ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 17 : ಭ್ರಷ್ಟಾಚಾರವನ್ನು ಹೋಗಲಾಡಿಸುವ ಉದ್ದೇಶದಿಂದ ಯುವಜನ ಪಕ್ಷವನ್ನು ಕಟ್ಟಿದ್ದೇವೆಂದು ಸಂಸ್ಥಾಪಕ ಅಧ್ಯಕ್ಷ ನ್ಯಾಯವಾದಿ ವಿ.ಎಸ್.ಭೂತರಾಜ್ ತಿಳಿಸಿದರು.
ಬಿಜೆಪಿ. ಕಚೇರಿ ಹಿಂಭಾಗ ನೂತನವಾಗಿ ಬುಧವಾರ ಯುವಜನ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಯುವ ಸಮೂಹವನ್ನು ಸೇರಿಸಿಕೊಂಡು ಯುವ ಜನ ಪಕ್ಷವನ್ನು ರಾಜ್ಯಾದ್ಯಂತ ವಿಸ್ತರಿಸುವುದು ನಮ್ಮ ಉದ್ದೇಶ. ಹಣಬಲ, ರಾಜಕೀಯ ಹಿನ್ನೆಲೆಯಿರುವವರು ಮಾತ್ರ ರಾಜಕೀಯಕ್ಕೆ ಬರಬಹುದೆಂಬ ತಪ್ಪು ಕಲ್ಪನೆ ಜನರಲ್ಲಿದೆ. ಯುವ ಜನಾಂಗವನ್ನು ಬಳಸಿಕೊಂಡು ರಾಜಕೀಯದಲ್ಲಿ ಬೆಳೆಯುವವರೆ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಯುವ ಜನ ಪಕ್ಷವನ್ನು ವಿಭಿನ್ನವಾಗಿ ಕಟ್ಟಬೇಕೆಂಬ ಆಸೆಯಿಟ್ಟುಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಮನವಿ ಮಾಡಿದರು.
ಶಿಕ್ಷಣ, ಆರೋಗ್ಯ, ಉದ್ಯೋಗವನ್ನು ರಾಜಕಾರಣಿಗಳು ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ. ಶೇ.50 ರಷ್ಟು ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳಿಗೆ ಸೇರಿದೆ. ಹೀಗಾದರೆ ಸರ್ಕಾರಿ ಶಾಲೆಗಳು ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಭೂತರಾಜ್ ಕೋವಿಡ್ ಸಂದರ್ಭದಲ್ಲೂ ರಾಜಕಾರಣಿಗಳು ಹಣ ಲೂಟಿ ಮಾಡಿದ್ದಾರೆ. ಚುನಾವಣೆಯಿಂದ ಭ್ರಷ್ಟಾಚಾರ ಆರಂಭವಾಗುತ್ತದೆ. ಸಮಾಜದ ಉಳಿವಿಗೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಯುವ ಜನ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.
ನ್ಯಾಯವಾದಿ ಅವಿನಾಶ್ ಮಾತನಾಡಿ ಅಸ್ಪøಶ್ಯತೆ, ತಾರತಮ್ಯ, ಜೀತ ಪದ್ದತಿ ಇನ್ನು ಜೀವಂತವಾಗಿರುವ ಈ ಸಮಾಜದಲ್ಲಿ ಬದಲಾವಣೆಯನ್ನು ತರಬೇಕೆಂದು ಹೊರಟಿರುವ ಯುವ ಜನ ಪಕ್ಷ ರಾಜ್ಯಾದ್ಯಂತ ಗಟ್ಟಿಯಾಗಿ ಬೆಳೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಲಿ ಎಂದು ಹಾರೈಸಿದರು.
ನ್ಯಾಯವಾದಿ ತಿಪ್ಪೇಸ್ವಾಮಿ ಮಾತನಾಡುತ್ತ ಭೂತರಾಜ್ ಯುವ ಜನ ಪಕ್ಷ ಕಟ್ಟಿ ನಿರುದ್ಯೋಗ, ಭ್ರಷ್ಟಾಚಾರನ್ನು ಬೇರು ಸಮೇತ ಕಿತ್ತು ಹಾಕಲು ಹೊರಟಿದ್ದಾರೆ. ಅವರ
ಕನಸು ನನಸಾಗಲಿ. ರಾಜ್ಯಾದ್ಯಂತ ಪಕ್ಷ ಬೆಳೆಯಲಿ ಎಂದು ಶುಭ ಕೋರಿದರು.
ಶಿವಕುಮಾರ್ ಮಾತನಾಡಿ ನನಗೆ ರಾಜಕೀಯದಲ್ಲಿ ಬೆಳೆಯಬೇಕೆಂಬ ಆಸೆಯಿತ್ತು. ಆದರೆ ಈಡೇರಲಿಲ್ಲ. ನನ್ನ ಮಗ ಯುವ ಜನ ಪಕ್ಷ ಕಟ್ಟಿರುವುದು ಅತ್ಯಂತ ಖುಷಿಯಾಗಿದೆ. ಈಗಿನ ಕುಟುಂಬ ರಾಜಕಾರಣದಲ್ಲಿ ಬೇರೆಯವರಿಗೆ ಅವಕಾಶವಿಲ್ಲ. ಇಂತಹ ಸಂದರ್ಭದಲ್ಲಿ ಭೂತರಾಜ್ ಯುವ ಜನಾಂಗವನ್ನು ದೃಷ್ಠಿಯಲ್ಲಿಟ್ಟುಕೊಂಡು ಸ್ಥಾಪಿಸಿರುವ ಯುವ ಜನ ಪಕ್ಷಕ್ಕೆ ಎಲ್ಲರೂ ಕೈಜೋಡಿಸಿ ಎಂದು ವಿನಂತಿಸಿದರು.
ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಣ್ಣಪ್ಪ, ಅನಿಲ್ ಜಂಬೆ, ನ್ಯಾಯವಾದಿ ಪ್ರಸನ್ನಕುಮಾರ್ ಇವರುಗಳು ವೇದಿಕೆಯಲ್ಲಿದ್ದರು.
ಅಲೆಮಾರಿ ಜನಾಂಗದ ಅಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













