ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 02 : ರಕ್ತದಾನ ಅತಿ ಅಮೂಲ್ಯವಾದುದು. ಸಾವು-ಬದುಕಿನ ನಡುವೆ ಹೋರಾಡುತ್ತಿರುವವರಿಗೆ ರಕ್ತದ ಅವಶ್ಯಕತೆಯಿರುತ್ತದೆಂದು ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನ್ಮದಿನದ ಪ್ರಯುಕ್ತ ಬುರುಜನಹಟ್ಟಿಯಲ್ಲಿ ಫೋರ್ಟ್ ಲಯನ್ಸ್ ರಕ್ತ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಹದಿನೆಂಟರಿಂದ 60 ವರ್ಷದೊಳಗಿನ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆಯಾದರು ರಕ್ತ ನೀಡಬೇಕು. ರಕ್ತದಾನ ಮಾಡುವುದರಿಂದ ನಿಶ್ಯಕ್ತಿಯಾಗುತ್ತದೆಂಬ ತಪ್ಪು ಕಲ್ಪನೆ ಸರಿಯಲ್ಲ ಎಂದು ಹೇಳಿದರು.
ನ್ಯಾಯವಾದಿ ಮುಸ್ತಾಫ ಮಾತನಾಡಿ ಅಪಘಾತ, ಹೆರಿಗೆ, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿದ್ದು, ಎಲ್ಲರೂ ಸ್ವಇಚ್ಚೆಯಿಂದ ರಕ್ತದಾನ ಮಾಡಿ ಅಮೂಲ್ಯವಾದ ಜೀವ ಉಳಿಸುವಂತೆ ಮನವಿ ಮಾಡಿದರು.
ನ್ಯಾಯವಾದಿಗಳಾದ ನವಿಲೆಹಾಳ್ ನಟರಾಜ್, ಸುರೇಶ್, ರಾಜೀವ್, ರಾಜಪ್ಪ, ಅಶೋಕ್ಬೆಳಗಟ್ಟ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಮ ನಿರ್ದೇಶಿತ ಸದಸ್ಯ ಪ್ರಶಾಂತ್ ಕೂಲಿಕಾರ್, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಜೇಂದ್ರ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯಾಧ್ಯಕ್ಷ ರಂಗಸ್ವಾಮಿ, ಕೋಡೇನಹಟ್ಟಿ ನಾಗೇಂದ್ರಪ್ಪ, ನವೀನ್, ಜಯಸೂರ್ಯ, ಚೇತನ್, ನಾಗರಾಜ್, ಕುಮಾರ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.










