Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಶ್ವ ಪರಿಸರ ದಿನಾಚರಣೆ | ಮೇ 30 ರಿಂದ ಜೂನ್ 05 ರವರೆಗೂ ಸಸಿ ನೆಡುವ ಸಪ್ತಾಹ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 28 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ. ವಿದ್ಯಾಪೀಠ, ಎಸ್.ಜೆ.ಎಂ. ಯುನಿವರ್ಸಿಟಿ ಹಾಗು ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನದ ಅಂಗವಾಗಿ ದಿನಾಂಕ 30.05.2026 ರಿಂದ 05.06.2026ರವರೆಗೆ 7 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 7.00 ಗಂಟೆಗೆ ಚಿತ್ರದುರ್ಗ ನಗರ ಹಾಗು ಸುತ್ತಮುತ್ತಲಿನ ಆಯ್ದ ಸ್ಥಳಗಳಲ್ಲಿ ಸಸಿ ನಡೆವ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

 

ಮೇ 30 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಲಕ್ಷ್ಮೀಸಾಗರ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀರು ಮತ್ತು ಪರಿಸರ ವಿಷಯ ಕುರಿತು ಚಿಂತನೆ ನಂತರ ಸಸಿ ನೆಡುವ ಕಾರ್ಯಕ್ರಮ.

ಮೇ.31 ರಂದು ನಗರದ ಜೋಗಿಮಟ್ಟಿ ಗೇಟ್ ಬಳಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಿಸರಕ್ಕಾಗಿ ಜೀವನಶೈಲಿ ಬದಲಾವಣೆ ವಿಷಯ ಚಿಂತನೆ ಹಾಗು ಸಸಿಗಳನ್ನು ನೆಡಲಾಗುವುದು.

ಜೂನ್ 01 ರಂದು ಬಾಪೂಜಿ ಸಮನ್ವಯ ಪ್ರೌಢಶಾಲೆ, ಮಲ್ಲಾಪುರ, ಎನ್.ಹೆಚ್. 50, ಚಿತ್ರದುರ್ಗ ಇಲ್ಲಿ ನಡೆಯಲಿದ್ದು ವಾಯು ಮಾಲಿನ್ಯ ಕುರಿತ ವಿಷಯ ಚಿಂತನೆ ನಂತರ ಗಿಡಗಳನ್ನು ನೆಡಲಾಗುವುದು.

ಜೂನ್‌ 02 ರಂದು ಪ್ಲಾಸ್ಟಿಕ್‍ನ ದುಷ್ಪರಿಣಾಮಗಳು ವಿಷಯ ಕುರಿತು ಚಿಂತನೆ ಮತ್ತು ಗಿಡ ನೆಡುವ ಕಾರ್ಯಕ್ರಮ ಕೆ.ಪಿ.ಟಿ.ಸಿ.ಎಲ್. ವಿದ್ಯುತ್ ವಿತರಣಾ ಕೇಂದ್ರ, ಜಾನುಕೊಂಡ ಇಲ್ಲಿ ನಡೆಯಲಿದೆ.

ಜೂನ್‌ 03 ರಂದು ಜೋಗಿಮಟ್ಟಿ ರಸ್ತೆಯ ಅನ್ನಪೂರ್ಣೇಶ್ವರಿ ದೇವಾಲಯ ಹತ್ತಿರ ಗಿಡ ನೆಡುವ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಕುರಿತು ಚಿಂತನೆ ನಡೆಯಲಿದೆ.

ಜೂನ್ 04 ರಂದು ಶ್ರೀ ಸಾಯಿ ಲೇಔಟ್, ಕವಾಡಿಗರಹಟ್ಟಿ, ರಾಜೀವಗಾಂಧಿ ಆಶ್ರಯ ಬಡಾವಣೆ, ಚಿತ್ರದುರ್ಗ ಇಲ್ಲಿ ಪಂಚಭೂತಗಳು ಹಾಗೂ ಪರಿಸರ ವಿಷಯ ಚಿಂತನೆ ಮತ್ತು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಜೂನ್‌ 05 ರಂದು ಶೀಬಾರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳವರ ಸ್ಮರಣಾರ್ಥ ನಡೆಯುವ ಜಾತ್ರಾ ಪ್ರದೇಶದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಣ್ಣಿನ ಉಳಿವು ವಿಷಯ ಚಿಂತನೆ ಹಾಗು ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವಿಷಯ ಚಿಂತಕರು, ವಿವಿಧ ಸಮಾಜ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now