ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 19 : ಸುಗಮ ಸಂಗೀತ ಕೇವಲ ಒಂದು ಕಲೆಯಲ್ಲ. ಅದು ಜನಜೀವನದ ಭಾವ ಪ್ರವಾಹ ಎಂದು ಹೊಸದುರ್ಗದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲರವ ಸಾಂಸ್ಕøತಿಕ ಕಲಾ ಸಂಘ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸದುರ್ಗದ ರಂಗಾಪುರ ಗೇಟ್‍ನಲ್ಲಿರುವ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಸುಗಮ ಸಂಗೀತ, ಜಾನಪದ ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾವಗೀತೆ, ಸುಗಮ ಸಂಗೀತ, ಜಾನಪದ ಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮನಸ್ಸಿನ ಭಾವಾರ್ಥದ ಜಗತ್ತನ್ನು ಸೊಗಸು ಮತ್ತು ಮಧುರತೆಯೊಂದಿಗೆ ಸಹೃದಯಿಗಳಿಗೆ ತಲುಪಿಸುವ ಮೌಲ್ಯಯುತ ಕಲಾ ಪ್ರಕಾರಗಳಾಗಿವೆ. ಇಂತಹ ಅದ್ಬುತ ಕಲೆಯನ್ನು ಮಕ್ಕಳಿಗೆ ಉಣಬಡಿಸುವ ಮೂಲಕ ಬೆಳೆಯುವ ಮನಸ್ಸುಗಳಲ್ಲಿ ಕಲೆ ಸಾಹಿತ್ಯ, ಸಂಸ್ಕøತಿಯ ಅಭಿರುಚಿಯನ್ನು ಬಿತ್ತಬೇಕಿದೆ ಎಂದರು.
ಸುಗಮ ಸಂಗೀತ ಹಾಗೂ ಜಾನಪದ ಸಂಗೀತದ ಮೂಲಕ ಕಲಾವಿದರು ಕವಿಯ ಆಶಯವನ್ನು ಮುಗ್ದ ಮನಸ್ಸುಗಳಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಅರ್ಥಪೂರ್ಣವಾದುದೆಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ತಬಲಾ ವಾದಕರಾದ ಸುಬ್ರಮಣಿ, ಓ.ಮೂರ್ತಿ ಮತ್ತು ಸಂಗಡಿಗರು, ಸರಸ್ವತಿ ಮತ್ತು ಸಂಗಡಿಗರು, ಆರ್.ಕಂಠೇಶ್ ಮತ್ತು ಸಂಗಡಿಗರು, ಪೀಲಾಪುರ ವೆಂಕಟೇಶ್ ಸಂಗಡಿಗರು ಹಾಗೂ ಇನ್ನು ಅನೇಕ ಕಲಾವಿದರು ಸುಗಮ ಸಂಗೀತ, ಜಾನಪದ ಸಂಗೀತ ಗಾಯನ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕಿ ಶಶಿಕಲಾ, ಕಲರವ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಸೌಮ್ಯ, ಅಧ್ಯಕ್ಷ ಮಂಜುನಾಥ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











