Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇ-ಚಲನ್ ಬಾಕಿ ಇದೆಯಾ? ನಿಮ್ಮ ಆರ್ ಸಿ, ಡ್ರೈವಿಂಗ್ ಲೈಸೆನ್ಸ್ ಸೇವೆಗಳು ಬಂದ್ ಆಗಬಹುದು!

---Advertisement---

ದೆಹಲಿ.ಜುಲೈ.24: ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ಬಿದ್ದಿರುವ ಇ-ಚಲನ್ಗಳನ್ನು (Traffic e-challans) ಪಾವತಿಸದೆ ನಿರ್ಲಕ್ಷಿಸುತ್ತಿದ್ದರೆ ಇನ್ಮುಂದೆ ಕಷ್ಟವಾಗಲಿದೆ. ದಂಡ ಪಾವತಿಸದ ವಾಹನ ಮಾಲೀಕರು ಮತ್ತು ಚಾಲನಾ ಪರವಾನಗಿ (DL) ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ-1989ಕ್ಕೆ ತಿದ್ದುಪಡಿ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ನಿಯಮಗಳನ್ನು ಹೊರಡಿಸಿದ್ದು, ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳಿಗೆ 30 ದಿನಗಳ ಕಾಲಾವಕಾಶ ನೀಡಿದೆ.

ಹೊಸ ನಿಯಮದಲ್ಲೇನಿದೆ? ನಿಯಮ ಉಲ್ಲಂಘಿಸಿದರೆ ಏನಾಗುತ್ತದೆ?
ಸೇವೆಗಳಿಗೆ ತಡೆ: ನಿಯಮಗಳ ಪ್ರಕಾರ, ವಿಧಿಸಲಾದ ಇ-ಚಲನ್ ಅಂತಿಮಗೊಂಡು (ಸವಾಲು ಮಾಡದಿರುವ ಅಥವಾ ಪ್ರಾಧಿಕಾರದಿಂದ ನಿರ್ಧಾರವಾದ ನಂತರ) ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರೆ, ಅಂತಹವರ ಚಾಲನಾ ಪರವಾನಗಿ (DL) ಅಥವಾ ವಾಹನ ನೋಂದಣಿಗೆ (RC) ಸಂಬಂಧಿಸಿದ ಪ್ರಮುಖ ಸೇವೆಗಳನ್ನು ಸಾರಿಗೆ ಇಲಾಖೆ ತಡೆಹಿಡಿಯಲಿದೆ.

‘ಸಹಿಹಾಕಲು ಬಾರದ ವಾಹನ’ (Not to be Transacted): ಬಾಕಿ ಚಲನ್ ಹೊಂದಿರುವ ವಾಹನಗಳನ್ನು ಪೋರ್ಟಲ್ನಲ್ಲಿ “Not to be Transacted” ಎಂದು ಗುರುತಿಸಲಾಗುತ್ತದೆ. ಇದರಿಂದ ವಾಹನದ ಮಾಲೀಕತ್ವ ವರ್ಗಾವಣೆ ಸೇರಿದಂತೆ ಹಲವು ವ್ಯವಹಾರಗಳು ಸ್ಥಗಿತಗೊಳ್ಳಲಿವೆ.

ಆದರೆ ಇಲ್ಲೊಂದು ವಿನಾಯಿತಿ: ಪ್ರಕರಣವು ನ್ಯಾಯಾಲಯದಲ್ಲಿ ಅಥವಾ ಪರಿಶೀಲನೆಯಲ್ಲಿದ್ದರೆ (Adjudicating authority) ಈ ತಡೆ ಅನ್ವಯಿಸುವುದಿಲ್ಲ. ಅಲ್ಲದೆ, ವಾಹನ ತೆರಿಗೆ (Vehicle Tax) ಪಾವತಿಗೆ ಯಾವುದೇ ಅಡೆತಡೆ ಇರುವುದಿಲ್ಲ.

ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ವ್ಯವಸ್ಥೆ
30 ದಿನಗಳಲ್ಲಿ ತೀರ್ಪು: ಪ್ರತಿಯೊಂದು ರಾಜ್ಯವು ಆರು ತಿಂಗಳೊಳಗೆ ಜಿಲ್ಲಾ ಮಟ್ಟದಲ್ಲಿ ಸಂಚಾರ ದಂಡ ಪ್ರಕರಣಗಳನ್ನು ಇತ್ಯರ್ಥಪಡಿಸಲು ‘ಅಡ್ಜುಡಿಕೇಟಿಂಗ್ ಅಥಾರಿಟಿ’ (Adjudicating Authorities) ಸ್ಥಾಪಿಸಬೇಕಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ.

ವಿಳಂಬ ಮಾಡಿದರೆ ಅಧಿಕಾರಿಗಳಿಗೂ ದಂಡ: ಕನಿಷ್ಠ ಸಮಯದಲ್ಲಿ ಪ್ರಕರಣ ವಿಲೇವಾರಿ ಮಾಡದಿದ್ದರೆ ಅಥವಾ ತೀರ್ಪು ನೀಡಲು ವಿಳಂಬ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ₹5,000 ರಿಂದ ₹10,000 ವರೆಗೆ ದಂಡ ವಿಧಿಸುವ ಕಠಿಣ ನಿಯಮವನ್ನೂ ಪ್ರಸ್ತಾಪಿಸಲಾಗಿದೆ.

ಡಿಜಿಟಲ್ ಎಚ್ಚರಿಕೆಗಳಿಗೆ ಕಾನೂನು ಮಾನ್ಯತೆ: ಸಣ್ಣಪುಟ್ಟ ಸಂಚಾರ ನಿಯಮ ಉಲ್ಲಂಘನೆಗೆ ಡಿಜಿಟಲ್ ಪೋರ್ಟಲ್ ಮೂಲಕ ನೀಡಲಾಗುವ ಇ-ಎಚ್ಚರಿಕೆಗಳಿಗೆ (Digital Traffic Warnings) ಕಾನೂನು ಮಾನ್ಯತೆ ಸಿಗಲಿದೆ. ಇದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಪುನರಾವರ್ತಿತ ಅಪರಾಧಗಳನ್ನು ನಿರ್ಧರಿಸಲಾಗುತ್ತದೆ.

ಆರ್ಸಿ ರದ್ದತಿಗೆ ಇ-ಪ್ರಕ್ರಿಯೆ (RC Cancellation)
ಅಪಘಾತದಲ್ಲಿ ನಾಶವಾದ, ಸಕ್ರ್ಯಾಪ್ (Scrap) ಮಾಡಲಾದ ಅಥವಾ ಶಾಶ್ವತವಾಗಿ ದೇಶದಿಂದ ಹೊರಗೆ ಕೊಂಡೊಯ್ಯಲಾದ ವಾಹನಗಳ ಆರ್ಸಿ ರದ್ದುಗೊಳಿಸಲು ಮಾಲೀಕರು 30 ದಿನಗಳ ಒಳಗೆ ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಇದಕ್ಕಾಗಿ Form 37A ಮತ್ತು Form 37B ಎಂಬ ಹೊಸ ನಮೂನೆಗಳನ್ನು ಪರಿಚಯಿಸಲಾಗಿದೆ.

ಈ ಹೊಸ ನಿಯಮ ಜಾರಿಗೆ ಬಂದರೆ ಸವಾರರು ಸಂಚಾರ ದಂಡ ಪಾವತಿಸದೆ ತಪ್ಪಿಸಿಕೊಳ್ಳುವುದು ಕಷ್ಟವಾಗಲಿದೆ. ಆದರೆ, ಈ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ತಾಂತ್ರಿಕ ದೋಷಗಳಿಂದ ನಿರಪರಾಧಿ ಸವಾರರಿಗೆ ತೊಂದರೆಯಾಗದಂತೆ ಡಿಜಿಟಲ್ ಪೋರ್ಟಲ್ಗಳನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now