ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 02 : ಈ ವರ್ಷ ಬರ, ಬೇಸಿಗೆ ಧಗೆಯ ಮಧ್ಯೆ ಪ್ರಾಣಿ ಹಾಗೂ ಪಕ್ಷಿಗಳು ಎದುರಿಸುತ್ತಿರುವ ಸಮಸ್ಯೆ ಅರಿತು ಸಾರ್ವಜನಿಕರು ಪಕ್ಷಿ, ಪ್ರಾಣಿ ಪ್ರೀಯರು ಅಲ್ಲಲ್ಲಿ ನೀರು, ಕಾಳಿನ ವ್ಯವಸ್ಥೆ ಕಲ್ಪಿಸಿ ಪಕ್ಷಿ ಸಂಕುಲವನ್ನು ಉಳಿಸುವಂತೆ ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷ ಅಪರ್ಣ ದೇವೆಂದ್ರಪ್ಪ ಮನವಿ ಮಾಡಿದ್ದಾರೆ.

ನಗರದ ಚಿತ್ರದುರ್ಗ ರಸ್ತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇಂದು ಇನ್ನರ್ವಿಲ್ ಕ್ಲಬ್ ವತಿಯಿಂದ ಪಕ್ಷಿಗಳಿಗೆ ಕಾಳು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಉದ್ಯಾನವನದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ನಂತರ ಅವರು ಮಾತನಾಡಿದರು.
ಈಗಾಗಲೆ ಮಳೆಗಾಲ ವಾದರೂ ಮಳೆ ಬಾರದೆ ನೀರಿನ ತಾಣಗಳಾದ ಕೆರೆ .ಕಟ್ಟೆ. ಗೋಕಟ್ಟೆ ಸೇರಿದಂತೆ ಎಲ್ಲೂ ನೀರು ಸಿಗುತ್ತಿಲ್ಲಾ ಇಂದರಿಂದ ಪ್ರಾಣಿ ಪಕ್ಷಿಗಳ ಸಾವನ್ನಪ್ಪುತ್ತಿದ್ದು ಇದರಿಂದ ಪಕ್ಷೀಯ ಸಂಕುಲ ಕ್ಷೆಣಿಸುತ್ತಿದೆ.. ಮಾನವರಾದ ನಾವು ಇದನ್ನು ಅರಿತು. ಮನೆಯ ಮೇಲೆ ಕಾಂಪೌಂಡ್ ಮೇಲೆ ಮನೆಯ ಮುಂದೆ ಪಕ್ಷಿಗಳು ಇರುವಂತಹ ಗಿಡ ಗಳನ್ನು ಗುರುತಿಸಿ ಇಂತಹ ಸ್ಥಳಗಳಲ್ಲಿ ನೀರು ಕಾಳುಗಳನ್ನು ಇಡುವ ಮೂಲಕ ಅಳಿದುಳಿದ ಪಕ್ಷಗಳ ಸಂಕುಲವನ್ನು ಉಳಿಸಬೇಕಿದೆ. ನಾವು ಎಲ್ಲ ಕಡೆನೂ ನೀರು ಇಡಲಾಗದು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರು ಅವಕಾಶ ಸಿಗು ಕಡೆ ನೀರು ಕಾಳು ವ್ಯವಸ್ಥೆ ಮಾಡಿದರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ.
ಪ್ರಮುಖ್ಯವಾಗಿ ಈಗ ಈ ನಗರದಲ್ಲಿ ಇರುವುದು ಒಂದೇ ಉದ್ಯಾನವನ ವೃಕ್ಷ ಮಾತೇ ಸಾಲುಮರದ ತಿಮ್ಮಕ್ಕ ಉದ್ಯಾನವನ ಉದ್ಯಾನವನಕ್ಕೆ ಬರುವಂತಹ ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲಿ,ಪ್ಲಾಸ್ಟಿಕ್ ಕವರ್ ಕಸದ ತ್ಯಾಜ್ಯವನ್ನ ಎಲ್ಲಂದರೆ ಹಾಕ ಇಲ್ಲಿನ ಸುಂದರ ಪರಿಸರವನ್ನ ಹಾಳು ಮಾಡದಿರಿ.. ಕಸದ ತ್ಯಾಜ್ಯವನ್ನು ಹಾಕಲು ಕೆಲವು ಕಡೆ ಕಸದ ಬುಟ್ಟಿಗಳನ್ನು ಇಡಲಾಗಿದೆ.ನೀವು ತಂದಂತಹ ಪ್ಲಾಸ್ಟಿಕ್ ಬಾಟಲಿ ಕವರ್ ಎಲ್ಲವನ್ನ ಕಸದ ತೊಟ್ಟಿ ಒಳಗೆ ಹಾಕಿ ಪರಿಸರವನ್ನ ಸ್ವಚ್ಛವಾಗಿ ಇಡಲು ಪ್ರಯತ್ನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇನ್ನರ್ವಿಲ್ ಕ್ಲಬ್ ನ ಖಜಾಂಚಿ ಡಾ. ಕವಿತಾ ನಾಗೇಶ್ ಮಾತನಾಡಿ, ಮಾನವನ ಆಹಾರ ಸರಪಳಿಯಲ್ಲಿ ಪ್ರಾಣಿ-ಪಕ್ಷಿಗಳ ಪ್ರಮುಖ ಪಾತ್ರವಿದೆ. ಇಂತಹ ಪ್ರಾಣಿ ಪಕ್ಷಿ ಉಳಿವಿಗಾಗಿ ನೀರು ಕಾಳು ಆಹಾರಗಳನ್ನು ಇಡುವ ಮೂಲಕ. ಪ್ರಾಣಿ ಪಕ್ಷಿಗಳ ಸಂಕುಲನ ಉಳಿಸಬೇಕಿದೆ..
ಈಗ ನಗರದಲ್ಲಿ ಸಾಕಷ್ಟು ಕೋತಿಗಳು ಆಹಾರಕ್ಕಾಗಿ ಮನೆ ಒಳಗೆ ನುಗ್ಗುತ್ತಿವೆ. ಮನೆಯ ಮೇಲೆ ಅವುಳಿಗಾಗಿನೇ ನೀರು ಆಹಾರ ಹಣ್ಣುಗಳ ಇಟ್ಟರೆ ಅವುಗಳನ್ನು ತಿಂದು ಜೀವ ಉಳಿಸಿಕೊಳ್ಳುತ್ತವೆ ಎಂದರು.
ಶುಭಸೋಮುಶೇಖರ್ ಮಾತನಾಡಿ, ಕಳೆದ ವರ್ಷವೂ ಸಹ ಇದೇ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು ಒಂದು ತಿಂಗಳ ವರೆಗೂ ನಾವು ಬಂದು ನೀರು ಕಾಳಿಗಳನ್ನು ಹಾಕುತ್ತಿದ್ದೆವು. ಇಂದು ಸಹ ಇದೇ ರೀತಿಯಾಗಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ನೀರು ಕಾಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಕ್ಲಬ್ ನ ಕಾರ್ಯದರ್ಶಿ ಡಾ. ವಿದ್ಯಾಐತಾಳ್ ಸದಸ್ಯರಾದ ನೀನಾ ವಿನಯ ಕುಮಾರ್. ಮೀರಾ ರಮೇಶ್ ನಳಿನ ಬಾಬು ಯತೀಶ್ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಇದ್ದರು..












