Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉದ್ಯೋಗ ಖಾತ್ರಿ ಅರ್ಹ ಫಲಾನುಭವಿಗಳಿಗೆ ವಾರದೊಳಗೆ ಜಾಬ್ ಕಾರ್ಡ್ ವಿತರಣೆ: ಸಚಿವ ಈಶ್ವರ್ ಖಂಡ್ರೆ

---Advertisement---

ಬೆಂಗಳೂರು.ಆಗಸ್ಟ್.9: ವಿಬಿಜಿ ರಾಮ್ ಜಿಯಡಿ ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ದೊರಕಿಸುವ ನಿಟ್ಟಿನಲ್ಲಿ ಮುಂದಿನ ಒಂದು ವಾರದೊಳಗೆ ರಾಜ್ಯಾದ್ಯಂತ ಬೃಹತ್ ‘ಜಾಬ್ ಕಾರ್ಡ್ ಮೇಳ’ ಆಯೋಜಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ ಖಂಡ್ರೆ ಅವರು ಸೂಚನೆ ನೀಡಿದ್ದಾರೆ.

ನಿಷ್ಕ್ರಿಯಗೊಂಡಿರುವ ಉದ್ಯೋಗ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆಯಾದರೂ, ಬಡ ಗ್ರಾಮೀಣ ಕುಟುಂಬಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರ ಸ್ಪಷ್ಟ ಆದೇಶವಾಗಿದೆ. ರಾಜ್ಯದ ಒಟ್ಟು 5927 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬಗಳು ಹಾಗೂ ಭೂರಹಿತ ಕೂಲಿ ಕಾರ್ಮಿಕರಿಗೆ ತಕ್ಷಣವೇ ಜಾಬ್ ಕಾರ್ಡ್ ನೀಡುವಂತೆ ತಿಳಿಸಲಾಗಿದೆ.

ವಿಬಿಜೆ ರಾಮ್ ಜಿ ಯೋಜನೆಯಡಿ ಕೇಂದ್ರ ಸರ್ಕಾರದ ಶೇ. 60ರಷ್ಟು ಅನುದಾನ (1700 ಕೋಟಿ ರೂ.) ಮತ್ತು ರಾಜ್ಯ ಸರ್ಕಾರದ ಶೇ. 40ರಷ್ಟು ಅನುದಾನ (1200 ಕೋಟಿ ರೂ.) ಸೇರಿದಂತೆ ಒಟ್ಟು 2900 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಈ ಪೈಕಿ ಕೂಲಿ ಪಾವತಿಗಾಗಿ ಈಗಾಗಲೇ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ 1000 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

Join WhatsApp

Join Now

Join Telegram

Join Now