀತಿಯ ಸೇವಾ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಗ್ರಾಹಕರಿಗೆ ಮತ್ತು ವೈಯಕ್ತಿಕ (P2P) ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಎಂದಿನಂತೆ ಉಚಿತ ಸೇವೆ ಮುಂದುವರಿಯಲಿದೆ.ಒಂದು ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಿನ ಮೌಲ್ಯದ ವ್ಯಾಪಾರ (Merchant) ವಹಿವಾಟುಗಳಿಗೆ ಮಾತ್ರ ತೀರ ಕನಿಷ್ಠ ಮಟ್ಟದ ‘ಎಂಡಿಆರ್’ (MDR – Merchant Discount Rate) ಶುಲ್ಕ ಅನ್ವಯವಾಗಬಹುದು.ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕಕ್ಕೆ ಹೋಲಿಸಿದರೆ ಯುಪಿಐ ಮೇಲಿನ ಶುಲ್ಕ ತೀರ ಕಡಿಮೆಯಿರಲಿದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ವಹಿವಾಟುಗಳು ಸಂಪೂರ್ಣ ಉಚಿತವಾಗಿರಲಿವೆ.

ಈ ಎಂಡಿಆರ್ ಶುಲ್ಕವನ್ನು ಎಂದು ಮತ್ತು ಹೇಗೆ ಜಾರಿಗೆ ತರಬೇಕು ಎಂಬುದನ್ನು ‘ಎನ್‌ಪಿಸಿಐ’ (NPCI) ಅಡಿಯ ಯುಪಿಐ ಸೇವಾ ಸ್ಟೀರಿಂಗ್ ಕಮಿಟಿ ಶೀಘ್ರದಲ್ಲೇ ತೀರ್ಮಾನಿಸಲಿದೆ.ಯುಪಿಐ ವ್ಯವಸ್ಥೆಯನ್ನು ಸ್ವಯಂ-ಸಮರ್ಥವಾಗಿ ಬೆಳೆಸಲು ಮತ್ತು ಗ್ರಾಮೀಣ ಭಾಗಗಳಿಗೂ ಸುರಕ್ಷಿತವಾಗಿ ವಿಸ್ತರಿಸಲು ಈ ಸಣ್ಣ ಪ್ರಮಾಣದ ಆರ್ಥಿಕ ಬೆಂಬಲ ಅಗತ್ಯ ಎಂದು ಸಚಿವಾಲಯ ತಿಳಿಸಿದೆ.

2016-17ರಲ್ಲಿ ಆರಂಭವಾದ ಯುಪಿಐ, ಭಾರತದ ಡಿಜಿಟಲ್ ಪಾವತಿಯಲ್ಲಿ ಕ್ರಾಂತಿ ಸೃಷ್ಟಿಸಿದೆ. ಜುಲೈ 2026ರಲ್ಲೇ ಭರ್ಜರಿ ₹29.9 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳು ನಡೆದಿವೆ. ಪ್ರಸ್ತುತ ಜಾಗತಿಕವಾಗಿ 11 ದೇಶಗಳಲ್ಲಿ ಯುಪಿಐ ಸೇವೆ ಲಭ್ಯವಿದ್ದು, ಇನ್ನು ಹಲವು ದೇಶಗಳು ಭಾರತದೊಂದಿಗೆ ಕೈಜೋಡಿಸಲು ಮುಂದಾಗಿವೆ.

Join WhatsApp

Join Now

Join Telegram

Join Now