ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜುಲೈ. 07 : ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಹಾಗೂ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತ ಸುರೇಶ್ ಬೆಳಗೆರೆ ಅವರಿಗೆ ಈ ಸಾಲಿನ ಪ್ರತಿಷ್ಠಿತ ಗಂಗಾ ಕೃಷ್ಣಾ ಸಂಸ್ಥೆ ಸೇವಾ ಮಾಣಿಕ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಹೊಸದುರ್ಗದ ಗಂಗಾ ಕೃಷ್ಣಾ ಶಿಕ್ಷಣ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಶ್ರೀರಾಮಪುರದ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ‘ಸ್ತ್ರೀ ಸಂಪದ’ ಕನ್ನಡ ಮಾಸಪತ್ರಿಕೆ ಸಂಯುಕ್ತಾಶ್ರಯದಲ್ಲಿ
ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನ ದೇವರಾಜು ಅರಸು ಅಭಿವೃದ್ಧಿ ನಿಗಮದ ಅದ್ಯಕ್ಷ ಕೀರ್ತಿ ಗಣೇಶ ತುರುಕೇರೆ ಮಾಜಿ ಶಾಸಕ ಹಾಗೂ ಮಾಜಿ ಎಂ.ಎಲ್ ಸಿ ಎಂ.ಡಿ. ಲಕ್ಷ್ಮಿ ನಾರಾಯಣ ಮತ್ತು ಗಂಗಾ ಕೃಷ್ಣ ಶಿಕ್ಷಣ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಕೋಮಲ ಕಾಚಪುರದ ರಂಗಪ್ಪ ,ಹರ್ತಿಕೊಟೆ ಮಾಲತೇಶ ಅರಸ್ ಕಾರ್ಯಕ್ರಮದಲ್ಲಿ ಗಿಡ ನಿಟ್ಟು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಭವ್ಯ ಸಮಾರಂಭದಲ್ಲಿ ಕೃಷ್ಣ ವನಸಿರಿ ವೃಕ್ಷ ಪುತ್ರ ರಾಜ್ಯ ಪ್ರಶಸ್ತಿ. ಕೃಷಿ ಕ್ಷೇತ್ರದಲ್ಲಿ ಸೇವೆಗೈದ ವಿವಿಧ ಸಾಧಕರಿಗೆ ಗಂಗಾ ಕೃಷ್ಣಶೈವ ಮಾಣಿಕ್ಯ ರಾಜ್ಯ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಮಾಧ್ಯಮ ಕ್ಷೇತ್ರ ಕಲಾಕ್ಷೇತ್ರ ಮಹಿಳಾ ಸಬಲೀಕರಣ ಕ್ಷೇತ್ರ ಸಮಾಜ ಸೇವ ಕ್ಷೇತ್ರ ಸಾಹಿತ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿತ್ತು.
ಮಾಧ್ಯಮ ಕ್ಷೇತ್ರದಿಂದ ಸುರೇಶ ಬೆಳಗೆರೆಗೆ ಪ್ರತಿಷ್ಠಿತ ಗಂಗಾ ಕೃಷ್ಣ ಸೇವ ಮಾಣಿಕ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷಿ ಕ್ಷೇತ್ರದಲ್ಲಿ ಆರ್ ದಯಾನಂದ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವಿಶೇಷ ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮದೊಂದಿಗೆ ‘ಸ್ತ್ರೀ ಸಂಪದ’ ಮಾಸಿಕ ಕನ್ನಡ ಪತ್ರಿಕೆಯ ವಾರ್ಷಿಕೋತ್ಸವದ ಸಂಭ್ರಮವನ್ನೂ ಒಳಗೊಂಡಿದೆ. ಇದೇ ವೇದಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಹಾಗೂ ಡಿ.ಫಾರೆಸ್ಟ್ ಎಂ. ಕೃಷ್ಣಮೂರ್ತಿ ಅವರ ನೆನಪಿನಲ್ಲಿ ಪರಿಸರ ಸಂರಕ್ಷಣೆಯ ಸಾಧಕರಿಗೆ ರಾಜ್ಯ ಮಟ್ಟದ ‘ಕೃಷ್ಣ ವನಶ್ರೀ ವೃಕ್ಷ ಪುತ್ರ’ ರಾಜ್ಯ ಪ್ರಶಸ್ತಿಯನ್ನು ಸಹ ವಿತರಿಸಲಾಯಿತು ಇದೆ ಸಂದರ್ಭದಲ್ಲಿ ಸಿಎಸ್ ಆರ್ ನಿಧಿ ಯೋಜನೆಯಡಿ ಉಚಿತ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಕಲಿಕಾ ಪ್ರಮಾಣ ಪತ್ರ ವಿತರಣಾ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾಚಪುರ ರಂಗಪ್ಪ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಚಲನಚಿತ್ರ ನಟ ಸಂಗಮೇಶ ಉಪಾಸೆ. ಕೇಂದ್ರ ಸೆನ್ಸರ್ ಮಂಡಳಿ ಮಾಜಿ ಅಧ್ಯಕ್ಷ ಜಯದೇವ್ ಗೋ ತಿಪ್ಪೇಸ್ವಾಮಿ ಡಾ. ಅನಂತ್ ಡಾಕ್ಟರ್ ಶೈನಿ ಗ್ರೂಪ್ ಪಾಲ್ ಸೇರಿದಂತೆ ಗಣ್ಯರು ಹಾಗೂ ಸಾಧಕರು ಇದ್ದರು

















