ಸುದ್ದಿಒನ್, ಚಳ್ಳಕೆರೆ, ಜುಲೈ. 07 : ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆಯ ಇಂಗ್ಲಿಷ್ ಉಪನ್ಯಾಕ ನಾಗರಾಜ್ ಬೆಳಗಟ್ಟ ರವರನ್ನು ಜಿಲ್ಲಾ ಸಮಿತಿ, ತಾಲೂಕಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅವಿರೋಧವಾಗಿ ಆಯ್ಕೆ ಮಾಡಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆದ ಸಭೆಯಲ್ಲಿ
ಲೋಕೇಶ್. ಎನ್, ಪ್ರಧಾನ ಕಾರ್ಯದರ್ಶಿಯಾಗಿ,
ನರಸಿಂಹಪ್ಪ ಖಜಾಂಚಿಯಾಗಿ,
ಯಶವಂತ ನಾಯ್ಕ್.ಎಲ್ ಕಾರ್ಯದರ್ಶಿಯಾಗಿ,
ಶ್ರೀಮತಿ ಶಾಂತಕುಮಾರಿ .ಬಿ ಉಪಾಧ್ಯಕ್ಷರಾಗಿ ( ಮಹಿಳೆ) ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಪ್ರಾಚಾರ್ಯರುಗಳಾದ ಕುಮಾರಸ್ವಾಮಿ,, ಭೀಮಾರೆಡ್ಡಿ, ಶ್ರೀಮಂತಕುಮಾರ್, ಚಂದ್ರಣ್ಣ, ಸೋಮಶೆಖರ್ , ಜಿಲ್ಲಾ ಸಮಿತಿಯ ಪರವಾಗಿ ಎಸ್.ಉಮೇಶ್ ಉಪನ್ಯಾಸಕರು, ಹಾಗೂ ತಾಲ್ಲೂಕಿನ ನೌಕರ ಸಂಘದ ನಿರ್ದೇಶಕರಾದ ಶ್ರೀನಿವಾಸ.ಎಂ, ಜಬೀವುಲ್ಲಾ, ಮಲ್ಲೇಶ್, ಮಂಜುನಾಥ, ಸಯಿದಾ ಬೇಗಂ, ರೇಖಾ, ಲತಾರಾಣಿಶ ಮತ್ತು ತಾಲೂಕಿನ ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.


















