ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಮುಖ್ಯ ಅಂಗವಾಗಿದೆ. ಅಗತ್ಯ ಕೆಲಸಗಳ ನಡುವೆ ಫೋನ್ ಪದೇ ಪದೇ ಹ್ಯಾಂಗ್ ಆದರೆ ಅಥವಾ ಸ್ಲೋ ಆದರೆ ಕಿರಿಕಿರಿ ಉಂಟಾಗುವುದು ಸಹಜ. ಇಂಟರ್ನಲ್ ಸ್ಟೋರೇಜ್ ಫುಲ್ ಆಗುವುದು ಹಾಗೂ ಬ್ಯಾಕ್ಗ್ರೌಂಡ್ನಲ್ಲಿ ಹೆಚ್ಚು ಆ್ಯಪ್ಗಳು ರನ್ ಆಗುವುದು ಫೋನ್ ಸ್ಲೋ ಆಗಲು ಪ್ರಮುಖ ಕಾರಣ.
ನಿಮ್ಮ ಸ್ಮಾರ್ಟ್ಫೋನ್ ಕೂಡ ಹ್ಯಾಂಗ್ ಆಗುತ್ತಿದ್ದರೆ, ಅದನ್ನು ಲೈಟ್ ಹಾಗೂ ಸೂಪರ್ ಫಾಸ್ಟ್ ಮಾಡಲು ಈ ಕೆಳಗಿನ ಸರಳ ಟಿಪ್ಸ್ ಅನುಸರಿಸಿ.
ಇಂಟರ್ನಲ್ ಸ್ಟೋರೇಜ್ ಖಾಲಿ ಮಾಡಿ: ಫೋನ್ ಹ್ಯಾಂಗ್ ಆಗಲು ಮುಖ್ಯ ಕಾರಣ ಮೆಮೊರಿ ಫುಲ್ ಆಗಿರುವುದು. ಅಗತ್ಯವಿಲ್ಲದ ದೊಡ್ಡ ವೀಡಿಯೊಗಳು, ಹಳೆಯ ಫೋಟೋಗಳು ಹಾಗೂ ಫೈಲ್ಗಳನ್ನು ತಕ್ಷಣ ಡಿಲೀಟ್ ಮಾಡಿ.

ಆ್ಯಪ್ಸ್ ಮತ್ತು OS ಅಪ್ಡೇಟ್ ಮಾಡಿ: ಹಳೆಯ ಸಾಫ್ಟ್ವೇರ್ ಆವೃತ್ತಿಗಳಿಂದ ಫೋನ್ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತವೆ. ಸಿಸ್ಟಮ್ ಅಪ್ಡೇಟ್ ಮತ್ತು ಪ್ಲೇ ಸ್ಟೋರ್ನಲ್ಲಿ ಆ್ಯಪ್ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುವುದರಿಂದ ಬಗ್ಗಳು ನಿವಾರಣೆಯಾಗಿ ಫೋನ್ ಸ್ಪೀಡ್ ಹೆಚ್ಚಾಗುತ್ತದೆ.
ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿ: ಫೋನ್ ನಿರಂತರ ಬಳಕೆಯಿಂದ ‘ಕ್ಯಾಶ್ ಡೇಟಾ’ ಜಮೆಯಾಗಿ ಪ್ರೊಸೆಸರ್ ಮೇಲೆ ಒತ್ತಡ ಬೀಳುತ್ತದೆ. ಸೆಟ್ಟಿಂಗ್ಸ್ಗೆ ಹೋಗಿ ಆ್ಯಪ್ಗಳ ಕ್ಯಾಶ್ ಕ್ಲಿಯರ್ ಮಾಡಿ ಹಾಗೂ ಹಿನ್ನೆಲೆಯಲ್ಲಿ (Background) ಸುಮ್ಮನೆ ರನ್ ಆಗುತ್ತಿರುವ ಆ್ಯಪ್ಗಳನ್ನು ಕ್ಲೋಸ್ ಮಾಡಿ.
ವಾರಕ್ಕೊಮ್ಮೆಯಾದರೂ ರಿಸ್ಟಾರ್ಟ್ ಮಾಡಿ: ದಿನವಿಡೀ ಫೋನ್ ಆನ್ನಲ್ಲೇ ಇರುವುದರಿಂದ ರ್ಯಾಮ್ (RAM) ಮೇಲೆ ಲೋಡ್ ಹೆಚ್ಚಾಗುತ್ತದೆ. ವಾರಕ್ಕೆ ಒಂದೆರಡು ಬಾರಿಯಾದರೂ ಫೋನ್ ರಿಸ್ಟಾರ್ಟ್ ಮಾಡುವುದರಿಂದ ಸಿಸ್ಟಮ್ ರಿಫ್ರೆಶ್ ಆಗಿ ಹ್ಯಾಂಗ್ ಆಗುವುದು ತಪ್ಪುತ್ತದೆ.










