Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಗಣಿಗಾರಿಕೆ ಧೂಳಿಗೆ ಕಂಗಾಲಾದ ರೈತರು; ರೈಲ್ವೆ ಮೂಲಕ ಅದಿರು ಸಾಗಣೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ

---Advertisement---

ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ. ಎಂ.
ಭೀಮಸಮುದ್ರ, ಚಿತ್ರದುರ್ಗ (ತಾ)
ಮೊ : 8088076203

ಸುದ್ದಿಒನ್, ಚಿತ್ರದುರ್ಗ, ಜೂನ್‌. 01 : ನಾವು ಗಣಿಗಾರಿಕೆ ವಿರೋಧಿಗಳಲ್ಲ, ರಸ್ತೆ ಮಾರ್ಗವನ್ನು ಬಿಟ್ಟು ರೈಲ್ವೆ ಸಂಚಾರದ ಮೂಲಕ ಸಾಗಿಸಿದರೆ ಸಾರ್ವಜನಿಕರು ನೆಮ್ಮದಿಯಾಗಿರುತ್ತಾರೆ. ಸುತ್ತಮುತ್ತಲಿನ ಸುಮಾರು 15 ರಿಂದ 20 ಹಳ್ಳಿಗಳು ಗಣಿಯಿಂದ ಬರುವ ಧೂಳು ತೆಂಗು, ಅಡಿಕೆ, ಬಾಳೆ, ಸೇವಂತಿಗೆ ಹೂವು ಕನಕಾಂಬರ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಭೂತಾಯಿಯನ್ನು ನಂಬಿಕೊಂಡಿರುವ ರೈತರು ಕಂಗಾಲಾಗಿದ್ದಾರೆ. ಸುತ್ತಮುತ್ತಲನ ಹಳ್ಳಿಗಳಲ್ಲಿ ಅದೆಷ್ಟೋ ಜನ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ. ರಸ್ತೆಯಲ್ಲಿ ಶಾಲೆಗೆ ಓಡಾಡುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ್ ಹೇಳಿದರು.

ತಾಲ್ಲೂಕಿನ ಭೀಮಸಮುದ್ರ ಗ್ರಾಮದಿಂದ ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನರ್ಚೇತನ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಭೀಮಸಮುದ್ರ ರೈತ ಸಂಘ, ಕೆ ಆರ್ ಎಸ್ ಪಕ್ಷ ವತಿಯಿಂದ ರೈತರು ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಬೆಳಗ್ಗೆ 7:00 ಗಂಟೆಗೆ ಹೊರಟ ಪಾದಯಾತ್ರೆ V. ಪಾಳ್ಯ ಗ್ರಾಮದಿಂದ ಭೀಮಸಮುದ್ರ ಬೊಮ್ಮೇನಹಳ್ಳಿ ಹಿರೇಗುಂಟನೂರು ಹಳಿಯೂರು ಮಾನಂಗಿ ಸಿದ್ದಾಪುರ ಮಾಳಪ್ಪನಟ್ಟಿ ಮಾರ್ಗವಾಗಿ ಚಿತ್ರದುರ್ಗದ ಜಿಲ್ಲಾ ಅಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ನಡೆಸಿದರು.

ನಾವು ಗಣಿಗಾರಿಕೆ ವಿರೋಧಿಗಳಲ್ಲ, ರಸ್ತೆ ಮಾರ್ಗವನ್ನು ಬಿಟ್ಟು ರೈಲ್ವೆ ಸಂಚಾರದ ಮೂಲಕ ಸಾಗಿಸಿದರೆ ಸಾರ್ವಜನಿಕರು ನೆಮ್ಮದಿಯಾಗಿರುತ್ತಾರೆ. ಸುತ್ತಮುತ್ತಲಿನ ಸುಮಾರು 15 ರಿಂದ 20 ಹಳ್ಳಿಗಳು ಗಣಿಯಿಂದ ಬರುವ ಧೂಳು ತೆಂಗು, ಅಡಿಕೆ, ಬಾಳೆ, ಸೇವಂತಿಗೆ ಹೂವು ಕನಕಾಂಬರ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಭೂತಾಯಿಯನ್ನು ನಂಬಿಕೊಂಡಿರುವ ರೈತರು ಕಂಗಾಲಾಗಿದ್ದಾರೆ. ಸುತ್ತಮುತ್ತಲನ ಹಳ್ಳಿಗಳಲ್ಲಿ ಅದೆಷ್ಟೋ ಜನ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ. ರಸ್ತೆಯಲ್ಲಿ ಶಾಲೆಗೆ ಓಡಾಡುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು

ಗಣಿ ಕಂಪನಿಗಳಿಂದ ಬಂದ ಹಣದಿಂದ ಯಾವುದೇ ರೀತಿಯ ಹಳ್ಳಿಗಳಿಗೆ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ಗಣಿ ಇದೆ ಅಷ್ಟೇ ಸುತ್ತಮುತ್ತಲಿನ ಅನೇಕ ನಿರುದ್ಯೋಗಿ ಯುವಕರು ಇದ್ದು ಬೇರೆ ರಾಜ್ಯಗಳ ಸಿಬ್ಬಂದಿಯನ್ನು ಕರೆತಂದು ಇಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇರುವ ಯುವಕರಿಗೆ ಉದ್ಯೋಗ ನೀಡಬೇಕು ಒತ್ತಾಯಿಸಿದರು. ಹಲವು ಬಾರಿ ಇದರ ಬಗ್ಗೆ ಹೋರಾಟ ನಡೆಸಿದರು ಯಾರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಕರ್ನಾಟಕ ರಾಜ್ಯದಾದ್ಯಂತ ಅನೇಕ ರೈತ ಸಂಘಟನೆಗಳು ಪಾಲ್ಗೊಂಡು , ಹೆಚ್ಚಿನದಾಗಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಭೀಮಸಮುದ್ರ ರೈತ ಸಂಘದ ಅಧ್ಯಕ್ಷರಾದ ಶಂಕರ ಮೂರ್ತಿ ಮಾತನಾಡಿ, ಹಲವು ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇಂದು ರೈತರು ಹಾಗೂ ಗ್ರಾಮಸ್ಥರು ಸೇರಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಹೋಗುತ್ತಿದ್ದೇವೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ತುಮಕೂರು , ಬಳ್ಳಾರಿ ಕೆಆರ್‌ಎಸ್ ಪಕ್ಷದವರು, ರೈತ ಮುಖಂಡರುಗಳು ಹಾಗೂ ಹೋರಾಟದವರು ಪಾಲ್ಗೊಂಡಿದ್ದರು.

ಪುನಶ್ಚೇತನ ಹೋರಾಟ ಸಮಿತಿಯ ಸದಸ್ಯರಾದ ವಸಂತ್ ಕುಮಾರ್ ಮಾತನಾಡಿ, ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಒತ್ತು ಕೊಡುತ್ತಿಲ್ಲ, ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಮಕ್ಕಳು, ವೃದ್ಧರು ಬಹಳಷ್ಟು ಆರೋಗ್ಯದ ಸಮಸ್ಯೆಯಿಂದ ನರಳುತ್ತಿದ್ದಾರೆ. ಪಾದಯಾತ್ರೆಯಲ್ಲಿ ಸುಮಾರು 21 ಹಕ್ಕುಗಳನ್ನು ಪ್ರಸ್ತಾವನೆ ಮಾಡಿದ್ದೇವೆ. ಇದರ ಸರ್ಕಾರ ಗಮನ ಹರಿಸಬೇಕು. ನಾವು ಯಾವುದೇ ರೀತಿಯ ಗಣಿಗಾರಿಕೆ ಮಾಡಲು ವಿರೋಧ ಮಾಡುತ್ತಿಲ್ಲ. ಸಾರ್ವಜನಿಕರ ಹಿತಾಶಕ್ತಿಯನ್ನು ಕಿತ್ತುಕೊಳ್ಳುವ ಗಣಿಗಾರಿಕಾ ಕಂಪನಿಗಳ ವಿರುದ್ಧ ಹೋರಾಟವಷ್ಟೇ. ಆದರೆ ಇಲ್ಲಿ ಬಹುತೇಕ ಸಮಸ್ಯೆಗಳಿದ್ದರೂ ಕೂಡ ಯಾರು ಗಮನಹರಿಸದಿರುವುದರ ಕಾರಣ ನಾವು ಈ ಪಾದಯಾತ್ರೆಯಲ್ಲಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಆಂಬುಲೆನ್ಸ್ ವ್ಯವಸ್ಥೆ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದ ನಡೆಯದಂತೆ ವ್ಯವಸ್ಥೆ ಮಾಡಲಾಗಿತ್ತು. ರೈತರು ಹಾಗೂ 300 ರಿಂದ 400 ಮಂದಿ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now