Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BSNLನಿಂದ1.34 ಲಕ್ಷ ರೂಪಾಯಿ ಮೌಲ್ಯದ ಹೊಸ `ಸ್ಯಾಟಲೈಟ್’ ಫೋನ್ ಘೋಷಣೆ

---Advertisement---

ದೆಹಲಿ.ಜುಲೈ.09: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ ನಿಯಮಿತ (BSNL), ರಕ್ಷಣೆ, ಕಡಲ ಯಾನ ಮತ್ತು ವಿಪತ್ತು ನಿರ್ವಹಣಾ ವಲಯದ ಬಳಕೆದಾರರಿಗಾಗಿ ಗುರುವಾರ ಹೊಸ ಸ್ಯಾಟಲೈಟ್ (ಉಪಗ್ರಹ) ಫೋನ್ ಸೇವೆಯನ್ನು ಪ್ರಕಟಿಸಿದೆ.

ಸಾಮಾನ್ಯ ಮೊಬೈಲ್ ನೆಟ್ ವರ್ಕ್ ಗಳು ತಲುಪದ ಅತ್ಯಂತ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಈ ಸ್ಯಾಟಲೈಟ್ ಫೋನ್ ವಾಯ್ಸ್ ಕಾಲ್ ಮತ್ತು ಎಸ್ ಎಂಎಸ್ ಸೇವೆಗಳನ್ನು ಒದಗಿಸಲಿದೆ. ಎಲ್ಲಾ ತೆರಿಗೆಗಳು ಸೇರಿದಂತೆ ಈ ಫೋನಿನ ಬೆಲೆ ರೂ. 1,34,166 ಆಗಿದೆ ಎಂದು ಬಿಎಸ್ ಎನ್ಎಲ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದೆ.

ಗಣಿಗಾರಿಕೆ, ದೂರದ ಕಾರ್ಯಾಚರಣೆಗಳು ಮತ್ತು ಸಾಹಸಯಾತ್ರೆಗಳಿಗೆ ಇದು ಅತ್ಯುತ್ತಮ ಪರಿಹಾರವಾಗಿದ್ದು, ಸಾಮಾನ್ಯ ನೆಟ್ವರ್ಕ್ಗಳು ಕೈಕೊಟ್ಟಾಗಲೂ ಇದು ಜನರನ್ನು ಸಂಪರ್ಕದಲ್ಲಿಡುತ್ತದೆ ಎಂದು ಸಂಸ್ಥೆ ಹೇಳಿದೆ.

ಬಿಎಸ್ಎನ್ಎಲ್ ಸರ್ಕಾರಿ ಮತ್ತು ವಾಣಿಜ್ಯ ಸಂಸ್ಥೆಗಳಿಗಾಗಿ ಪ್ರತ್ಯೇಕ ಪೋಸ್ಟ್ಪೇಯ್ಡ್ ಹಾಗೂ ಪ್ರಿಪೇಯ್ಡ್ ಪ್ಲಾನ್ಗಳನ್ನು ಪರಿಚಯಿಸಿದೆ.
ಪೋಸ್ಟ್ ಪೇಯ್ಡ್ ಪ್ಲಾನ್ ಗಳು: ಇವುಗಳಲ್ಲಿ ರೂ. 3,500, ರೂ. 5,835 ಮತ್ತು ರೂ. 11,670 ರ ಮಾಸಿಕ ಪ್ಲಾನ್ಗಳಿದ್ದು, ಇವುಗಳಲ್ಲಿ ಕ್ರಮವಾಗಿ 16, 30 ಮತ್ತು 60 ನಿಮಿಷಗಳ ಉಚಿತ ಟಾಕ್ ಟೈಮ್ ಅಥವಾ ಎಸ್ ಎಂಎಸ್ ಸಿಗಲಿದೆ.

ಪ್ರಿಪೇಯ್ಡ್ ಪ್ಲಾನ್ ಗಳು: ಸರ್ಕಾರಿ ಸಂಸ್ಥೆಗಳಿಗೆ ಮಾಸಿಕ ರೂ. 3,500 ಪಾವತಿಸಿದರೆ 20 ನಿಮಿಷ ಉಚಿತ ಟಾಕ್ ಟೈಮ್ ಸಿಗುತ್ತದೆ ಅಥವಾ ವಾರ್ಷಿಕ ರೂ. 38,500 ಪಾವತಿಸಿದರೆ 240 ನಿಮಿಷ ಉಚಿತ ಟಾಕ್ ಟೈಮ್ ದೊರೆಯುತ್ತದೆ. ಅದೇ ರೀತಿ ವಾಣಿಜ್ಯ ಸಂಸ್ಥೆಗಳಿಗೆ ಮಾಸಿಕ ರೂ. 5,835 ಪಾವತಿಸಿದರೆ 30 ನಿಮಿಷ ಉಚಿತ ಟಾಕ್ ಟೈಮ್ ಸಿಗುತ್ತದೆ ಅಥವಾ ವಾರ್ಷಿಕ ರೂ. 64,185 ಪಾವತಿಸಿದರೆ 360 ನಿಮಿಷ ಉಚಿತ ಟಾಕ್ ಟೈಮ್ ಲಭ್ಯವಾಗುತ್ತದೆ.

ಹೆಚ್ಚುವರಿ ಶುಲ್ಕಗಳು: ನಿಗದಿತ ಉಚಿತ ನಿಮಿಷಗಳು ಮುಗಿದ ನಂತರ ಸರ್ಕಾರಿ ಸಂಸ್ಥೆಗಳಿಗೆ ಪ್ರತಿ ನಿಮಿಷ ಅಥವಾ ಎಸ್ಎಂಎಸ್ಗೆ ರೂ. 18 ಮತ್ತು ವಾಣಿಜ್ಯ ಸಂಸ್ಥೆಗಳಿಗೆ ರೂ. 25 ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ರೂ. 200 ರಿಂದ ರೂ. 10,000 ವರೆಗಿನ ಟಾಪ್-ಅಪ್ ರೀಚಾರ್ಜ್ಗಳನ್ನು ಸಹ ಬಿಎಸ್ಎನ್ಎಲ್ ನೀಡುತ್ತಿದೆ.

ದೂರಸಂಪರ್ಕ ಇಲಾಖೆಯ (DoT) ನಿಯಮಾವಳಿಗಳ ಪ್ರಕಾರ, ಈ ಸ್ಯಾಟಲೈಟ್ ಫೋನ್ ಪಡೆಯಲು ಗ್ರಾಹಕರು ಸಾಮಾನ್ಯ ಮೊಬೈಲ್ ಸಂಪರ್ಕದಂತೆಯೇ ಪೂರ್ಣ ಪ್ರಮಾಣದ ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಲ್ಲದೆ, ಫೋನ್ ಬಳಸುವ ಸ್ಥಳ, ಬಳಕೆಯ ಅವಧಿ ಮತ್ತು ಯಾವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿದೆ ಎಂಬ ವಿವರಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಈ ಗ್ಲೋಬಲ್ ಸ್ಯಾಟಲೈಟ್ ಫೋನ್ ಸರ್ವಿಸ್ (GSPS) ಸಂಪೂರ್ಣ ಎನ್ಕ್ರಿಪ್ಟ್ ಆಗಿರುವುದರಿಂದ ಸಂವಹನವು ಅತ್ಯಂತ ಸುರಕ್ಷಿತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Join WhatsApp

Join Now

Join Telegram

Join Now