ಚಿತ್ರದುರ್ಗ, ಜೂನ್. 05 : ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಯೋಜನೆಯ ವಿರುದ್ಧ ಸಾರ್ವಜನಿಕರು ಹಾಗೂ ಸಂಘಟನೆಗಳು ನಡೆಸಿದ ನಿರಂತರ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಜೂನ್ 1 ರಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು ಯಶಸ್ವಿಯಾಗಿ ಆರಂಭಗೊಂಡಿದ್ದು, ಶಾಲೆಯತ್ತ ಮುಖ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಎಐಡಿಎಸ್ಓ (AIDSO) ಹಾಗೂ ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ಯ ಕಾರ್ಯಕರ್ತರು ಜಿಲ್ಲಾದ್ಯಂತ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಇಡೀ ರಾಜ್ಯಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರುದ್ಧ ಹೋರಾಟ ಕಳೆದ 5 ತಿಂಗಳನಿಂದ ಚಿತ್ರದುರ್ಗ ಸೇರಿದಂತೆ ರಾಜ್ಯ ವ್ಯಾಪಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಜನರ ತೀವ್ರ ವಿರೋಧ ನಡುವೆಯೊ ರಾಜ್ಯ ಸರ್ಕಾರವು ತನ್ನ ಹಟಮಾರಿ ಧೋರಣೆ ಬಿಡದೆ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಇದರ ವಿರುದ್ಧ ಪೋಷಕರು ಜನರ ನಡುವೆ ಆಕ್ರೋಶ ತೀವ್ರವಾಗಿದ್ದು, ಇನ್ನೊಂದು ಹೋರಾಟಕ್ಕೆ ಮುಂದೆ ಬರುತ್ತಿದ್ದಾರೆ.
ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಸಮಾವೇಶದಲ್ಲಿ ಸಾವಿರಾರು ಜನಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ನಂತರ ಇಡಿ ಕರ್ನಾಟಕದಲ್ಲಿ ಮನೆಮನೆಯಿಂದ ಪತ್ರಗಳನ್ನು ಬರೆದು ಪೋಸ್ಟ್ ಮಾಡುವುದು, ಗ್ರಾಮ ಪಂಚಾಯಿತಿ (ಪಿಡಿಒ) ಹಾಗೂ (ಬಿಒ) ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುವುದು, ಶಾಲೆಯ ಮುಂದೆ ಬ್ಯಾನರ್ ಕಟ್ಟುವುದು, ಹೀಗೆ ಮುಂತಾದ ಕಾರ್ಯ ಚಟುವಟಿಕೆಗಳು ವ್ಯಾಪಕವಾಗಿ ನಡೆದ ಕಾರಣ ಸರ್ಕಾರವು ತಾವು ಹೇಳಿದ ಹಾಗೆ ಜೂನ್ ತಿಂಗಳಿಂದಲೇ ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯುತ್ತವೆ ಎಂಬ ನಿರ್ಧಾರವನ್ನು ಸಡಿಲಗೊಳಿಸಿ, ಪ್ರತಿ ಹಳ್ಳಿಯಲ್ಲಿ ಇರುವಂತ ಎಲ್ಲಾ ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಿದ್ದಾರೆ, ಜೂನ್ 1 ರಿಂದ ಸರ್ಕಾರಿ ಶಾಲೆಗಳು ಪ್ರಾರಂಭವಾಗಿದ್ದು ಪ್ರತಿ ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಖುಷಿಯಿಂದ ಮರಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಎ ಐ ಡಿ ಎಸ್ ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಮುಖಂಡರಾದ ಈರಣ್ಣ ಅವರು ಶಾಲೆಗೆ ಹೋಗಿ ವಿದ್ಯಾರ್ಥಿಗಳನ್ನು ಸ್ವಾಗತಿಸುವುದರ ಮೂಲಕ ಬರಮಾಡಿಕೊಂಡು ಜೊತೆಗೆ ಎಲ್ಲಾ ಮಕ್ಕಳ ಪೋಷಕರಿಗೂ ಹಳ್ಳಿ ಸಮಿತಿಗಳಿಗೆ ಇನ್ನೂ ಸರ್ಕಾರದಿಂದ ಅಧಿಕೃತವಾಗಿ ನಮ್ಮ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಅದರ ಬದಲು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಎಲ್ಲಾ ಕಡೆ ಪ್ರಾರಂಭಿಸುವುದಾಗಿ ಸರ್ಕಾರವು ಘೋಷಣೆ ಮಾಡಿದೆ, ಹಾಗಾಗಿ ಹೋರಾಟದ ಒತ್ತಡದಿಂದ ಶಾಲೆ ಪ್ರಾರಂಭವಾಗಿದೆ, ವಿಲೀನ ಪ್ರಕ್ರಿಯೆ ಸಂಪೂರ್ಣವಾಗಿ ಕೈ ಬಿಡುವವರೆಗೂ, ಈ ಶಾಲೆ ವಿಲೀನಗೊಳ್ಳದಂತೆ ರಕ್ಷಿಸಿ ಬಲಪಡಿಸುವ ನಮ್ಮ ಸಂಘಟಿತ ಪ್ರಯತ್ನ ಮುಂದುವರಿಯುತ್ತದೆ ಎಂದು ಜನಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಮುತ್ತಯ್ಯನಹಟ್ಟಿ, ಗೋನೂರು, ಗಂಜಿಗಟ್ಟೆ, ಕಳ್ಳಿಹಟ್ಟಿ ಗೊಲ್ಲರಹಟ್ಟಿ, ಹಾಗೂ ಮಾನಂಗಿ ಹಾಗೂ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷರು ಸುಜಾತಾ, ಗಂಜಿಗಟ್ಟೆ ಮಂಜಣ್ಣ, ಸದಸ್ಯರು ಸಿದ್ದೇಶ್, ಮಂಜುನಾಥ, ಈಶ್ವರಪ್ಪ ಚೌಡಮ್ಮ ಮತ್ತು ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.









