ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಜೂ. 30 : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ವಾಕಾಂಕ್ಷಿ ಯೋಜನೆಯಾದ (ಪೈಲೆಟ್ ಪ್ರಾಜೆಕ್ಟ್) ಸ್ವಾಗತಾರ್ಹ ವಾಗಿದ್ದು ಆದರೆ ಇದರ ಬಗ್ಗೆ ಕೃಷಿ ಪರಿಕರ ಮಾರಾಟಗಾರರಿಗಾಗಲೀ ಮತ್ತು ರೈತರಿಗೆ ಇದರ ಬಗ್ಗೆ ಸಮರ್ಪಕವಾದ ಮಾಹಿತಿ ತಿಳಿದಿರುವುದಿಲ್ಲ. ಈ ಯೋಜನೆಯು ಕಾರ್ಯರೂಪಕ್ಕೆ ತರಲು ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿ ಕೋಟೆ ನಾಡು ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಚಿತ್ರದುರ್ಗ ನಗರದ ಕೋಟೆ ನಾಡು ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕೃಷಿ ಜಂಟಿ ನಿರ್ದೇಶಕರಿಗೂ ಹಾಗೂ ಜಿಲ್ಲಾಡಳಿತಕ್ಕೆ ಮನವಿಯಲ್ಲಿ ಸಲ್ಲಿಸಿದ ಪಧಾದಿಕಾರಿಗಳು ಹಾಗೂ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ವಾಕಾಂಕ್ಷಿ ಯೋಜನೆಯಾದ (ಪೈಲೆಟ್ ಪ್ರಾಜೆಕ್ಟ್) ಸ್ವಾಗತಾರ್ಹವಾಗಿದ್ದು ಇದರ ಬಗ್ಗೆ ಕೃಷಿ ಪರಿಕರ ಮಾರಾಟಗಾರರು ಮತ್ತು ರೈತರಿಗೆ ಇದರ ಬಗೆ ಸಮರ್ಪಕವಾದ ಮಾಹಿತಿ ತಿಳಿದಿರುವುದಿಲ್ಲ ಈ ಯೋಜನೆಯು ಕಾರ್ಯರೂಪಕ್ಕೆ ತರಲು ಕಾಲಾವಕಾಶ ನೀಡಬೇಕು, ರಾಜ್ಯದಲ್ಲಿ ಈ ಆಪ್‍ನ್ನು ಪ್ರಯೋಗಿಕವಾಗಿ ಬಳಕೆ ಮಾಡಲು ತುಮಕೂರು ಹಾಗೂ ಚಿತ್ರದುರ್ಗವನ್ನು ಆಯ್ಕೆ ಮಾಡಲಾಗಿದೆ ಆದರೆ ಹೊಸದಾಗಿ ಪಿ.ಪಿ.ಎಸ್ ಮಿಶನ್‍ಗೆ ಅಳವಡಿಸಿರುವ ಎಫ್.ಎಫ್.ಎಸ್ ಅಪ್‍ನಲ್ಲಿ ಮಾಹಿತಿಯು ಎಲ್ಲಾ ರೈತರಿಗೆ ಸಮರ್ಪಕವಾಗಿ ತಿಳಿದಿಲ್ಲ ತುಂಬಾ ಜನ ರೈತರಲ್ಲಿ ಆಂಡ್ರಾಯಿಡ್ 5ಜಿ ಮೊಬೈಲ್ ಪೋನಗಳು ಇರುವುದಿಲ್ಲ ಇದರಿಂದಾಗಿ ಪ್ರತಿ ನಿತ್ಯ ರೈತರ ಹತ್ತಿರ ಈ ವಿಚಾರವಾಗಿ ವಾಗ್ವಾದ ಮಾಡಿ ತಿಳಿ ಹೇಳಲು ಆಗದೇ ತುಂಬಾ ಕಷ್ಟವಾಗಿ ರಸಗೊಬ್ಬರವನ್ನು ಅವರ ಆಧಾರ್ ಹಾಗೂ ಮೊಬೈಲ್ ನಂಬರ್‍ಗಳನ್ನು ಪುಸ್ತಕದಲ್ಲಿ ಬರೆದು ಗೊಬ್ಬರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯದಲ್ಲೆ ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ರೈತರಿಗೆ ಗೊಬ್ಬರದ ಖರೀದಿಯು ಸುಸೂತ್ರವಾಗಿಸಲು ಈಗಿರುವ ಎಫ್.ಎಫ್.ಎಸ್ ಮೊಬೈಲ್ ಆಪ್ ಜೊತೆಗೆ ಹಳೆಯ ರಸಗೊಬ್ಬರ ಪಿ.ಓ.ಎಸ್. ಮಾರಾಟ ವ್ಯವಸ್ಥೆಯನ್ನು ಮುಂದುವರೆಸಬೇಕಿದೆ, ಎನ್.ಪಿ.ಕೆ ಮಿಶ್ರಣಗಳ ಪೂರ್ಣ ಶ್ರೇಣಿಗಳು ಹೊಸ ಎಫ್.ಎಫ್.ಎಸ್ ಮೊಬೈಲ್ ಆಪ್‍ನಲ್ಲಿ ಕಾಣಿಸುತ್ತಿಲ್ಲ ಇದರಿಂದಾಗಿ ರೈತ ತಾನು ಇಷ್ಟಪಡುವ ರಸಗೊಬ್ಬರಗಳನ್ನು ಪಡೆಯಲು ಆಗುತ್ತಿಲ್ಲ ಈ ಹಿನ್ನಲೆಯಲ್ಲಿ ಸರ್ಕಾರ ಈಗಿರುವ ಎಫ್.ಎಫ್.ಎಸ್ ಮೊಬೈಲ್ ಆಪ್ ಜೊತೆಗೆ ಹಳೆಯ ರಸಗೊಬ್ಬರ ಪಿ.ಓ.ಎಸ್. ಮಾರಾಟ ವ್ಯವಸ್ಥೆಯನ್ನು ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.
ರೈತರು ಸರ್ಕಾರ ಜಾರಿ ಮಾಡಿರುವ ಆಪ್ ಬಳಕೆಯ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಿಂದ ನಮಗೆ ಬೇಕಾದ ಗೊಬ್ಬರಗಳನ್ನು ತರುತ್ತಿದ್ದಾರೆ ಇದರಿಂದ ನಮ್ಮ ವ್ಯಾಪಾರಕ್ಕೆ ಧಕ್ಕೆಯಾಗುತ್ತಿದೆ ಈ ಹಿನ್ನಲೆಯಲ್ಲಿ ಸರ್ಕಾರ ಈ ಹಿಂದಿನ ಪದ್ದತಿಯಂತೆ ರಸ ಗೊಬ್ಬರ ಖರೀದಿಯನ್ನು ಮಾಡಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೋಟೆ ನಾಡು ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷರಾದ ನಿರಂಜನಮೂರ್ತಿ, ಉಪಾಧ್ಯಕ್ಷರಾದ ಗಂಗಾಧರ್, ಸಂಘಟನಾ ಕಾರ್ಯದರ್ಶಿ B ರಘು, ಕಾರ್ಯದರ್ಶಿ ನಾಗರಾಜ್ ಖಂಜಾಚಿ ಲಿಂಗೇಶ್, ಚಿತ್ರದುರ್ಗ ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಚಳ್ಳಕೆರೆ ಅಧ್ಯಕ್ಷ ಜಗನ್ನಾಥ್, ಹೊಳಲ್ಕೆರೆ ಅಧ್ಯಕ್ಷ ಮಂಕಾಂ ರಾಮ ಶಟ್ಟಿ ಹಿರಿಯೂರು ಅಧ್ಯಕ್ಷ ಹರ್ಷ, ಮೊಳಕಾಲಮ್ಮೂರು ಅಧ್ಯಕ್ಷ ರವಿಕುಮಾರ್ ಹೊಸದುಗರ್À ಅಧ್ಯಕ್ಷ ತ್ಯಾಗರಾಜ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











