Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಗಸ್ಟ್ 9 ರಂದು ಚಿತ್ರದುರ್ಗದಲ್ಲಿ ‘ನೃತ್ಯ ನಾದ ನಮನ’ ಮತ್ತು ಗುರುವಂದನಾ ಕಾರ್ಯಕ್ರಮ

---Advertisement---

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 04 : ಅಂಜನಾ ನೃತ್ಯ ಕಲಾ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ನೃತ್ಯ ನಾದ ನಮನ, ಗಾನ ಸರಸ್ವತಿ
ಎಸ್.ಜಾನಕಿಯವರಿಗೆ ನೃತ್ಯ ನಿವೇದನ ಹಾಗೂ ಕರ್ನಾಟಕ ಕಲಾಶ್ರಿ ಪ್ರಶಸ್ತಿ ಪುರಸ್ಕøತ ವಿದ್ವಾನ್ ಸಿ.ಆರ್.ಶಿವಪ್ರಕಾಶ್‍ರವರಿಗೆ ಗುರುವಂದನಾ ಕಾರ್ಯಕ್ರಮ ಆ.9 ರಂದು ಸಂಜೆ 6 ಗಂಟೆಗೆ ಹೊಳಲ್ಕೆರೆ ರಸ್ತೆಯಲ್ಲಿರುವ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

 

ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಇವರುಗಳು ಪಾಲ್ಗೊಳ್ಳುವರು.
ಕೋಲಾರದ ವಿದುಷಿ ಶಿವಾನಿ ಮಣಿಕಂಠ ಮತ್ತು ತಂಡದವರಿಂದ ನೃತ್ಯ ವೈಭವ. ರೀತಿಷಾ ಸುಮುಖ್ ಮತ್ತು ಕು.ಪ್ರಣತಿ ಕಾರ್ ಕೋಗಿಲೆ ಸಿಸ್ಟರ್ಸ್ ಬೆಂಗಳೂರು ಇವರಿಂದ ಎಸ್.ಜಾನಕಿಯವರ ಕನ್ನಡ ಚಲನ ಚಿತ್ರಗೀತೆಗಳು. ಡಾ.ರಕ್ಷಿತಾ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ ವೈವಿದ್ಯ, ವಿದುಷಿ ಪ್ರಜ್ಞಾ ಮತ್ತು ತಂಡದಿಂದ ನೃತ್ಯ ಮಾಲಿಕಾ, ವಿದುಷಿ ವೈಷ್ಣವಿ ಮರಡಿ ಮತ್ತು ತಂಡದಿಂದ ವಿಶೇಷ ಆಕರ್ಷಣೆ ನಟವರ ನೃತ್ಯ ರೂಪಕವಿರುತ್ತದೆ. ಕಲಾ ಪೋಷಕರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾರತೀಯ ಸಾಹಿತ್ಯ ನೃತ್ಯ ಪರಂಪರೆಯನ್ನು ಪ್ರೋತ್ಸಾಹಿಸುವಂತೆ ವಿದ್ವಾನ್ ಸಿ.ಆರ್.ಶಿವಪ್ರಕಾಶ್ ಡಾ.ನಂದಿನಿ ಶಿವಪ್ರಕಾಶ್ ಇವರುಗಳು ವಿನಂತಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now