ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ದಂಪತಿಯ ಪುತ್ರಿ ಸಾನ್ವಿ ಸುದೀಪ್ ಅವರ ಮದುವೆ ಕುರಿತ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಿಯಾ ಸುದೀಪ್ ಮಗಳ ಭವಿಷ್ಯ, ಮದುವೆ ಹಾಗೂ ಕುಟುಂಬದ ಬಾಂಧವ್ಯದ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ.ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜಯ್ ಅಭಿನಯದ ‘ಮ್ಯಾಂಗೋ ಪಚ್ಚಿ’ ಚಿತ್ರದ ನಿರ್ಮಾಪಕಿಯಾಗಿರುವ ಪ್ರಿಯಾ ಸುದೀಪ್, ಸಂದರ್ಶನದಲ್ಲಿ ಮಗಳು ಸಾನ್ವಿ ಮದುವೆ ಕುರಿತು ಕೇಳಿದ ಪ್ರಶ್ನೆಗೆ ತಮಾಷೆಯ ಶೈಲಿಯಲ್ಲಿ ಉತ್ತರಿಸಿದ್ದಾರೆ.
“ನಾನು ಮಗಳಿಗೆ ಮದುವೆ ಮಾಡಿ ಬೇರೆ ಮನೆಗೆ ಕಳಿಸುವುದಿಲ್ಲ. ಒಂದು ವೇಳೆ ಮದುವೆ ಮಾಡಿದರೂ, ಮದುವೆಯಾಗುವ ಹುಡುಗನನ್ನೇ ಮನೆ ಅಳಿಯನಾಗಿ ಕರೆಸಿಕೊಳ್ಳುತ್ತೇನೆ” ಎಂದು ನಗುತ್ತಲೇ ಹೇಳಿದ್ದಾರೆ.ಆದರೆ ಈ ಮಾತಿನ ಹಿಂದೆ ಮಗಳ ಮೇಲಿನ ಅಪಾರ ಪ್ರೀತಿ ಅಡಗಿದೆ. “ಅವಳು ಎಲ್ಲೇ ಇದ್ದರೂ ಖುಷಿಯಾಗಿರಬೇಕು. ಅವಳ ಸಂತೋಷ ಮತ್ತು ನೆಮ್ಮದಿಯೇ ನಮಗೆ ಮುಖ್ಯ. ಅವಳು ಚೆನ್ನಾಗಿದ್ದರೆ ಸಾಕು” ಎಂದು ಪ್ರಿಯಾ ಭಾವುಕರಾಗಿ ಹೇಳಿದ್ದಾರೆ.
ಸುದೀಪ್ ಮತ್ತು ಸಾನ್ವಿ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದ ಪ್ರಿಯಾ, “ಅಪ್ಪ-ಮಗಳು ಇಬ್ಬರೂ ಸೇರಿ ನನ್ನನ್ನು ಚುಡಾಯಿಸುತ್ತಿರುತ್ತಾರೆ. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಂತೆ ಇರುತ್ತಾರೆ. ಸಾನ್ವಿ ಯಾವಾಗಲೂ ನನಗೆ ಬೆಂಬಲವಾಗಿ ನಿಂತುಕೊಳ್ಳುತ್ತಾಳೆ. ಅವಳು ನೀಡುವ ಧೈರ್ಯ ಮತ್ತು ಸಪೋರ್ಟ್ ಅಮೂಲ್ಯ” ಎಂದು ತಿಳಿಸಿದ್ದಾರೆ.ಸ್ಟಾರ್ ಕಿಡ್ ಎಂಬ ಹಣೆಪಟ್ಟಿಗೆ ಸೀಮಿತವಾಗದೆ, ಸಾನ್ವಿ ತಮ್ಮದೇ ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿದ್ದಾರೆ. ‘ಮಾರ್ಕ್ಸ್’ ಚಿತ್ರದ ಜನಪ್ರಿಯ ‘ಮಸ್ತ್ ಮಲೈಕಾ’ ಹಾಡಿನ ಮೂಲಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಿರುವ ಸಾನ್ವಿ, ತಮ್ಮ ಸಂಗೀತ ಪ್ರತಿಭೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಚಿತ್ರರಂಗದಲ್ಲಿ ನೆಪೋಟಿಸಂ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಸಾನ್ವಿಯ ಪ್ರವೇಶದ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. “ನನ್ನ ಮಗಳು ಚಿತ್ರರಂಗಕ್ಕೆ ಬಂದಿರುವುದು ನಾನು ನಟ ಎಂಬ ಕಾರಣಕ್ಕಲ್ಲ. ಅವಳಿಗೆ ಸಂಗೀತದ ಮೇಲೆ ಇದ್ದ ಆಸಕ್ತಿ ಮತ್ತು ಪ್ರತಿಭೆಯಿಂದಲೇ ಈ ಅವಕಾಶ ಸಿಕ್ಕಿದೆ” ಎಂದು ಹೇಳಿದ್ದಾರೆ.
ಸಾನ್ವಿ ತಮ್ಮ ಸ್ವಂತ ಶ್ರಮ ಮತ್ತು ಪ್ರತಿಭೆಯಿಂದಲೇ ಗುರುತಿಸಿಕೊಳ್ಳಬೇಕು ಎಂಬುದು ಕುಟುಂಬದ ಆಶಯವಾಗಿದ್ದು, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಾನ್ವಿ ಸಿದ್ಧರಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















