ಆಚಾರ್ಯ ಚಾಣಕ್ಯರ ನೀತಿ ಸೂತ್ರಗಳು ಇಂದಿನ ಆಧುನಿಕ ಯುಗದಲ್ಲೂ ಮಾನವ ಜೀವನಕ್ಕೆ ಅತ್ಯಂತ ಸೂಕ್ತ ಹಾಗೂ ಮಾರ್ಗದರ್ಶಿಯಾಗಿವೆ. ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ ಎನ್ನುವುದರ ಜೊತೆಗೆ, ನಮ್ಮ ಸುತ್ತಮುತ್ತಲಿರುವ ಕೆಟ್ಟ ಮತ್ತು ಅಪಾಯಕಾರಿ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ದೂರವಿರುವುದು ಹೇಗೆ ಎಂಬುದನ್ನು ಚಾಣಕ್ಯರು ಸ್ಪಷ್ಟವಾಗಿ ತಿಳಿಸಿದ್ದಾರೆ. ಇಂತಹ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸದಿದ್ದರೆ ಮುಂದೆ ತೀವ್ರ ದುಃಖ ಹಾಗೂ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಚಾಣಕ್ಯ ನೀತಿಯ ಪ್ರಕಾರ ನಾವು ಎಚ್ಚರಿಕೆಯಿಂದ ಇರಬೇಕಾದ ಅಪಾಯಕಾರಿ ವ್ಯಕ್ತಿಗಳ ಗುಣಲಕ್ಷಣಗಳು ಇಲ್ಲಿವೆ.

ಮಾತಿನಲ್ಲಿ ಸಿಹಿ, ಮನಸ್ಸಿನಲ್ಲಿ ವಿಷ
ಕೆಲವರ ಮಾತುಗಳು ಕೇಳಲು ಅತ್ಯಂತ ಸಿಹಿಯಾಗಿರುತ್ತವೆ, ಆದರೆ ಅವರ ಮನಸ್ಸಿನಲ್ಲಿ ಸಂಪೂರ್ಣವಾಗಿ ಕಪಟ ಹಾಗೂ ವಿಷ ತುಂಬಿರುತ್ತದೆ. ಇಂತವರು ತಮ್ಮ ಸ್ವಾರ್ಥ ಹಾಗೂ ಅಗತ್ಯಗಳಿಗಾಗಿ ಮಾತ್ರ ನಿಮ್ಮ ಹತ್ತಿರವಾಗುತ್ತಾರೆ. ಇವರು ನಿಜವಾದ ಸ್ನೇಹಿತರಲ್ಲ. ನಿಮ್ಮ ರಹಸ್ಯಗಳನ್ನು ಇತರರ ಮುಂದೆ ರಟ್ಟು ಮಾಡುವುದಲ್ಲದೆ, ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಲು ಸಹ ಹಿಂಜರಿಯುವುದಿಲ್ಲ.
ಅಸೂಯೆ ಪಡುವವರು ಮತ್ತು ನಂಬಿಕೆದ್ರೋಹಿಗಳು:
ನಿಮ್ಮ ಬೆಳವಣಿಗೆ ಮತ್ತು ಯಶಸ್ಸನ್ನು ಕಂಡು ಅಸೂಯೆ ಪಡುವವರಿಂದ ಯಾವಾಗಲೂ ದೂರವಿರಿ. ಹಾಗೆಯೇ, ನಿಮಗೊಮ್ಮೆ ನಂಬಿಕೆದ್ರೋಹ ಮಾಡಿದ ವ್ಯಕ್ತಿಗೆ ಜೀವನದಲ್ಲಿ ಎರಡನೇ ಬಾರಿ ಅವಕಾಶ ನೀಡಬಾರದು. ಇಂತಹ ವ್ಯಕ್ತಿಗಳು ತಮ್ಮ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ಬದಲಿಗೆ ನಿಮ್ಮ ಮೇಲೆಯೇ ದೋಷ ಹೊರಿಸುತ್ತಾರೆ.
ಮುಂದೆ ಒಂದು, ಬೆನ್ನ ಹಿಂದೆ ಇನ್ನೊಂದು ಮಾತನಾಡುವವರು:
ನಿಮ್ಮ ಮುಂದೆ ಒಳ್ಳೆಯವರಂತೆ ನಟಿಸಿ, ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಗಳು ಅತ್ಯಂತ ಅಪಾಯಕಾರಿ. ಇವರು ನಿಮ್ಮ ಬಲಹೀನತೆಗಳನ್ನು ತಿಳಿದುಕೊಂಡು ಸಮಯ ಬಂದಾಗ ನಿಮಗೇ ಪೆಟ್ಟು ನೀಡಲು ಕಾಯುತ್ತಿರುತ್ತಾರೆ.
ಚಾಣಕ್ಯ ನೀತಿಯ ಪ್ರಕಾರ, ಇಂತಹ ದುಷ್ಟ ಹಾಗೂ ಕಪಟಿ ವ್ಯಕ್ತಿಗಳ ಸಾಂಗತ್ಯದಲ್ಲಿದ್ದು ಪ್ರತಿದಿನ ನರಳುವುದಕ್ಕಿಂತ ಒಂಟಿಯಾಗಿರುವುದೇ ಎಷ್ಟೋ ಮೇಲು. ಆದ್ದರಿಂದ ಯಾರನ್ನಾದರೂ ನಂಬುವಾಗ ಅಥವಾ ಅವರೊಂದಿಗೆ ಸ್ನೇಹ ಬೆಳೆಸುವಾಗ ಒಂದಕ್ಕೆರಡು ಬಾರಿ ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











